1. isbn 979-8-88572-096-0
Page 1
Content: -ಪರಮಹಂಸ ನಿತ್ಯಾನಂದ- ಪ್ರೀತಿಯ ಅನ್ವೇಷಣೆ ('Discovering Love' in Kannada) 'ಸಾಧಾರಣ ಪ್ರೀತಿಯು ವಿಭಜಿಸುತ್ತದೆ; ದೈವಿಕ ಪ್ರೀತಿಯು ಒಗ್ಗೂಡಿಸುತ್ತದೆ.' -ಪರಮಹಂಸ ನಿತ್ಯಾನಂದ ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ ಮುದ್ರಣಾಲಯದಿಂದ ಪ್ರಕಟಿತ (ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ, ಯು.ಎಸ್.ಎ. ಯ ಒಂದು ವಿಭಾಗ) Ebook ISBN: 979-8-88572-096-0
Page 2
Content: ಪ್ರಪಂಚದಾದ್ಯಂತ ನಿತ್ಯಾನಂದ ಪಂಥದ ಸ್ವಾಮಿಗಳಿಗೆ ಮತ್ತು ಆನಂದ ಸಮಾಜಿಯರಿಗೆ ನೀಡಲಾದ ಪ್ರವಚನಗಳು
Content: ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ
Content: ಮುದ್ರಣಾಲಯದಿಂದ ಪ್ರಕಟಿತ
Content: (ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ, ಯು.ಎಸ್.ಎ.ಯ ಒಂದು ವಿಭಾಗ)
Page 3
Content: ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ ಮುದ್ರಣಾಲಯದಿಂದ ಪ್ರಕಟಿತ
Content: (ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ, ಯು.ಎಸ್.ಎ ಯ ಒಂದು ವಿಭಾಗ)
Content: © : 2007
Content: ಮೊದಲ ಆವೃತ್ತಿ: 2004
Content: ಎರಡನೇ ಆವೃತ್ತಿ: ಡಿಸೆಂಬರ್ 2007
Content: Ebook ISBN: 979-8-88572-096-0
Content: ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ.
Content: ಈ ಪ್ರಕಟಣೆಯ ಯಾವುದೇ ಭಾಗವನ್ನು ನಕಲು ಮಾಡುವುದಾಗಲೀ ಅಥವಾ ಮರಳಿ ಹೊಂದುವಂತಹ ವ್ಯವಸ್ಥೆಯಲ್ಲಿ ಸಂಗ್ರಹಿಸುವುದಾಗಲೀ ಅಥವಾ ಯಾವುದೇ ರೂಪದಲ್ಲಿ ಅಥವಾ ವಿಧಾನದಲ್ಲಿ ಎಲೆಕ್ಟಾನಿಕ್, ಯಾಂತ್ರಿಕವಾಗಿ, ಫೋಟೋ ಕಾಪಿಯಿಂಗ್, ರಿಕಾರ್ಡಿಂಗ್ ಅಥವಾ ಇನ್ನಿತರ ವಿಧಾನದಲ್ಲಿ ರವಾನಿಸುವುದಾಗಲೀ ಪ್ರಕಾಶಕ ಲಿಖಿತ ಅನುಮತಿ ಇಲ್ಲದೆ ಮಾಡಕೂಡದು.
Content: ಒಂದು ವೇಳೆ ನೀವು ಈ ಪ್ರಕಟಣೆಯ ಯಾವುದೇ ಮಾಹಿತಿಯನ್ನು ನಿಮಗಾಗಿ ಬಳಸಿಕೊಂಡರೆ ಲೇಖಕರಾಗಲೀ ಮತ್ತು ಪ್ರಕಾಶರಾಗಲೀ ನಿಮ್ಮ ಕೃತ್ಯಗಳಿಗೆ ಹೊಣೆಯನ್ನು ಹೊರುವುದಿಲ್ಲ. ಈ ಪುಸ್ತಕದ ಮಾರಾಟದಿಂದ ಬರುವ ಎಲ್ಲಾ ಆದಾಯವು ಉದಾರ ಕಾರ್ಯಗಳನ್ನು ಬೆಂಬಲಿಸುವುದಕ್ಕಾಗಿ ವಿನಿಯೋಗವಾಗುತ್ತದೆ.
Content: ಭಾರತದಲ್ಲಿ ಮುದ್ರಣ: ಆದಿತ್ಯ ಪ್ರಿಂಟರ್ಸ್, ದೂ: 2660 6776
Content: -ಪರಮಹಂಸ ನಿತ್ಯಾನಂದ-
Content: ಪ್ರೀತಿಯ ಅನ್ವೇಷಣೆ
Page 4
Content: ಬಹಳ ಸರಳವಾದ ಪ್ರಶ್ನೆ ಎನಿಸುವುದಲ್ಲವೇ? ಆದರೆ ಎಷ್ಟು ಆಟಮಟಿಸುವ ಪ್ರಶ್ನೆ! ಈ ಪ್ರಶ್ನೆಯು ನಿಮ್ಮನ್ನು ಎಷ್ಟು ಆಳಕ್ಕೆ ಕೊಂಡೊಯ್ಯುವುದೆಂದು ಗಮನಿಸಿ. ಸಾಮಾನ್ಯವಾಗಿ ನಾವು ಯಾವುದನ್ನು ಪ್ರೀತಿ ಎಂದು ಕರೆಯುತ್ತೇವೋ ಅದು ಕೇವಲ ನಮ್ಮ ಶರೀರದ ಅಂತಃಸ್ರಾವಗಳ (hormones) ಒಂದು ತುಂಟಾಟ. ಅದು ಮನುಷ್ಯನ ಲೋಭ, ಬಯಕೆ, ಕೋಪ ಮತ್ತು ಹೊಟ್ಟೆಕಿಚ್ಚಿನ ಭಾವನೆಗಳ ಕುಲಗೆಳ್ಳ ಮೇಲೆ ಕಾರ್ಯ ಮಾಡುವುದು. ಈ ರೀತಿ ಪ್ರೀತಿಸುವುದು, ನಮ್ಮ ಮನಸ್ಸು ಮತ್ತು ಅಂತಃಸ್ರಾವಗಳು ಉಂಟು ಮಾಡಿದ ಹಾವಳಿಗೆ ಆಹುತಿ ಆಗಿರುವುದು, ಅವಶ್ಯಕವಾಗಿ ನರಕದಲ್ಲಿರುವ ಸಮಾನ! ಆದರೆ ನಮ್ಮಲ್ಲಿ ಹೆಚ್ಚಿನವರಿಗೆ ತಮ್ಮ ಜೀವನದ ಸ್ವಾರ್ಥಪರ ರೂಪದ ಸಣ್ಣ ಪುಟ್ಟ, ಅಲ್ಪ ಸ್ವಲ್ಪ ಪ್ರೀತಿಯ ಪರಸ್ಪರ ಕೊಟ್ಟು ತೆಗೆದುಕೊಳ್ಳುವುದನ್ನು ಮೀರಿ ಬೇರೆ ಕಲ್ಪನೆಯೇ ಇಲ್ಲ. ಪ್ರೀತಿಯ ನಿಜವಾದ ಅರ್ಥವನ್ನು ತಿಳಿದುಕೊಳ್ಳುವುದಕ್ಕೆ ಮುಂಚೆ ನಾವು ಮನುಷ್ಯನ ಸ್ವಭಾವವನ್ನು ಚೆನ್ನಾಗಿ ಅರ್ಥ ಮಾಡಿ ಕೊಳ್ಳಬೇಕು. ಬುದ್ಧಿ, ಶಕ್ತಿ, ಮನೋಭಾವ ಮತ್ತು ಅಂತರಂಗದಿಂದ ರಚಿತವಾಗಿರುವ ಮನುಷ್ಯನದು ಒಂದು ವಿಧವಾದ 'ಮುಮ್ಮಡಿಯ ಬದುಕು'. ಇವುಗಳನ್ನೆಲ್ಲ ಮೀರಿ ಮುಂದೆ ಇರುವುದು ಮನುಷ್ಯನ ಆತ್ಯಂತ ಒಳಗಿನ ತಿರುಳು- 'ಆತ್ಮ' (self).
Page 5
Content: ಆತ್ಮದ ಬೆಳಕು ಬುದ್ಧಿಮತ್ತೆಯೊಳಗೆ ಪ್ರವಹಿಸಿದಾಗ ಅದು ಶಕ್ತಿಯ ಧಾರೆಯನ್ನು ಪಡೆದು ವಿವೇಕವಾಗಿ ಪರಿವರ್ತಿತವಾಗುವುದು.
Content: ಆತ್ಮದ ಬೆಳಕು ಮನೋಭಾವದೊಳಗೆ ಪ್ರವಹಿಸಿದಾಗ ಅದು ಶುದ್ಧಗೊಳ್ಳುವುದು ಮತ್ತು ವಿಶ್ವಾಸವಾಗಿ ಪ್ರಕಟಗೊಳ್ಳುವುದು.
Content: ಆತ್ಮವು ಅಂತರಂಗವನ್ನು ಸ್ಪರ್ಶಿಸಿದಾಗ ಅದು ಪ್ರೀತಿಯಾಗಿ ಆರಳುವುದು.
Content: ಮನುಷ್ಯನ ಪ್ರಜ್ಞೆಯ ಸರ್ವೋತ್ಕೃಷ್ಟವಿಕಸನವೇ ಪ್ರೀತಿ ಎನಿಸುವುದು.
Content: ಈ ಸ್ಥಿತಿಯನ್ನು ಹೊಂದುವುದೇ ನಮಗೆ ಲಭ್ಯವಿರುವ ಸರ್ವೋತ್ಕೃಷ್ಟ ಸಾಧ್ಯತೆ ಆಗಿರುವುದು.
Content: ನಾವೆಲ್ಲರೂ ಒಂದೇ ರೀತಿಯಲ್ಲಿ ಪ್ರೀತಿಸುತ್ತೇವೋ ಅಥವಾ ಬೇರೆ ಬೇರೆ ಪ್ರಕಾರದ ಪ್ರೀತಿ ಇರುವವೋ?
Content: ಪ್ರೀತಿಯು ಒಂದೇ ಇರುವುದು. ಆದರೆ ಅದು ಒಬ್ಬೊಬ್ಬರಲ್ಲಿ ಒಂದೊಂದು ರೀತಿಯಲ್ಲಿ ವ್ಯಕ್ತಗೊಳ್ಳುವುದು.
Content: ಬೌದ್ಧಿಕವಾದ ಪ್ರೀತಿಯನ್ನು ತಲೆಯಿಂದ ವ್ಯಕ್ತಪಡಿಸಲಾಗುವುದು. ಈ ರೀತಿಯ ಪ್ರೀತಿ ಮನಸ್ಸಿಗೆ ಸಂಬಂಧಪಟ್ಟದ್ದರಿಂದ ಎಲ್ಲಿಂದಲೋ ಕಲಿತುಕೊಳ್ಳಬಹುದು.
Content: ಬುದ್ಧಿಮತ್ತೆಯು (Intellect) ಪ್ರೀತಿಯನ್ನು ಒಂದು ವ್ಯಾಪಾರ ಅಥವಾ ಒಪ್ಪಂದವಾಗಿ (ಕಾಂಟ್ರಾಕ್ಟ್-contract) ಗ್ರಹಿಸುವುದು.
Content: ಈ ರೀತಿಯ ಪ್ರೀತಿಯು ಖಡಾ ಖಂಡಿತವಾದ ಅದುಲು ಬದಲನ್ನು ಆನಸರಿಸುವುದು.
Content: ಇದು ಬಹಳ ಲೆಕ್ಕಾಚಾರದ ಮನೋಭಾವ - ‘ಈ ಸಂಬಂಧದಲ್ಲಿ ನನಗೆ ಏನು ಸಿಗುತ್ತದೆ?’ ಎಂದು ಯೋಚಿಸುವ ಮನೋಭಾವ.
Content: ಈ ರೀತಿಯ ಪ್ರೀತಿಯು ಅವಶ್ಯಕವಾಗಿ ಒಡೆತನ, ಹೊಟ್ಟೆಕಿಚ್ಚು ಮತ್ತು ಚಿತ್ರಹಿಂಸೆಯಾಗಿ ಪರಿಣಮಿಸುವುದು.
Content: ಈ ರೀತಿಯ ಪ್ರೀತಿಯು, ಪ್ರೀತಿ ಮಾಡುವವರನಾಗಲಿ ಅಥವಾ ಅವರು ಪ್ರೀತಿ ಮಾಡಿದವರನಾಗಲಿ, ಇಬ್ಬರೂ ಪರಿವರ್ತಿಸಲಾರದು.
Content: ಭಾವನಾತ್ಮಕ ಪ್ರೀತಿಯನ್ನು ಹೃದಯದಿಂದ ವ್ಯಕ್ತ ಪಡಿಸಲಾಗುವುದು - ಈ ಕಾರಣದಿಂದ ಇದರ ಪ್ರಕಟಣೆಯು ಬೌದ್ಧಿಕ ಪ್ರೀತಿಗಿಂತ ಹೆಚ್ಚು ನಿರ್ಮಲವಾದದ್ದು
Page 6
Content: ಈ ರೀತಿಯ ಪ್ರೀತಿಯಲ್ಲಿ ಒಪ್ಪಂದಕ್ಕಿಂತ (contract) ಸಂಪರ್ಕ ಅಥವಾ ಸ್ಪರ್ಶಕ್ಕೆ (contact) ಹೆಚ್ಚು ಪ್ರಾಮುಖ್ಯತೆ ಕೊಡಲಾಗುವುದು. ಈ ಪ್ರೀತಿಯು ವಿಶ್ವಾಸ ಇಟ್ಟುಕೊಳ್ಳುವುದು ಮತ್ತು ಹೆಚ್ಚು ಅಪೇಕ್ಷೆ ಇಲ್ಲದೆ ನಿಸ್ವಾರ್ಥ ಭಾವದಿಂದ ಬೇರೆಯವರಿಗೆ ಕೊಡುವುದು. ಈ ಪ್ರೀತಿಯಲ್ಲಿ ಏನೇನು ಸಮಸ್ಯೆಗಳು ಉಂಟಾಗುವುದೋ, ಅದು ಈ ಪ್ರೀತಿಯಿಂದಲೇ ಪರಿಹರಿಸಲಾಗುವುದು. ಈ ಪ್ರೀತಿಯು ಪ್ರೀತಿಸುವವರನ್ನೂ ಮತ್ತು ಪ್ರೀತಿಸಿದವರನ್ನೂ ಪರಿವರ್ತಿಸುವುದು. ಪ್ರೀತಿಯು ಯಾವಾಗ ನಮ್ಮ ಅಂತರಂಗದಿಂದ ವ್ಯಕ್ತವಾಗುವುದೋ, ಆಗ ಪ್ರೀತಿ ಕೊಡುವುದು, ಪಡೆಯುವುದು ಇವೆರಡೂ ಇರುವುದಿಲ್ಲ - ಕೇವಲ ಪ್ರೀತಿಯ ಪ್ರಕಾಶವು ಹೊರಸೂಸುವುದು. ಈ ರೀತಿಯ ಪ್ರೀತಿಯು ಪರಾಶ್ರಿತ ವಾಗಿಲ್ಲದಿದ್ದರಿಂದ ನೋವನ್ನು, ಸಮಸ್ಯೆಗಳನ್ನು ಉಂಟು ಮಾಡಲಾರದು. ಅಷ್ಟೆ ಅಲ್ಲ, ಈ ಪ್ರೀತಿಗೆ ಯಾವುದೇ ಒಂದು ವಸ್ತುವಿನ ಅವಶ್ಯಕತೆಯೂ ಇಲ್ಲ - ಅದು ಒಂದು ನೇರವಾದ, ಅದ್ಭುತವಾದ ತುಂಬಿ ತುಳುಕುತ್ತಾ ಇರುವ ಉಜ್ವಲ ಪ್ರಕಾಶ. ಈ ರೀತಿಯ ಪ್ರೀತಿ, ಕೊಡುವವರನ್ನು ಮತ್ತು ಪಡೆದವರನ್ನು ಇಬ್ಬರನ್ನೂ ಬಹಳ ಸುಂದರವಾದ ರೀತಿಯಲ್ಲಿ ಪರಿವರ್ತಿಸುವುದು. ಪ್ರೀತಿಯನ್ನು ಬುದ್ಧಿಯ ಮೂಲಕ ವ್ಯಕ್ತಗೊಳಿಸುವ ಅದನ್ನು ‘ಪ್ರೀತಿಯಲ್ಲಿ ಬೀಳುವುದು’ (falling in love) ಎಂದು ಸರಿಯಾದ ಹೆಸರು ಕೊಡು ಕರೆಯಲಾಗುವುದು. ಅದು ಮನೋಭಾವದ ಮೂಲಕ ಪ್ರಕಟವಾದಾಗ ಅದನ್ನು
Content: ‘ಪ್ರೀತಿಯಲ್ಲಿ ಏರುವುದು’ (rising in love) ಎಂದು ಕರೆಯಬಹುದು. ನಮ್ಮ ಅಂತರಂಗದ ಮೂಲಕ ಪ್ರಕಟವಾದಾಗ ಅದನ್ನು ‘ಪ್ರೀತಿಯಲ್ಲಿ ಹಾರುವುದು’ (flying in love) ಎಂದು ಕರೆಯಲಾಗುವುದು ಮತ್ತು ಯಾವ ಪ್ರೀತಿಯು ನಿಮಗೆ ರೆಕ್ಕೆ ನೀಡಿ ಹಾರಲು ಸಾಧ್ಯ ಮಾಡುವುದೋ, ಅದೊಂದೇ ‘ಪ್ರೀತಿ’ ಎನ್ನುವ ಪದಕ್ಕೆ ಯೋಗ್ಯವಾದುದು.
Page 7
Content: ಸಾಮಾನ್ಯ ಪ್ರೀತಿಗೂ, ದೈವಿಕ ಪ್ರೀತಿಗೂ (Divine love) ಏನು ವ್ಯತ್ಯಾಸ? ಇವೆರಡೂ ಬೇರೆ ಬೇರೆ ರೀತಿಯಲ್ಲಿ ವ್ಯಕ್ತವಾಗಿದ್ದ ಒಂದೇ ಅನ್ವೇಷಣೆಯ ಪರಿಣಾಮವೇ ?
Content: ಪ್ರೀತಿಯಲ್ಲಿ ಎರಡು ರೀತಿ ಇರುವುದು ಎಂದು ನಾನು ಹೇಳಬಲ್ಲೆ - ಒಂದು ವಿಭಾಗಿಸುವ ಪ್ರೀತಿ (Dividing love) ಮತ್ತು ಇನ್ನೊಂದು ದೈವಿಕ ಪ್ರೀತಿ (Divine love)
Content: ಸಾಮಾನ್ಯ ಪ್ರೀತಿಯು ವಿಭಾಗಿಸುವುದು, ದೈವಿಕ ಪ್ರೀತಿಯು ಒಗ್ಗೂಡಿಸುವುದು.
Content: ಸಾಮಾನ್ಯ ಪ್ರೀತಿಯು ಪರಿಮಿತಿಗಳನ್ನು ಗ್ರಹಿಸುವುದು, ದೈವಿಕ ಪ್ರೀತಿಯು ಪರಿಮಿತಿಯನ್ನೇ ಗುರುತಿಸಲಾರದು.
Content: ಆದರೆ ಹೌದು, ಇವೆರಡೂ ಒಂದೇ ಅನ್ವೇಷಣೆಯ ಅಭಿವ್ಯಕ್ತಿಗಳು. ಇವೆರಡು ರೀತಿಯ ಪ್ರೀತಿಯು ಅಂತಸ್ಸಿನಲ್ಲಿಮಾತ್ರ ಬೇರೆಹೊರತು ಸ್ವಭಾವದಲ್ಲಿಬೇರೆಯಲ್ಲ
Content: ಸಾಮಾನ್ಯ ಪ್ರೀತಿಯು ಬುದ್ದಿಯಸ್ತರದಿಂದ ಅಂತರಂಗದ ಸ್ತರಕ್ಕೆ ಏರುತ್ತಾ ಬಂದಾಗ, ಆದು ದೈವಿಕ ಪ್ರೀತಿಯ ಲಕ್ಷಣಗಳನ್ನು ಪಡೆಯುತ್ತಾ ಬರುವುದು.
Content: ಆದರೆ ನಮ್ಮ ದಿನಪ್ರತಿ ಸಂಬಂಧಗಳಲ್ಲಿ ಯಜಮಾನತನ, ಹೊಟ್ಟೆಕಿಚ್ಚು ಇದರದೆಲ್ಲ ಅಂಶ ಖಂಡಿತವಾಗಿ ಇರುವುದು, ಅಲ್ಲವೇ ?
Content: ಇಲ್ಲ ಸಂಬಂಧದಲ್ಲಿ ಇವೆಲ್ಲ ಇದ್ದರೆ ಆದು ಪ್ರೀತಿಯ ಸಂಬಂಧವೇ ಅಲ್ಲ - ಆದು ಕೇವಲ ಪ್ರೀತಿಯ ವೇಷವನ್ನು ಧರಿಸಿದ ಮನುಷ್ಯನ ಸೊಕ್ಕನ್ನು ಖಾಯಮ್ಮಾಗಿಟ್ಟಿರುವ ಒಂದು ಆಟ.
Content: ನೀವು ನಿಜವಾಗಿ ಪ್ರೀತಿಸುತ್ತಿದ್ದರೆ, ಪ್ರೀತಿಯಲ್ಲಿ ನೀವು ಇತರರನ್ನು ಗಳಿಸಲಾರಿರಿ - ಮತ್ತು ನೀವು ಗಳಿಸಿದ್ದರೆ ಪ್ರೀತಿಸಲಾರಿರಿ. ನೀವು ಕೇವಲ ಆಸ್ತಿಯನ್ನು ಗಳಿಸಬಲ್ಲಿರಿ.
Content: ಒಂದು ಜೀವಿಯ ಮೇಲೆ ಯಜಮಾನಿಕೆ ಹೊಂದುವುದಕ್ಕೆ ಹೇಗೆ ಸಾಧ್ಯ ? ಇತರ ಮೇಲೆಯಜಮಾನಿಕೆ ಹೊಂದುವುದಕ್ಕೆ ಪ್ರಯತ್ನ ಮಾಡಿದರೂ ಅವರನ್ನು ಎನರ್ಜಿ ಅಥವಾ ಶಕ್ತಿಯ ಸ್ಥಾನದಿಂದ ಒಂದು ಸಾಮಾನ್ಯ ಸ್ತೂಲ ಪದಾರ್ಥದ ಸ್ಥಾನಕ್ಕೆ ಇಳಿಸುವುದರ ಹಾಗೆ - ಇದು ಮನುಷ್ಯನಲ್ಲಿ ಅತ್ಯಂತ ಒಳಗಿದ್ರ, ಬೇರೆಯವರ ಮೇಲೆ ಅನಾದರಣೆಯ ಭಾವನೆಯನ್ನು ತೋರ್ಪಡಿಸುವುದು. ಹಾಗಿದ್ರೆ ಇಬ್ಬರ ನಡುವೆ ಹೊಂದಾಣಿಕೆ ಇರಲು ಹೇಗಸಾಧ್ಯ?
Content: ಈ ಅನಾದರಣೆಯನ್ನು ಎಷ್ಟು ಚೆನ್ನಾಗಿ ಮುಚ್ಚಿಟ್ಟುಕೊಂಡರೂ, ಅಂತರಂಗಕ್ಕೆ ಅದರ ತಿಳಿಯುವಿಕೆ ಆಗುವುದು. ಇದೇ ಕಾರಣಕ್ಕೆ, ಈ ರೀತಿಯ ಸಂಬಂಧದಲ್ಲಿ ಈ ಒಡತನದ ಸ್ವ ಭಾವ ಒಬ್ಬರಿಗಿದ್ದರೆ, ಇನ್ನೊಬ್ಬರು ಇವತ್ತು ಅಲ್ಲದಿದ್ದರೂ ನಾಳೆ ಖಂಡಿತ ಸಂಬಂಧದಿಂದ ಬಿಡುಗಡೆಯಾಗಲು ಪ್ರಯತ್ನಿಸುವರು.
Page 8
Content: ಹೊಟ್ಟೆಕಿಚ್ಚಿನ ವಿಷಯ ಕೇಳಿದರೆ - ಅದು ನಿಜವಾದ ಪ್ರೀತಿಗೆ ಸಂಪೂರ್ಣವಾಗಿ ವಿರುದ್ಧವಾದದ್ದು. ಹೊಟ್ಟೆಕಿಚ್ಚು ಇನ್ನೊಬ್ಬರಲ್ಲಿ ಪ್ರೀತಿ, ವಿಶ್ವಾಸ ಮತ್ತು ಪ್ರಾಮಾಣಿಕತೆಯನ್ನು ಬಲವಂತ ಮಾಡಲು ನೋಡುವುದು. ಮನಸ್ಸಿನಿಂದ, ಸಂತೋಷದಿಂದ ಕೊಡುವ ಕಾಣಿಕೆಗಳನ್ನು ಆದು ಒತ್ತಾಯದಿಂದ ಕಿತ್ತುಕೊಳ್ಳುವುದಕ್ಕೆ ನೋಡುತ್ತದೆ.
Content: ಹೀಗೆ ಇರಬೇಕಾದರೆ ಒಂದು ಸಂಬಂಧದಲ್ಲಿ ಪ್ರೀತಿ ಮತ್ತು ಹೊಟ್ಟೆಕಿಚ್ಚು ಒಟ್ಟಿಗೆ ಇರಲುಹೇಗೆತಾನೆ?
Content: ಒಡೆತನ ಮತ್ತು ಹೊಟ್ಟೆಕಿಚ್ಚು - ಇವರಡರ ಮೂಲ ಕಾರಣ ಒಂದೇ - ಭಯ. ಮನುಷ್ಯನಲ್ಲಿ ಇರುವ ಅಹಂಕಾರವು ಹೆಡಿಯಾಗಿರುವುದು. ಬೇರೆಯವರ ಮೇಲೆ ತನ್ನ ಅಧಿಕಾರವನ್ನು ಕಳೆದುಕೊಳ್ಳುವ ಭಯ ಅದನ್ನು ಸದಾ ಪೀಡಿಸುತ್ತಾ ಇರುವುದು. ಇದನ್ನು ತಪ್ಪಿಸುವುದಕ್ಕೆ ಆದು ಬೇರೆಯವರನ್ನು ಒಂದು ಪಂಜರದಲ್ಲಿ ಬಂಧಿಸುವುದಕ್ಕೆ ನೋಡುವುದು. ಆದು ಬೇರೆಯವರಿಂದ ಪ್ರತಿದಿನ ನವೀಕರಿಸುವ ಪ್ರಾಮಾಣಿಕತೆಯ ಒಪ್ಪಂದಕ್ಕೆ (contract of loyalty) ಆग्रहಿಸುತ್ತದೆ. ಅದರ ಜೋರು ಜಬರದಸ್ತೇಲಾ ಅದರ ಆತ್ಮಂತ ಒಳಗಿದ್ದ ಭಯವನ್ನು ಮುಚ್ಚಿಟ್ಟು ಕೊಳ್ಳುವುದಕ್ಕೆ ಕೇವಲ ಒಂದು ನಾಟಕ. ಇದಕ್ಕೆ ವಿರುದ್ಧವಾಗಿ ಪ್ರೀತಿಗೆ ಭಯವೆಂಬುದು ಎಂದಿಗೂ ತಿಳಿದಿಲ್ಲ. ಆದು
Content: ಎಷ್ಟರಮಟ್ಟಿಗೆ ವಿಶ್ವಾಸ ಇಟ್ಟುಕೊಳ್ಳುವುದಂದರೆ ಅದಕ್ಕೆ ಭಯದ ತಿಳುವಳಿಕೆಯೇ ಆಗಲಾರದು. ಪ್ರೀತಿಯು ಪ್ರಶ್ನಿಸುವುದಿಲ್ಲ. ಪ್ರೀತಿಯು ಬೇರೆಯವರಲ್ಲಿ ಪ್ರಾಮಾಣಿಕತೆಯನ್ನು ಆಗ್ರಹಿಸುವುದಿಲ್ಲ - ಆದು ಕೇವಲ ಸಂಪೂರ್ಣವಾಗಿ ಶರಣಾಗುವುದು.
Content: ಇಬ್ಬರು ಒಬ್ಬರನೊಬ್ಬರು ಸತ್ಯವಾಗಿ ಪ್ರೀತಿಸಿದಾಗ ಅವರು ಒಬ್ಬರಿಗೊಬ್ಬರು ಶರಣಾಗಲಾರರೇ - ಹೊರತು, ಇಬ್ಬರೂ ಪ್ರೀತಿಯ ಅದ್ಭುತ ಅನುಭವಕ್ಕೆ ಶರಣಾಗುವರು.
Content: ನೀವು ಪ್ರೀತಿಸುತ್ತಾ ಇಂದೀರ ಎಂಬುವ ಸತ್ಯವೇ ಒಂದು ಭರವಸೆ, ಒಂದು ಗ್ಯಾರಂಟಿ. ಯಾವ ಒಪ್ಪಂದದ ರಕ್ಷಣೆಯ ಅವಶ್ಯಕತೆಯೇ ಇಲ್ಲ. ನಿಜ ಏನಂದರೆ ನಮ್ಮ ವಿಶ್ವಾಸವನ್ನು ಭಂಗ ಮಾಡಿದರೂ, ಪ್ರೀತಿಯು ವಿಶ್ವಾಸವನ್ನು ಇಟ್ಟುಕೊಂಡೇ ಇರುವುದು. ವಿಶ್ವಾಸಿಸುವುದೇ ಪ್ರೀತಿಯ ಗುಣ. ಅದಕ್ಕೆ ಬೇರೆ ಯಾವ ರೀತಿಯೂ ಗೊತ್ತೇ ಇಲ್ಲ. ವಿಶ್ವಾಸದ ದಾರಿ ಬಿಟ್ಟರೆ, ಪ್ರೀತಿಸಿದವರಿಗೆ ದುಃಖ ಉಂಟಾಗುವುದು ಮತ್ತು ನಿಜವಾಗಲೂ ಪ್ರೀತಿಸುವವರಿಗೆ ಇತರರ ದುಃಖ ಎಂದಿಗೂ ತಡೆಯುವುದಕ್ಕೆ ಸಾಧ್ಯ ಇಲ್ಲ.
Content: ಪ್ರೀತಿಗೆ ಹೊಟ್ಟೆಕಿಚ್ಚಿನ ಒಡೆತನದ ಭಾಷೆಯೇ ಗೊತ್ತಿಲ್ಲ. ಇವರೆಲ್ಲರನ್ನೂ ಪ್ರೀತಿಯ ಸಂಬಂಧದಲ್ಲಿ ತರುವುದು ಖಂಡಿತ ಪ್ರೀತಿಯನ್ನು ನಾಶ ಮಾಡುವ ಹಾಗೆ. ಎಚ್ಚರಿಕೆಯಿಂದಿರಿ!
Page 9
Content: ಇಬ್ಬರ ಸಂಬಂಧದಲ್ಲಿ ಒಡನದ, ಪ್ರಾಮಾಣಿಕತೆಯ, ಇವೆಲ್ಲದರ ಒಪ್ಪಂದ ಇಲ್ಲದಿದ್ದರೆ ಸಂಬಂಧಗಳು 'ಫ್ರೀ ಲವ್' (Free Love) ಮತ್ತು 'ಫ್ರೀ ಸೆಕ್ಸ್' (Free Sex) ಎನ್ನುವ ಅವನತ ಸ್ಥಿತಿ ಹೊಂದುವುದಲ್ಲವೆ?
Content: ಖಂಡಿತ ಇಲ್ಲ. ವಾಸ್ತವವಾಗಿ ಇದರ ತದ್ವಿರುದ್ಧ ಆಗುವುದು. ಸಂಬಂಧದಲ್ಲಿ ಯಜಮಾನತನ ಎಂಬುದು ಉಪಸ್ಥಿತವಾಗಿದ್ದರೆ ಅದು ಫ್ರೀ ಸೆಕ್ಸ್ (ಲೈಂಗಿಕ ಅನೀತಿ) ಆಗಿ ಪರಿಣಮಿಸುವುದು.
Content: ಪ್ರೀತಿಯು ಬುದ್ಧಿಮತ್ತೆಯ ಮೂಲಕ ವ್ಯಕ್ತಗೊಂಡಾಗಲಾ ಅಸಮಾಧಾನ ಅಥವಾ ಅಸಂತುಷ್ಟೆಯೇ ಆದರ ಖಂಡಿತವಾದ ಪರಿಣಾಮ. ಈ ಲೆಕ್ಕಾಚಾರದ ಮನೋಭಾವವು ಸಂಬಂಧಗಳಲ್ಲಿ ಇನ್ನೂ ಹೆಚ್ಚು ಹೆಚ್ಚಾಗಿ ಲಾಭವನ್ನು ಬಯಸುತ್ತಿರುವ ಮನೋಭಾವವು, ಇರುವವರೆಗೂ 'ಫ್ರೀ ಸೆಕ್ಸ್' ಸಮಾಜದಲ್ಲಿ ಬೆಳೆಯುತ್ತಾಣಿರುವುದು. ಈ ರೀತಿಯ ಪ್ರೀತಿಯು ಎಂದೆಂದಿಗೂ ಆಧ್ಯಾತ್ಮಿಕ ಅಥವಾ ದೈವತ್ವವನ್ನು ಆಪೇಕ್ಷಿಸಲಾರದು - ಇದು ಕೇವಲ ಉಪಾಯ, ಬೇರೆಯವರ ಅನುಕಿತ ಉಪಯೋಗ ಮತ್ತು ಕಡೆಗೆ ಅತ್ಯಂತ ನಿರಾಶಾದಾಯಕವಾಗಿ ಪರಿಣಮಿಸುವುದು.
Content: ಪ್ರೀತಿಯು ಭಾವನೆಗಳ ಮೂಲಕ ಅಭಿವ್ಯಕ್ತವಾದಾಗ, ಮನುಷ್ಯ ಒಂದೇ ಜೀವನ ಸಂಗಾತಿಯೊಂದಿಗೆ ಸಂತುಷ್ಟೆಯನ್ನು ಅನುಭವಿಸುವನು. ಸಂತುಷ್ಟೆಯನ್ನು
Content: ಪೂರೈಸುವುದಕ್ಕೆ ಬೇರೆಯವರ ಕಡೆಗೆ ತಿರುಗುವ ಅವಶ್ಯಕತೆಯು ಇರುವುದಿಲ್ಲ. ಆಗ 'ಫ್ರೀ ಸೆಕ್ಸ್'ನ 'ಫ್ರೀ' ಪದವು ಹೊರಟು ಹೋಗುವುದು - ಕೇವಲ 'ಸೆಕ್ಸ್' ಉಳಿದುಕೊಳ್ಳುವುದು.
Content: ಎಲಕ್ಕಿಂತ ಹೆಚ್ಚಾಗಿದ್ದ ಪ್ರೀತಿಯ ಪ್ರಕಾಶವು ಮನುಷ್ಯನ ಅಂತರಂಗದಿಂದ ಹೊರಸೂಸಿದಾಗ, 'ಸೆಕ್ಸ್' ಎಂಬುವ ಪದವೇ ಮಾಯವಾಗುವುದು. ಈ ಸ್ಥಿತಿಯಲ್ಲಿ ಮನುಷ್ಯನು ಇನ್ನೊಬ್ಬರ ಅನುಪಸ್ಥಿತಿಯಲ್ಲಿಯೂ ಒಂದು ಅದ್ಭುತವಾದ ಸಂತುಷ್ಟೆಯನ್ನು ಅನುಭವಿಸುವನು. ಅವನಲ್ಲಿ ಇಷ್ಟಪೂರ್ಣತೆ ಇರುತ್ತದೆ ಎಂದರೆ ಅವನಿಗೆ 'ಸೆಕ್ಸ್'ನ (ಲೈಂಗಿಕ ಸಂಬಂಧದ) ಅವಶ್ಯಕತೆಯೇ ಇರುವುದಿಲ್ಲ.
Page 10
Content: ಸಂಪೂರ್ಣವಾಗಿ ಭೌತಿಕ ವಿಧಾನವಾಗಿರುವ 'ಪ್ರೀ ಸೆಕ್ಸ್' ಪಕ್ಕೆ ಬುದ್ಧಿಮತ್ತೆಯ ಮೂಲಕ ವ್ಯಕ್ತಪಡಿಸಲಾಗುವುದು?
Content: 'ಸೆಕ್ಸ್' (ಲೈಂಗಿಕ ಸಂಬಂಧವು) ಕೇವಲ ಒಂದು ಭೌತಿಕವಾದ ವಿಧಾನ ಎಂದು ಯಾರು ಹೇಳಿದರು? ಅದು ಕೇವಲ ಶರೀರದಿಂದ ವ್ಯಕ್ತಗೊಂಡಿದರೆ ಅದನ್ನು ತ್ಯಜಿಸುವುದು ಬಹಳ ಸುಲಭವಾಗಿರುತ್ತಾಇತ್ತು. ಅದು ಮನಸ್ಸಿನ ಮೂಲಕ ವ್ಯಕ್ತವಾಗುವುದರಿಂದ ಸಮಸ್ಯೆ ಶುರುವಾಗುವುದು. ವಾಸ್ತವವಾಗಿ 90% ನಮ್ಮ ಪ್ರೀತಿ ಮಾಡುವಿಕೆಯು ಮಾನಸಿಕವಾಗಿರುತ್ತದೆ. ಮನಸ್ಸಿನಲ್ಲಿಕಲ್ಪನೆಯಿಲ್ಲದೆ ಎಷ್ಟು ಜನರಿಗೆ ಲೈಂಗಿಕ ಪರಿಪೂರ್ಣತೆ ಪಡೆಯಲು ಸಾಧ್ಯ? ಇದರ ಅರ್ಥವೇಂದರೆ ಲೈಂಗಿಕಕ್ರಿಯೆಯು ಕೇವಲ ಒಂದು ಮಾನಸಿಕ ಸಾಧನೆ.
Content: ಮಾನಸಿಕ ಕಲ್ಪನೆಯ ಸಹಾಯವಿಲ್ಲದೆ, ಕೇವಲ ನೀವು ನಿಮ್ಮ ಸಂಗಾತಿಯೊಂದಿಗೆ ಲೈಂಗಿಕ ಪರಿಪೂರ್ಣತೆಯ ಅನುಭವಾಗಲು ಸಾಧ್ಯವಾದರೆ, ನೀವು 'ಸೆಕ್ಸ್' ನಿಂದ ಬಿಡುಗಡೆ ಪಡೆಯುವಿರಿ.
Content: ಆಧ್ಯಾತ್ಮಿಕ ಅನ್ವೇಷಕರಿಗೆ 'ಪ್ರಾಪಂಚಿಕ ಪ್ರೀತಿ'ಯನ್ನು ತ್ಯಜಿಸುವ ಅವಶ್ಯಕತೆ ಇದೆಯೇ?
Content: ನಿಮಗೆ 'ಪ್ರಾಪಂಚಿಕ ಪ್ರೀತಿ'ಯನ್ನು ತ್ಯಜಿಸುವ ಅವಶ್ಯಕತೆ ಇದೆಯೇ ಹೊರತು 'ಪ್ರೀತಿ'ಯನ್ನುತ್ಯಜಿಸುವ ಅವಶ್ಯಕತೆ ಇಲ್ಲ. ಯಾವುದನ್ನು ಪ್ರಾಪಂಚಿಕ ಪ್ರೀತಿ ಎಂದು ಕರೆಯಲಾಗುವುದೋ, ಆ ಪ್ರೀತಿಯು ಒಡ್ಡುವ ಹೊಡೆಕಿಟು. ಸಾರ್ಥ ಎಂಬ ಗುಣಗಳಿಂದ ಆಶುದ್ಧವಾಗಿರುತ್ತದೆ. ನಿಮ್ಮ ಪ್ರೀತಿಯಲ್ಲಿ ವಿವೇಕ ಮತ್ತು ಕರುಣೆಯ ಶುದ್ಧ ಗುಣಗಳನ್ನು ಸೇರಿಸಿ. ಅಜ್ಞಾನ ಮತ್ತು ನಿರೀಕ್ಷಣೆಯಿಂದ ಆಗುವ ಆಶುದ್ಧೆಯಿಂದ ನಿಮ್ಮ ಪ್ರೀತಿಯನ್ನು ಶುದ್ಧೀಕರಿಸಿದರೆ, ನಿಮ್ಮೊಳಗೆ ಉಳಿದುಕೊಂಡಿರುವುದು ಕೇವಲ ನಿಜವಾದ ಪ್ರೀತಿ, ನಿರ್ಮಲವಾದ ಪ್ರೀತಿ.
Content: ಈ ಪ್ರೀತಿಯಿಂದ ನಿಮ್ಮ 'ಸಾಂಸಾರಿಕ' ಸಂಬಂಧಗಳನ್ನು ಕೂಡ ಪವಿತ್ರವಾದ ಆಧ್ಯಾತ್ಮಿಕ ಸಾಧನೆಗಳಾಗಿ ಪರಿವರ್ತಿಸಿ ಕೊಳ್ಳಬಹುದು.
Page 11
Content: ಪ್ರಮಾಣ (quantity) ರೂಪದ ಪ್ರೀತಿಯ ವಿರುದ್ಧವಾಗಿ ಗುಣದ (quality) ರೂಪದಲ್ಲಿರುವ ಪ್ರೀತಿಯನ್ನು ನೀವು ಎವರಿಸುತ್ತಾ ಇದ್ದಿರಿ. ಪ್ರೀತಿಯನ್ನು ಲೆಕ್ಕಚಾರದ ಆಧಾರದ ಮೇಲೆ ಕೊಟ್ಟರೆ ಅದು ಆಯ್ದುಕೊಂಡಿರುವ ಸ್ವೀಕರಿಸಬಲ್ಲ ಕೆಲವರನ್ನು ಬಿಟ್ಟರೆ ಮಿಕ್ಕಿದವರಿಂದ ಕಾಪಾಡಿ ಇಟ್ಟುಕೊಂಡಿರುವ ರೀತಿಯಲ್ಲಿ, ತುಚ್ಛ ಮತ್ತು ಸೀಮಿತ ಪ್ರಮಾಣದಲ್ಲಿ ವ್ಯಕ್ತಗೊಳಿಸುವುದು. ನಿರೀಕ್ಷೆ, ಲುಕ್ರ ಮತ್ತು ನಿರಾಸೆಯೇ ಈ ರೀತಿಯ ಪ್ರೀತಿಯ ಪರಿಣಾಮ! ಇದಕ್ಕೆ ವಿರುದ್ಧವಾಗಿ ಪ್ರೀತಿಯು ನಿಮ್ಮ ಅಂತರಂಗದ ಗುಣವೇ ಆಗಿಹೋದಾಗ ಅದು ಸೂರ್ಯನ ಪ್ರಕಾಶದ ರೀತಿಯಲ್ಲಿ ನಿಮ್ಮಿಂದ ಹೊರಸೂಸುವುದು - ಈ ಪ್ರೀತಿಯ ಪ್ರಕಾಶವನ್ನು ಯಾರು ಪಡೆದರೂ ಸರಿ - ಈ ಪ್ರೀತಿ ನಿಮಗೆ ಹಿಂತಿರುಗಿ ಬರದೆ ಇದ್ದರೂ ಸರಿ. ಈ ರೀತಿಯ ಪ್ರೀತಿಯು ಕೇವಲ ನಿಮ್ಮ ಅಂತರಂಗದ ವಿಕಸನದ ಒಂದು ಅಭಿವ್ಯಕ್ತೆ. ಇದು ಒಂದು ಪ್ರಶ್ನಿಸದೇ ಇರುವ, ಶರತ್ತುಗಳನ್ನು ಹೊರಿಸದೇ ಇರುವ, ಎಲ್ಲರನ್ನು ಆಲಂಗಿಸಿ ಸ್ವೀಕರಿಸುವ, ಎಲ್ಲರಿಗೂ ಒಂದೇ ಸಹ ಹರಡುವ ನಿರ್ಮಲವಾದ ಪ್ರೀತಿ.
Content: ಆಧ್ಯಾತ್ಮದ ಮಾರ್ಗವು ಏಕಾಂತದಲ್ಲಿ ಪ್ರಯಾಣ ಮಾಡಬೇಕೆಂದು ಹೇಳಲಾಗಿದೆ. ಆದರೆ ಇಬ್ಬರು ನಡುವೆ ಇರುವ ಪ್ರೀತಿಯ ಬಂಧನದಿಂದ ಅವರು ಈ ಮಾರ್ಗದಲ್ಲಿ ಒಟ್ಟಿಗೆ ಪ್ರಯಾಣ ಮಾಡಬಹುದೆ ? ಆಧ್ಯಾತ್ಮದ ಮಾರ್ಗವು ಬಹಳ ವ್ಯಕ್ತಿಗತವಾಗಿರುವುದು. ಸ್ವಲ್ಪ ದೂರದವರೆಗೆ ಇಬ್ಬರು ಒಟ್ಟಿಗೆ ಖಂಡಿತ ಪ್ರಯಾಣ ಮಾಡಬಹುದು. ಅವರ ನಡುವೆ ಇರುವ ಪ್ರೀತಿಯು ಬಂಧನವು ಮಾರ್ಗವನ್ನು ಇನ್ನೂ ಸುಂದರವಾಗಿಸುವುದು. ಆದರೆ ಒಂದು ನಿಶ್ಚಿತ ಕಾಲವಾದ ಮೇಲೆ ನೀವಿಬ್ಬರೂ ಇನ್ನು ಮುಂದೆ ಬೇರೆ ಬೇರೆ ದಾರಿಯಲ್ಲಿ ತಿರುಗಿ ಏಕಾಂತದಲ್ಲಿ ಪ್ರಯಾಣವನ್ನು ಮುಂದುವರಿಸಬೇಕೆಂದು ನಿಮಗೆ ತಿಳುವಳಿಕೆವಾಗುವುದು. ಪ್ರತಿಯೊಬ್ಬ ವ್ಯಕ್ತಿಯೂ ವಿಶೇಷವಾಗಿರುವನು ಮತ್ತು ಪ್ರತಿಯೊಬ್ಬ ವ್ಯಕ್ತಿಯ ಮಾರ್ಗವೂ ವಿಶೇಷವಾಗಿರುವುದು. ಈ ತಿಳುವಳಿಕೆಯು ನಿಮಗೆ ಆದಾಗ, ಒಟ್ಟಿಗೆ ಪ್ರಯಾಣ ಮಾಡುವ ಅವಶ್ಯಕತೆ ನಿಮಗೆ ತಾನಾಗಿ ತಾನೆ ತ್ಯಜಿಸಲ್ಪಡುವುದು. ದೈವತ್ವವನ್ನು ಸೇರುವ ಮನುಷ್ಯನ ಕಟ್ಟಕಡೆಯ ಪ್ರಯಾಣವು ಆತ್ಯಂತ ಏಕಾಂತದಲ್ಲಿಯೇ ಮಾಡಲಾಗುವುದು.
Page 12
Content: ಇತರರ ದೋಷಗಳು ಮತ್ತು ಕೊರತೆಗಳೊಂದಿಗೆ ಅವರು ಹೇಗೆ ಇದ್ದಾರೋ ಹಾಗೆ ಅವರನ್ನು ಸ್ವೀಕರಿಸುವುದೇ ಪ್ರೀತಿಯ ಅರ್ಥವೇ?
Content: ನೀವು “ದೋಷಗಳು ಮತ್ತು ಕೊರತೆಗಳೊಂದಿಗೆ ಅವರು ಹೇಗೆ ಇದ್ದಾರೋ ಹಾಗೆ ಅವರನ್ನು ಸ್ವೀಕರಿಸುವುದು” ಅಂತ ಹೇಳುವುದೇ ಒಂದು ರೀತಿಯ ನಿಂದನೆಯನ್ನು ಸೂಚಿಸುತ್ತದೆ ಅಲ್ಲವೇ?
Content: “ಅವರು ನಿಮಗೆ ಹೇಗೆ ಕಾಣಿಸಿಕೊಳ್ಳುತ್ತಾರೋ ಅವರನ್ನು ಹಾಗೆ ಸ್ವೀಕರಿಸುವುದು” ನಿಜವಾದ ಪ್ರೀತಿಯ ಅರ್ಥ ಅಂತ ಹೇಳುವುದು ಇನ್ನೂ ಉತ್ತಮ. ವಿಶ್ವದಲ್ಲಿರುವ ಸಕಲವು ನಿಮಗೆ ದೈವತ್ವವು ನೀಡಿರುವ ಒಂದು ಕಾಣಿಕೆ. ಇದನ್ನು ನಮ್ಮ ಮನಸ್ಸೆ ಮತ್ತು ಸೌಜನ್ಯದಿಂದ ಸ್ವೀಕರಿಸಿ.
Content: ಪ್ರೀತಿಯು ಮನುಷ್ಯನ ಅಹಂಕಾರ ಅಥವಾ ಸೋಕನ್ನು ಪೂರೈಸುವ ಉಪಕರಣವಾಗಿರಬಹುದೆ?
Content: ಪ್ರೀತಿಯು ಬುದ್ದಿಮತ್ತೆಯ ಮೂಲಕ ವ್ಯಕ್ತಗೊಂಡಾಗ ಖಂಡಿತ ಮನುಷ್ಯನ ಅಹಂಕಾರವನ್ನು ಸೋಕನ್ನು ಪೂರೈಸುವುದಕ್ಕೆ ಉಪಕರಣವಾಗಿರುವುದು. ವಾಸ್ತವವಾಗಿ ಬಹಳಮಟ್ಟಿಗೆ ಸಂಬಂಧಗಳಲ್ಲಿ ಜನರು ಒಬ್ಬರನೊಬ್ಬರು ಅನುಚಿತ ಉಪಯೋಗ ಮಾಡಿಕೊಂಡಿರುತ್ತಾರೆ. ಇಬ್ಬರ ನಡುವೆ ಪ್ರೀತಿ-ದ್ವೇಷ, ಇರುವ ಅಸ್ಥಿರವಾದ ಸಂಬಂಧಗಳ (Love-hate relationship) ಕಾರಣವೇ ಅಹಂಕಾರ. ಸಂಬಂಧದಲ್ಲಿ ಒಬ್ಬರ ಸೋಕನ್ನು ಪೂರೈಸುವುದಕ್ಕೆ ಅವರ ನಿರಂತರ ಒತ್ತಾಯ ತಡೆಯಲಾಗದೆ ಇನ್ನೊಬ್ಬರು ಪ್ರತಿಭಟಿಸಿದಾಗ, ಸಂಬಂಧವು ಈ ಪ್ರೀತಿ-ದ್ವೇಷದ ಅಸ್ಥಿರ ಸ್ಥಿತಿಯನ್ನು ಹೊಂದುವುದು.
Content: “ಅವಳು ನನ್ನ ಮಾತನೇ ಕೇಳುವುದಿಲ್ಲ. ಅವನು ನನಗೆ ಮರ್ಯಾದೆಯೇ ಕೊಡುವುದಿಲ್ಲ. ಅವಳು ನನ್ನ ಅಪೇಕ್ಷೆಗಳನ್ನೇ ಅಥ೦ಗ ಮಾಡಿಕೊಂಡಿಲ್ಲ” ಇಬ್ಬರು ಪ್ರೀತಿಸುತ್ತಿದ್ದವರ ಚಾಡಿಗಳನ್ನು ಕೇಳಿದರೆ ಇವೆಲ್ಲ ಅವರಿಬ್ಬರ ಅಹಂಕಾರಕ್ಕೆ ಘಾಸಿ ತಾಕಿದೆ ಎಂಬುವುದು ಸ್ಪಷ್ಟವಾಗಿ ಕಾಣಿಸಿಕೊಳ್ಳುವುದು.
Content: ಜ್ಞಾನಮಟ್ಟಕ ಇಟುಕೊಳ್ಳಿ, ಸಂಘರ್ಷ ರೂಪದ ಆಹಾರವೇ ಅಹಂಕಾರವನ್ನು ಪೋಷಿಸುತ್ತಾ ಇರುವುದು. ಸಂಘರ್ಷವು “ನನ್ನ ವಿರುದ್ಧವಾಗಿ ಅವಳು” (ಅಥವಾ
Page 13
Content: ಅವನು) ಎಂಬುವ ಆಗಲು ವಿಳೆಯ ಭಾವನೆಯನ್ನು ನಿರಂತರವಾಗಿ ನೀಡಿ ಅಹಂಕಾರವನ್ನು ಬಲಪಡಿಸುವುದು. ನೀವು ಮೊದಮೊದಲು ಪ್ರೀತಿಯನ್ನು ಅನುಭವಿಸಿದಾಗ, ತಾನಾಗಿ ತಾನೆ ನೀವು ಈ ಸುಂದರವಾದ ಅನುಭವಕ್ಕೆ ಶರಣಾಗುವುದಕ್ಕೆ ತಯಾರಾಗಿರುವಿರಿ - ಆಗ ನಿಮ್ಮ ಅಹಂಕಾರವೂ ಹಿಂಭಾಗದಲ್ಲಿರುವುದು. ಆದರೆ ಪ್ರೀತಿಯು ಬುದ್ಧಿವತ್ತೆಯ ಮೂಲಕ ವ್ಯಕ್ತಗೊಂಡಿದ್ದರೆ ಅದು ಈ ಭವ್ಯವಾದ ಸ್ಥಿತಿಯನ್ನು ಜಾಸ್ತಿ ದಿನ ಬೆಂಬಲಿಸಲಾರದು. ಸಂಬಂಧವು ಸ್ವಲ್ಪ ಹಳೆಯದಾದಾಗ, ಒಬ್ಬರಿಗೊಬ್ಬರು ಸಲಹೆ ನೀಡಿದಾಗ, ಅಹಂಕಾರವು ಮತ್ತೊಮ್ಮೆ ಏರಿ ಮುಂದಕ್ಕೆ ಬಂದು ತನ್ನನ್ನು ಖಾಯಮ್ಮಾಗಿಟ್ಟು ಕೊಂಡಿರುವುದಕ್ಕೆ ಬೇಕಾಗುವ ಸಂಘರ್ಷವುಳ್ಳ ಪರಿಸ್ಥಿತಿಗಳನ್ನು ಸೃಷ್ಟಿಸುವುದು. ಈ ಪ್ರೀತಿ ದ್ವೇಷದ ಅಸ್ಥಿರ ಸಂಬಂಧಗಳು ಕೇವಲ ದಾಂಪತ್ಯ ಸಂಬಂಧಗಳಿಗೆ ಮಾತ್ರ ಸೀಮಿತವಾಗಿಲ್ಲ. ಈ ಅಹಂಕಾರಗಳ ಸಂಘರ್ಷವು ತಂದೆ ತಾಯಿಯರ ಮತ್ತು ಮಕ್ಕಳ ನಡುವೆಯೂ ನಿರಂತರವಾಗಿರುವುದು. ತಂದೆ ತಾಯಿಯರು ತಮ್ಮ ಸಂತಾನದ ಮೂಲಕ ತಮ್ಮ ಜೀವನವನ್ನು ಮತ್ತೊಮ್ಮೆ ಜೀವಿಸುವುದಕ್ಕೆ ಪ್ರಯತ್ನಿಸುತ್ತಾಣಿರುವುದು ಮತ್ತು ಮಕ್ಕಳ ಆಸ್ತಿತ್ವವು ಈ ಒತ್ತಡವನ್ನು ಪ್ರತಿಬಟಿಸುತ್ತಾಣಿರುವುದೇ ಅವರ ನಡುವೆ ಇರುವ ಈ ನಿರಂತರ ಸಂಘರ್ಷದ ಮೂಲಕಾರಣ.
Content: ನಿಮ್ಮ ಸಂಬಂಧಗಳಲ್ಲಿ ನೀವು ಈ ಲಕ್ಷಣಗಳನ್ನು ಕಂಡುಹಿಡಿದಿದ್ದರೆ, ನೀವು ಅನುಭವಿಸುತ್ತಾಇರುವುದು ಪ್ರೀತಿ ಅಲ್ಲ ಎಂದು ನೀವು ತೀರ್ಮಾನಿಸಬಹುದು. ನಿಜವಾದ ಪ್ರೀತಿಗೆ ವಿರುದ್ಧ ಇಲ್ಲ ಎಂದು ಹೇಳುತ್ತಾರೆ. ನಿಜವಾದ ಪ್ರೀತಿಯನ್ನು ಎಂದಿಗೂ ದ್ವೇಷಕ್ಕೆ ಪರಿವರ್ತಿಸಲಾಗದು. ನಿಮ್ಮ ಆಸ್ತಿತ್ವವನ್ನು ವ್ಯಕ್ತಪಡಿಸುವುದಕ್ಕೆ ಇನ್ನೊಬ್ಬ ಮೂಲಕ ಪೂರೈಸಿಕೊಳ್ಳುತ್ತಿರುವ ಸಂಬಂಧ ಅಲ್ಪಕಾಲಿಕವಾಗಿರುವುದು. ಇದು ಖಂಡಿತ ನಿಜವಾದ ಪ್ರೀತಿಯ ಸಂಬಂಧವಲ್ಲ. ಎಚ್ಚರಿಕೆಯಿಂದಿರಿ!
Page 14
Content: ನಾನು ಅನುಭವಿಸುತ್ತಿರುವುದು ನಿಜವಾದ ಪ್ರೀತಿಯೋ ಅಥವಾ ಕೇವಲ ಒಂದು ಭ್ರಮೆಯೋ ಎಂದು ನನಗೆ ಹೇಗೆ ಗೊತ್ತಾಗುವುದು?
Content: ಪ್ರೀತಿಯು ಯಾವಾಗಲು ನಿಜವಾಗಿರುವುದು, ಅದು ಎಂದಿಗೂ ಭ್ರಮೆ ಯಾಗಿರುವುದಿಲ್ಲ. ಆದರೆ ಯಾವುದೋ ಒಂದು ಭಾವನೆಯನ್ನು ನೀವು ಪ್ರೀತಿ ಎಂದು ತಪ್ಪು ತಿಳಿದು ಕೊಂಡಿದ್ದೀರೋ ಏನೋ ಎಂದು ಪರೀಕ್ಷಿಸಿಕೊಳ್ಳಿ.
Content: ಪ್ರೀತಿಯೆಂಬುವುದು ಎಂದಿಗೂ ನಾಶವಾಗದು. ವಿಶೇಷವಾಗಿ ವಾಸ್ತವಿಕತೆಯಿಂದ ಎಂದಿಗೂ ನಾಶವಾಗದು. ‘ಹನುಮಾನ್’ ಮುಗಿದ ತಕ್ಷಣವೇ ಪ್ರೀತಿಯು ಮಾಯವಾಗ ಹೋದರೆ ಅದು ಖಂಡಿತ ಪ್ರೀತಿಯಲ್ಲ. ನಿಮ್ಮ ಸಂಗಾತಿಯು ನಿಮ್ಮ ಮದುವೆಯ ಆ್ಯನಿವರ್ಸರಿಯನ್ನು (anniversary) ಮರೆತು ಹೋದರೆ ಅಥವಾ ಅವಳಿಗೆ (ಅಥವಾ ಅವನಿಗೆ) ‘ತೂಕ ಹೆಚ್ಚಾದರೆ (ತಪ್ಪು ಆಗಿ ಹೋದರೆ) ನಿಮ್ಮ ಪ್ರೀತಿಯು ಕಡಿಮೆ ಆಗಿ ಹೋದರೆ ಅದು ಖಂಡಿತ ಪ್ರೀತಿ ಅಲ್ಲ! ಒಬ್ಬರು ವಿಶ್ವಾಸಕ್ಕೆ ಅಯೋಗ್ಯವಾಗಿದ್ದರೂ ಅವರಲ್ಲಿ ವಿಶ್ವಾಸ ಕಳೆದುಕೊಳ್ಳದಿದ್ದರೆ ಅದು ಖಂಡಿತ ನಿಜವಾದ ಪ್ರೀತಿ.
Content: ನೀವು ಅನುಭವಿಸುತ್ತಿರುವುದು ನಿಜವಾದ ಪ್ರೀತಿ ಎಂದು ಹೇಗೆ ಗೊತ್ತಾಗುವುದು? ನಿಮ್ಮನ್ನು ನೀವು ಹೀಗೆ ಪರೀಕ್ಷಿಸಿಕೊಳ್ಳಿ.
Content: ಅವರು ನಿಮ್ಮ ಮುಂದೆ ಇದ್ದಾಗಲೇ ನೀವು ಶಾಂತಿ, ಸಂತೋಷ ಮತ್ತು ಸ್ಥಿರತೆಯ ಭಾವನೆಯನ್ನು ಅನುಭವಿಸುವಿರಾ?
Content: ನೀವಿಬ್ಬರು ಒಟ್ಟಿಗೆ ಕುಳಿತುಕೊಂಡಿದ್ದಾಗ ನಿಮ್ಮಿಬ್ಬರ ನಡುವೆ ಇದ್ದ ಮೌನದಲ್ಲಿ ಶಬ್ದಗಳನ್ನು ಮೀರಿರುವ ಒಂದು ಸುಂದರವಾದ ಆತ್ಮೀಯತೆಯ ಸಂತೋಷವನ್ನು ಅನುಭವಿಸುವಿರಾ?
Content: ಏನಾದರೂ ಅವರನ್ನು ಕಳೆದುಕೊಳ್ಳುವ ಭಯ ನಿಮ್ಮಲ್ಲಿ ಇಲವೇ?
Content: ನಿಮ್ಮ ಜೀವನದಲ್ಲಿ ಅನುಭವಿಸಿದ್ದ ಚಿಂತೆಗಳು ಮತ್ತು ಆಡಚಣೆಗಳಿಂದ ನಿಮ್ಮ ಪ್ರೀತಿಯು ಇನ್ನೂ ಸಂಪೂರ್ಣವಾಗಿ ವಿಕಾಸವಾಗುವುದಕ್ಕೆ ಸಹಕರಿಸುವೆಯೇ?
Content: ಅವರನ್ನು ಪ್ರೀತಿಸುವುದು ನಿಮಗೆ ಸಹಜವಾಗಿದೆಯೇ?
Content: ಇದೇ ಪ್ರೀತಿಯ ಸಾರ. ವಾಸ್ತವವಾಗಿ ನಿಜವಾದ ಪ್ರೀತಿಗೆ ಅದು ಒಂದು ಭ್ರಮೆ ಎನ್ನುವ ಭಯವೇ ತಿಳಿಯದು. ಹಾಗಾಗಿ ನೀವು ಪ್ರೀತಿಸಿದರೆ, ಆ ಪ್ರೀತಿ ಒಂದೇ ಸತ್ಯ ಎಂಬುವ ಭಾವನೆಯಿಂದ ಪ್ರೀತಿಸಿ ಮತ್ತು ನಿಮಗೆ ಯಾವಾಗಲಾದರೂ ಈ ಪ್ರೀತಿಯ ಕೇವಲ ಒಂದು ಭ್ರಮೆ ಎಂದಿದರೆ, ಈಗ ಪ್ರೀತಿಯು ಮುಗಿದಿದೆ ಎಂದು ತಿಳಿದುಕೊಂಡು ನಿಮ್ಮ ಜೀವನದಲ್ಲೇ ಮುಂದೆ ಹೋಗಬಹುದು.
Page 15
Content: ಸಂಬಂಧದಲ್ಲಿ ಸಂಘರ್ಷವು ಇದ್ದರೆ, ಅದನ್ನು ಪರಿಹರಿಸುವುದಕ್ಕೆ ಪ್ರಯತ್ನಿಸಬೇಕೇ ಅಥವಾ ಅದನ್ನು ಬಿಟ್ಟು ಮುಂದಕ್ಕೆ ಹೋಗಬೇಕೇ ?
Content: ಒಳ್ಳೆಯ ಪ್ರಶ್ನೆ.
Content: ಪ್ರೀತಿಯು ಎಲ್ಲಕ್ಕಿಂತ ಹೆಚ್ಚು ಆಪಾಯಕರವಾದ ಮಾರ್ಗ.
Content: ಧೈರ್ಯವಂತರು ಮಾತ್ರ ಈ ಮಾರ್ಗದಲ್ಲಿ ಹೆಜ್ಜೆ ಇಡಬಲ್ಲರು. ಈ ಮಾರ್ಗದ ತಿರುವುಗಳಲ್ಲಿ ಬಹಳ ಸಂತೋಷವನ್ನು ಪಡೆಯುವಿರಿ ಮತ್ತು ಇದೇ ಮಾರ್ಗದಲ್ಲಿ ನೀವು ಸಂಘರ್ಷಗಳಿಗೆ ಮತ್ತು ತಿಳುವಳಿಕೆಗೂ ತಯಾರಾಗಿರಬೇಕು.
Content: ಪ್ರತಿ ಒಂದು ವ್ಯಕ್ತಿಯು ಅನನ್ಯವಾಗಿರುವುದರಿಂದ ಮತ್ತು ಇಬ್ಬರ ನಡುವೆ ಸಂಪೂರ್ಣವಾದ ಮತ್ತು ವಿವಾದವಿಲ್ಲದ ನಿರ್ದಿಷ್ಟ ಹೊಂದಿಕೆ ಯಾವಾಗಲೂ ಇರುವುದಕ್ಕೆ ಸಾಧ್ಯವಿಲ್ಲದಿರುವುದರಿಂದ, ಸಂಬಂಧಗಳಲ್ಲಿ ಸಂಘರ್ಷಗಳಿರುವುದು ಸಹಜ.
Content: ಸಂಬಂಧದಲ್ಲಿ ಮನಸ್ತಾಪವಿದ್ದರೆ ಸಂಬಂಧವು ನಾಶವಾಗಿ ಹೋಗುವುದು ಎಂಬ ಭಯದಲ್ಲಿ ಸಂಘರ್ಷಗಳನ್ನು ಉಪೇಕ್ಷಿಸಬೇಡಿ. ಇದಕ್ಕೆ ವಿರುದ್ಧವಾಗಿ, ಸಂಘರ್ಷವನ್ನು ನೀವು ಅಲಕ್ಷಿಸಿದರೆ ಸಂಬಂಧವು ಇನ್ನೂ ಕಡೆಯಾಗಿ ಹೋಗಿ ನಾಶವಾಗಿಹೋಗಬಹುದು. ನಿಮ್ಮ ನಡುವೆ ಇದ್ದ ಮನಸ್ತಾಪವನ್ನು ಅಲಕ್ಷಿಸಬೇಡಿ ಹೊರತು ಅದನ್ನು ವೀಕ್ಷಿಸಿ, ಪರೀಕ್ಷಿಸಿ ನೋಡಿ. ಅದರಿಂದ ನೀವು ಏನು ಪಾಠವನ್ನು ಕಲಿಯಬಹುದು ಎಂದು ನೋಡಿ. ನೀವು ನಿಮ್ಮ ಅಂತರ್ಯದಲ್ಲಿ ಒಪ್ಪಿಕೊಳ್ಳುತ್ತಾ ಇಲ್ಲದೇ ಇರುವ ನಿಮ್ಮಲ್ಲೇ ಇದ್ದ ಯಾವುದೇ ಒಂದು ಕೊರತೆಯೇ ಈ ಮನಸ್ತಾಪಕ್ಕೆ ಕಾರಣವೇ ? ಸಮೀಪವಾಗಿ ವೀಕ್ಷಿಸಿ.
Content: ಬಹಳ ಆಪ್ತ ಬಳಕೆಯಿರುವ ಸಂಬಂಧದಲ್ಲಿ ಮಾತ್ರ ನೀವು ನಿಮ್ಮ ನಿಜವನ್ನು ಕಂಡು ಹಿಡಿಯಬಲ್ಲಿರಿ. ಈ ಬಹಳ ಸಲಿಗೆಯುಳ್ಳ ಸಂಬಂಧದಲ್ಲಿಯೇ ನಿಮ್ಮ ಸಂಗಾತಿಯು ನಿಮ್ಮ ನಿಜವಾದ ಸ್ವಭಾವವನ್ನು ಪ್ರತಿಬಿಂಬಿಸುತ್ತಾ ಇರುವರು. ಹೇಗಾದರೂ, ನಿಮ್ಮ ಜೀವನ ಸಂಗಾತಿ ಅಲ್ಲದೆ ಬೇರೆ ಯಾರಿಗೆ ನಿಮ್ಮ ಅತ್ಯಂತ ಕೆಟ್ಟ ಕೊರತೆಗಳನ್ನು ಒಪ್ಪೊಂದು ಸ್ವಾಭಾವಿಕತೆಯಿಂದ ಸೂಚಿಸಲು ಸಾಧ್ಯ? ಹಾಗಾಗಿ, ನಿಮ್ಮ ನಡುವೆ ಇರುವ ಮನಸ್ತಾಪದ ಮೂಲಕಾರಣವನ್ನು ಸಮೀಪವಾಗಿ ವೀಕ್ಷಿಸಿ. ಜ್ಞಾನಪಕ ಇಟ್ಟುಕೊಳ್ಳಿ, ಸಂಬಂಧದಲ್ಲಿ ಒಂದು ಒತ್ತೆಯಿರುವ ಕಾಲವು ಇರಬಹುದು ಮತ್ತು ಸಂಬಂಧವನ್ನು ಕೊಂದೇ ತಂದು ಜೀವನದಲ್ಲಿ ಮುಂದುವರೆಯುವ ಕಾಲವು ಇರಬಹುದು. ಸಮೀಪವಾಗಿ ವೀಕ್ಷಿಸಿ-ನಿಮ್ಮಿಬ್ಬರ ನಡುವೆ ನಿಜವಾದ ಪ್ರೀತಿಯಿರುವುದೆ?
Page 16
Content: ಯಾವ ಕಾರಣಕ್ಕೆ ಏನಾಯಿತು, ಯಾವುದು ನ್ಯಾಯ ಸಮ್ಮತವಾದದ್ದು ಎಂದು ತರ್ಕಾನುಸಾರವಾಗಿ ಯೋಚಿಸಿ, ನಿಮ್ಮ ವೀಕ್ಷಣೆಯನ್ನು ಒಂದು ಬೌದ್ಧಿಕ ವಿಧಾನ ಮಾಡಬೇಡಿ. ಹೀಗೆ ಮಾಡಿದರೆ ಅದು ಬೌದ್ಧಿಕ ಸ್ತರದಲ್ಲಿಯೇ ನಿಂತು ಹೋಗಿ ನಿಮಗೆ ಯಾವ ಉತ್ತರವೂ ಸಿಗುವುದಿಲ್ಲ. ನೀವು ಸುಮ್ಮನೆ ನಿಮ್ಮ ಪ್ರಶ್ನೆಗಳನ್ನು ವಿಶ್ವಾಸದಿಂದ ಮತ್ತು ಪ್ರಾಮಾಣಿಕತೆಯಿಂದ ಒಳಗಡೆ ತಿರುಗಿಸಿ - ಏನೂ ಯೋಚಿಸಬೇಡಿ, ಕೇವಲ ನಿಮ್ಮ ಅಂತರಂಗವನ್ನು ಭಾವಿಸಿ. ಉತ್ತರವು ತಾನಾಗಿಯೇ ತಾನೆ ಮುಂದೆ ಬರುವುದು.
Content: ನಿಮ್ಮ ಪ್ರಶ್ನೆಗೆ ಉತ್ತರ ‘ಹೌದು, ಹೊಂದಿಕೆ ಇದೆ’ ಎಂದು ಆಗಿದ್ದರೆ, ಸಂಘರ್ಷ ಪರಿಸ್ಥಿತಿಗಳು ನಿಮ್ಮ ಸಂಬಂಧದಲ್ಲಿ ಕೇವಲ ಮೇಲೆ ಮೇಲೆ ಇದ್ದ ಆಲೆಗಳು ಎಂದು ತೀರ್ಮಾನಿಸಿ. ನೀವು ಪ್ರೀತಿಯ ಭವ್ಯ ಅನುಭವಕ್ಕೆ ಶರಣಾದಾಗ ನಿಮ್ಮ ಅಹಂಕಾರವು ಹಿಂದಕ್ಕೆ ಹೋಗಿರುವುದು. ಅದರ ಪ್ರತಿಷ್ಠೆಯು ಇರುವುದಿಲ್ಲ! ಅದರ ಪ್ರತಿಷ್ಠೆಯನ್ನು ಮತ್ತೊಮ್ಮೆ ಸಾಧಿಸಿಕೊಳ್ಳುವುದಕ್ಕೆ ಅಹಂಕಾರವು ಸಂಘರ್ಷದ ಪರಿಸ್ಥಿತಿಗಳನ್ನು ನಿರ್ಮಿಸುವುದು ಎಂದು ಚೆನ್ನಾಗಿ ತಿಳಿದುಕೊಳ್ಳಿ. ಈ ಒಳನೋಟದಿಂದ ನೀವು ಈ ಸಂಘರ್ಷದ ಪರಿಸ್ಥಿತಿಗಳನ್ನು ಸೂಕ್ಷ್ಮವಾಗಿ ಪ್ರೀತಿಯಿಂದ ಪರಿಹರಿಸಿಕೊಳ್ಳಬಲ್ಲಿರಿ.
Content: ಆದರೆ ನೀವು ಆಲಿಸುತ್ತಿರುವ ಉತ್ತರವು ‘ಇಲ್ಲ-ಹೊಂದಿಕೆಯೇ ಇಲ್ಲ’ ಎಂದು ಆಗಿದ್ದರೆ ಸಂಬಂಧವನ್ನು ಕೊನೆಗೆ ತಂದು ನಿಮ್ಮ ಜೀವನದಲ್ಲಿ ಮುಂದುವರೆಯುವುದಕ್ಕೆ ಸಮಯ ಆಗಿದೆ ಎಂದು ತೀರ್ಮಾನಿಸಿ. ಇಬ್ಬರ ಅಂತರಂಗಗಳ ನಡುವೆ ಹೊಂದಿಕೆಯಿಲ್ಲದಿರುವ ಸಂಬಂಧದಲ್ಲಿ ಉಳಿದುಕೊಂಡಿದ್ದರೆ, ಇಬ್ಬರಿಗೂ ನ್ಯಾಯವಾಗುವುದಿಲ್ಲ - ಸಂಬಂಧದ ಅನಾದರಣೆ ಆಗುವುದು. ನಿಮ್ಮ ಜೀವನದ ಪ್ರಯಾಣದಲ್ಲಿ ಮುಂದಕ್ಕೆ ಹೋಗಿ, ನಿಮಗೆ ನಿಜವಾದ ಪ್ರೀತಿ ಸಿಗಬಹುದು. ಪ್ರೀತಿಯನ್ನು ಹುಡುಕಿಕೊಂಡು ಹೋಗಬೇಡಿ - ಕೇವಲ ನಿಮ್ಮ ಮನಸ್ಸನ್ನು ಪ್ರೀತಿಗೆ ತೆರೆದುಕೊಳ್ಳಿ. ಆದರೆ ನಿಮ್ಮ ಸಂಘರ್ಷವುಳ್ಳ ಸಂಬಂಧ ನಿಮ್ಮನ್ನು ನಾಶ ಮಾಡಲು ಬಿಡಬೇಡಿ. ಈ ಸಂಬಂಧವು ನಿಮಗಲ್ಲ ಎಂದು ತಿಳಿದುಕೊಂಡು ಏನೂ ದ್ವೇಷವಿಲ್ಲದೆ ಮುಂದಕ್ಕೆ ಹೋಗಿ. ದ್ವೇಷವನ್ನು ಮನಸ್ಸಲ್ಲಿಟ್ಟುಕೊಂಡರೆ ನೀವು ಎಂದೆಂದಿಗೂ ಯಾರನ್ನೂ ಪ್ರೀತಿಸಲಾರಿರಿ. ಮನಸ್ಸಿನಲ್ಲಿ ದ್ವೇಷ ಸಾಧಿಸಿದರೆ ನಿಮಗೆ ನೀವೇ ದುಃಖ ತಂದುಕೊಳ್ಳುವಿರಿ ಮತ್ತು ಪ್ರೀತಿಯಲ್ಲೇ ವಿಶ್ವಾಸ ಕಳೆದುಕೊಳ್ಳುವಿರಿ - ಇದು ಬಹಳ ಅಪಾಯಕರವಾದ ಸ್ಥಿತಿ.
Page 17
Content: ಪ್ರೀತಿ ಮತ್ತು ದುಃಖ ಏಕೆ ಯಾವಾಗಲೂ ಕೂಡಿಕೊಂಡು ಇರುವವು ?
Content: ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಒಂದೇ ಉತ್ತರ ಸೂಚಿಸಲಾಗುವುದು. ಪ್ರೀತಿಯು ಲೆಕ್ಕಚಾರದ ಆಧಾರದ ಮೇಲೆ ಇರುವವರೆಗೆ ಅದು ಖಂಡಿತ ದುಃಖವಾಗಿ ಪರಿಣಮಿಸುವುದು.
Content: ನಮ್ಮೆಲ್ಲರಿಗೂ ಗೊತ್ತಿಲ್ಲದೇಇರುವ ಒಂದು ಮುಖ್ಯವಾದ ವಿಷಯವೆಂದರೆ, ಬಹಳಮಟ್ಟಿಗೆ ಸಂಬಂಧಗಳಲ್ಲಿ, ನಮಲಿದ ಕೊರತೆಗಳ ಅಥವಾ ಅರೆಕೊರೆಯನು ಪೂರೈಸುವುದಕ್ಕೆ ನಾವು ಇನ್ನೊಬ್ಬರ ಕಡೆ ತಿರುಗುತ್ತೇವೆ. ಅವರು ನಮ್ಮ ಸೊಕ್ಕನ್ನು ಮೇಲೆಕಕ್ಕೆ ಎತ್ತಿ, ಉತ್ತೇಜಿಸಿ ನಮ್ಮನ್ನು ‘ಸಂಪೂರ್ಣ’ ಮಾಡುವ ತನಕ ಆ ಸಂಬಂಧವು ‘ಪ್ರೀತಿಯ’ ಸಂಬಂಧವಾಗಿರುವುದು. ಆದರೆ ಹೀಗೆ ಎಷ್ಟು ದಿನ ನಡೆಯಬಲ್ಲದು ? ಎಷ್ಟು ದಿನ ಇನ್ನೊಬ್ಬರು ನಮ್ಮನು ತಲೆಯ ಮೇಲೆ ಕೂರಿಸಿಕೊಂಡಿರುವರು ? ಎಷ್ಟು ದಿನ ಅವರು ನಮ್ಮ ಸೊಕ್ಕನ್ನು ಬೆಂಬಲಿಸುತ್ತಾ ಇರಲು ಸಾಧ್ಯ ? ಅವರ ಬೆಂಬಲ, ಅವರ ಉತ್ತೇಜನ, ನಮ್ಮ ಅಹಂಕಾರವನ್ನು ಮೇಲೇತ್ತಿಸುವುದನ್ನು ನಿಲ್ಲಿಸಿದಾಗ, ಹಿಂದಕ್ಕೆ ತಳ್ಳಿದ್ದ ನಮ್ಮಲಿದ್ದ ಕೊರತೆಗಳ, ಆಸುರಕ್ಷತೆಯ, ಭಯದ ಭಾವನೆಗಳು ಮತ್ತೊಮ್ಮೆಮುಂದಕ್ಕೆ ಬರುವುದು.
Content: ಚೆನ್ನಾಗಿ ತಿಳಿದುಕೊಳ್ಳಿ : ಸಂಬಂಧಗಳು ನಿಮಗೆ ದುಃಖ ಉಂಟು ಮಾಡಲಾರವು. ಅವುಗಳು ಕೇವಲ ನಿಮ್ಮಲ್ಲಿ ಮೊದಲೇ ಇದ್ದ ತಡೆಗಟ್ಟಿದ ದುಃಖವನ್ನು ಹೊರ
Content: ಹೊರೋಡಿಸುವವು, ಮತ್ತು ನೀವು ನಿಮ್ಮ ಕೊರತೆಗಳನ್ನು , ಅಪೂರ್ಣತೆಯನ್ನು ಹೊರಗಡೆಯಿಂದ (ಬೇರೆಯವರಿಂದ) ಪೂರೈಸುವುದಕ್ಕೆ ಬಯಸುವ ತನಕ ನೀವು ಪ್ರೀತಿಯ ಸಂಬಂಧದಲ್ಲಿ ದುಃಖವನ್ನು ಅನುಭವಿಸುವಿರಿ.
Content: ನೀವು ಸ್ವಸಂಪೂರ್ಣವಾಗಿರುವುದಕ್ಕೆ ಪ್ರಯತ್ನಿಸಿ. ನಿಮ್ಮ ಅಂತರಂಗದೊಳಗೆ, ನಿಮ್ಮ ಆಸ್ತಿತ್ವದಲ್ಲಿ ಕೇಂದ್ರೀಕರಿಸಿಕೊಂಡು ಇರಿ. ಸಂಬಂಧದಲ್ಲಿ ನೀವು ಏನು ಪಡೆಯಬಹುದೆಂದು ಬಯಸುವ ಬದಲು ನಿಮ್ಮಿಂದ ಏನು ಕೊಡಲು ಸಾಧ್ಯ ಎಂಬ ಏಕಚಿತ್ತ ಗುರಿಯನ್ನು ಇಟ್ಟುಕೊಂಡು ಸಂಬಂಧವನ್ನು ಪಾಲಿಸಿ. ಪ್ರೀತಿಯ ಮೊದಲನೆಯ ಪಾಠ : ಬೇರೆಯವರಿಂದ ಪ್ರೀತಿಯನ್ನು ಬಯಸಬೇಡಿ. ಪ್ರೀತಿಯ ಭಿಕ್ಷೆ ಬೇಡಬೇಡಿ. ನಾವೆಲ್ಲರೂ ಬೇರೆಯವರ ಪ್ರೀತಿ, ಅವರ ಗಮನದ, ಒಂದು ವಿಧವಾದ ಭಿಕ್ಷೆಯನ್ನು ನಿರಂತರ ಬೇಡುತ್ತಾ ಇರುತ್ತೇವೆ. ನೀವೇ ಪ್ರೀತಿಯ ಭಿಕ್ಷೆ ಬೇಡುತ್ತಿರುವ ಸ್ಥಿತಿಯಲ್ಲಿದ್ದರೆ, ನೀವು ಹೇಗೆ ನಿಮ್ಮ ಪ್ರೀತಿಯನ್ನು ಬೇರೆಯವರಿಗೆ ಕೊಡಬಲ್ಲಿರಿ?
Content: ನಿಮ್ಮ ಪ್ರೀತಿಯು ನಿಮಗೆ ಪ್ರತಿಯಾಗಿ ಸಿಗುವುದೋ ಇಲ್ಲವೋ ಎಂದು ಚಿಂತಿಸಬೇಡಿ. ಪ್ರೀತಿಯು ಒಂದು ಕಾಣಕೆ, ಚೆನ್ನಾಗಿ ಲೆಕ್ಕಚಾರ ಮಾಡಿದ ಒಪ್ಪಂದ ಅಲ್ಲ. ಪ್ರೀತಿಯ ಅಂತರಂಗದಿಂದ ಹೊರಸೂಸುವುದು ಸಹಜಪ್ರಕೃತಿಯಾಗಿದ್ದರೆ ನೀವು ‘ಯಾರು ಪಡೆಯುವರು’, ‘ಯಾವಾಗ ಪಡೆಯುವರು’ ಎಂದು ಲೆಕ್ಕಚಾರವಿಲ್ಲದೆ
Page 18
Content: ಎಲ್ಲರಿಗೂ ಸಮವಾಗಿ ಹರದುವುದು. ಅದು ನಿಮಗೆ ಪ್ರತಿಯಾಗಿ ಪ್ರೀತಿ ಸಿಗುವುದೋ ಇಲ್ಲವೋ ಎಂದು ಲಕ್ಷಿಸುವುದಿಲ್ಲ. ಈ ಪ್ರೀತಿಯು ನಿಮ್ಮಲ್ಲಿ ಎಷ್ಟುರಮಟ್ಟಿಗೆ ತುಂಬಿರುವುದು ಎಂದರೆ ಹೇಗೆ ಮಳೆ ತುಂಬಿದ್ದ ಮುಗಿಲಿಗೆ ಮಳೆ ಗೆರೆಯುವ ಅವಶ್ಯಕತೆ ಇಡೆಯೋ, ಹೇಗೆ ಹೂವಿಗೆ ತನ್ನ ಸುಗಂಧವನ್ನು ಹೊರಸೂಸುವ ಅವಶ್ಯಕತೆ ಇಡೆಯೋ, ಅದೇ ರೀತಿಯಲ್ಲಿ ನಿಮಗೆ ನಿಮ್ಮ ಪ್ರೀತಿಯನ್ನು ಹೊರಸೂಸುವ ಅವಶ್ಯಕತೆ ಇರುವುದು. ಈ ರೀತಿಯ ಪ್ರೀತಿಯು ಕೊಡುವವರಿಗೂ ಹಾಗು ಪಡೆಯುವವರಿಗೂ ಶುಭ ವಾಗಿರುವುದು. ಇಬ್ಬರ ನಡುವೆ ಸಂಬಂಧದಲ್ಲಿ ಇಬ್ಬರೂ 'ಪಡೆಯುವ ತೀರದಿಂದ' 'ಕೊಡುವ ತೀರಕ್ಕೆ' ದಾಟಿದರೆ ಮಾತ್ರ ನೀವು ದುಃಖವನ್ನು ಮೀರಿ ಮುಂದೆ ಹೋಗುವಿರಿ.
Content: ಗuruವಿನ ಮೇಲೆ ಪ್ರೀತಿ ಆದರೆ ಅದೂ ಒಂದು ವಿಧವಾಗಿ ಪ್ರೀತಿಯಲ್ಲಿ 'ಬಿದ್ದ' ಹಾಗೆಯೇ ? (falling in love)
Content: ಇದು ಒಂದು ವಿಧವಾಗಿನಿಜ, ಮತ್ತು ನಿಜವೂ ಅಲ್ಲ! ಗಮನಿಸಿ ಕೇಳಿ. ಸಾಧಾರಣವಾಗಿ 'ಪ್ರೀತಿಯಲ್ಲಿ ಬೀಳುವುದು' (falling in love) ಎಂದರೆ ನೀವು ಪ್ರೀತಿಸಿದವರ ವ್ಯಕ್ತಿತ್ವದ, ರೂಪದ ಮೋಹ ಸಂಪೂರ್ಣವಾಗಿ ನಿಮ್ಮ ಮನಸ್ಸಿನಲ್ಲಿ ತುಂಬಿರುವುದು. ಗುರುಗಳ ವಿಷಯದಲ್ಲಿಯೂ ಹೀಗೇ ಆಗುವುದು. ಆದರೆ ಇದು ಕೇವಲ ಗುರುವಿನ ರೂಪದ ಮೋಹವನ್ನು ಮೀರಿ ಮುಂದಕ್ಕೆ ಹೋಗುವುದಕ್ಕೆ ಒಂದು ಮೆಟ್ಟಿಲಾಗಿರುವುದು.
Content: ಸಾಧಾರಣವಾಗಿ ನೀವು 'ಪ್ರೀತಿಯಲ್ಲಿ ಬಿದ್ದಾಗ' (fall in love) ನೀವು ಬೇರೆ ಅನೇಕ ರೀತಿಗಳಲ್ಲಿಯೂ 'ಬೀಳುವಿರಿ'. ಕಾರಣವೇಂದರೆ ಪ್ರೀತಿಯ ಜೊತೆಗೆ ಒಡೆತನ, ಹೊಟ್ಟೆಕಿಚ್ಚು ಅಧಿಕಾರ, ಕೋಪ ಇವಲ್ಲ ಸೇರಿಕೊಂಡು ಬರುವುವು. ಸಾಮಾನ್ಯವಾಗಿ ಪ್ರೇಮಿಗಳು ಒಬ್ಬರ ಜೊತೆ ಒಬ್ಬರು ಬಹಳ ಸೂಕ್ಷ್ಮವಾದ ಗುಟ್ಟಾಗಿರುವ ಕಣ್ಣುಮಚ್ಚಳೆ ಆಟವನ್ನು ಆಡುವರು. ಇಬ್ಬರಿಗೂ ತಮ್ಮ ತಮ್ಮ ಅಪ್ರೂಣತೆಯನ್ನು ಕೊರತೆಯನ್ನು ಪೂರೈಸಿಕೊಂಡು ಸಂಪೂರ್ಣಗೊಳಿಸುವುದಕ್ಕೆ ಇಬ್ಬರ ಸಮರ್ಥನೆಯ ಅವಶ್ಯಕತೆ ಇರುವುದು. ಆದರೆ ಅವರ ಅಹಂಕಾರವು
Page 19
Content: ತಮ್ಮ ಮೇಲೆ ಇನ್ನೊಬ್ಬರ ಅಧಿಕಾರ ಸಹಿಸಲಾರದು. ಈ ಅಸಹನೆಯು ಇನ್ನೊಬ್ಬರ ಮೇಲೆ ವಿಧಿಸುವ ಶಾರೀರಿಕ ಮತ್ತು ಮಾನಸಿಕ ಹಿಂಸೆಯಾಗಿ ಪ್ರಕಟವಾಗುವುದು. ಗುರುವಿನ ಮೇಲೆ ಇರುವ ಭಾವನೆಗಳಲ್ಲೂ ಇದೇ ಪ್ರೀತಿ, ಇದೇ ಭಯ ಇರುವುದು. ಆದರೆ ಈ ಮಾರ್ಗದಲ್ಲಿ ಆರ್ಥ ದಾರಿ ಹೋಗಿ ನಿಲ್ಲುವ ಹಾಗಿಲ್ಲ. ನೀವು ಸಂಪೂರ್ಣವಾಗಿ ಬೌದ್ಧಿಕವಾಗಿ ಹಾಗೂ ಹೃತೊರಕವಾಗಿ ಪ್ರೀತಿಸಬೇಕು. ಗುರು ಸಂಪೂರ್ಣವಾದ ಪ್ರೀತಿಯನ್ನು ನಿಮಗೆ ಕೊಡುವರು ಮತ್ತು ನೀವು ಅವರಿಗೆ ಸಂಪೂರ್ಣವಾಗಿ ಶರಣಾಗಬೇಕು. ಗುರುವನ್ನು ಹೃತೊರಕವಾಗಿ ಪ್ರೀತಿಸಿ ಶರಣಾದರೆ, ನಿಮ್ಮ ಆಹಂಕಾರವು ತಾನಾಗಿಯೇ ನಾಶವಾಗಿಹೋಗುವುದು. ನೀವು ಗುರುವಿನ ಬಳಿಗೆ ಬಂದಾಗ, ನೀವು ಸಾಮಾನ್ಯ ಸಂಬಂಧಗಳಲ್ಲಿ ನಿಮ್ಮ ಸೊಕ್ಕನ್ನು ಖಾಯಮಾಡಿಟ್ಟುಕೊಂಡಿರುವುದಕ್ಕೆ ಆಡಿದ ವಂಚನೆ ಮತ್ತು ಅಧಿಕಾರದ ಆಟವನ್ನು ಆಡಲಾರಿರಿ. ಇದು ನಿಮ್ಮ ಆಹಂಕಾರಕ್ಕೆ ಎಲಲಕ್ಕಿಂತ ಹೆಚ್ಚು ಕಠಿಣವಾದ ಒಂದು ಪರೀಕ್ಷೆ. ನೀವು ಇದನ್ನು ತಪ್ಪಿಸಿಕೊಳ್ಳಲಾರಿರಿ. ನೀವು ಒಂದು ಕಡೆಯ, ನಿಶ್ಚಿತವಾದ ಆಯ್ಕೆಯನ್ನು ಮಾಡಬೇಕು. ಪ್ರೀತಿಯೋ ಅಥವಾ ಭಯವೋ ಎಂದು ನೀವು ನಿಶ್ಚಯಿಸಬೇಕು. ನೀವು ಗುರುವನ್ನು ಸಂಪೂರ್ಣ ವಿಶ್ವಾಸ ಮತ್ತು ಪ್ರೀತಿಯಿಂದ ನಿಮ್ಮ ಅಂತರಂಗದೊಳಗೆ ಸ್ವಾಗತಿಸಿದರೆ, ಗುರುಗಳ ಪ್ರೀತಿಯ ಬೆಳಕೇ ನಿಮ್ಮಲ್ಲಿದ್ದ
Content: ಅಹಂಕಾರವನ್ನು ನಾಶಮಾಡಿ, ನಿಮ್ಮ ಅಂತರಂಗವನ್ನು ಪರಿವರ್ತಿಸುವುದು. ಗುರುಗಳ ಕೈಯಲ್ಲಿನೀವು ಒಂದು ಹೊಸ ಜನ್ಮವನ್ನುಪಡೆಯುವಿರಿ. ಇದೇ ಕಾರಣಕ್ಕಾಗಿ ಗುರುಗಳ ಮೇಲೆ ಇರುವ ಪ್ರೀತಿಯು ಯಾವಾಗಲೂ ಮನಷ್ಯನಲ್ಲಿ ಒಂದು ಅದ್ಭುತವಾದ ಔನತ್ಯವನ್ನು ನೀಡುವುದು. ನೀವು ಪ್ರೀತಿಯಲ್ಲಿ ಬೀಳಬಹುದು. ಆದರೆ ನಾನು ನಿಮ್ಮನ್ನು 'ಬಿದ್ದಿರುವುದಕ್ಕೆ' ಎಂದಿಗೂ ಬಿಡುವುದಿಲ್ಲ. ಬದಲಾಗಿನೀವು 'ಪ್ರೀತಿಯಲ್ಲೇರುವಿರಿ' ಎಂದು ನೋಡಿಕೊಳ್ಳುತ್ತೇನೆ.
Page 20
Content: ಪರಮಹಂಸ ನಿತ್ಯಾನಂದರನ್ನು ಕುರಿತು
Content: ಜೀವನದ ಉದ್ದೇಶವನ್ನು ಅರಿಯುವ ಮಾನವನ ಕೊನೆಯಿಲ್ಲದ ಹುಡುಕಾಟವು ಈ ವಾಕ್ಯದೊಂದಿಗೆ ಕೊನೆಗೊಳ್ಳುತ್ತದೆ. ಆನಂದವೂ ಮಾರ್ಗ ಮತ್ತು ಗುರಿ. ಇದೇ ನಮ್ಮ ನಡುವೆ ಇರುವ ಪರಮ ಜ್ಞಾನ ಹೊಂದಿದ ಮತ್ತು ಆಧ್ಯಾತ್ಮಿಕ ಆಧ್ಯಾತ್ಮಿಕ ಗುರಿಗಳಾದ ಪರಮಹಂಸ ನಿತ್ಯಾನಂದರ ಅನುಭವ ಮತ್ತು ಬೋಧನೆ.
Content: ಅವರ ಜೀವನ ಧ್ಯೇಯವು, ಆನಂದವೇ ಅಂತಿಮ ಗುರಿಯಲ್ಲ ಆದರೆ ಮಾರ್ಗವೇ ಆನಂದವೆಂಬುದು! - ಅಂದರೆ ದಿನದ 24 ಗಂಟೆಗಳೂ ಆನಂದದಲ್ಲಿ ಬದುಕುವುದು! ಎಂದು ಅನುಭವದಿಂದ ಅರಿವುದನ್ನು ಮೊದಲು ನೀಡುವುದು. ನಮ್ಮದೇ ಆಂತರ್ಯದ ಮಾರ್ಗದಲ್ಲಿ ಕೆಲಸ ಮಾಡುವ ಮುಖ್ಯಾಂತರ ಇದು ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಇದು ಸಾಧ್ಯವೆಂಬ ಅರಿವನ್ನು ನಮಲ್ಲಿಟರುತ್ತಾರೆ.
Content: ಪರಮಹಂಸರು ಹುಟ್ಟಿದ್ದು ತಿರುವಣ್ಣಾಮಲೈ- ದಕ್ಷಿಣ ಭಾರತದ ಆಧ್ಯಾತ್ಮಿಕತೆಯ ಶಕ್ತಿ ಕೇಂದ್ರದಲ್ಲಿ. ತೀವವಾದ ಧ್ಯಾನ, ಯೋಗದ ಅಧ್ಯಯನ, ತಂತ್ರ ಮತ್ತು ಇತರ ಪೌರಾತ್ಯ ಆಧ್ಯಾತ್ಮ ಜ್ಞಾನದ ಮುಖೇನ ಅವರು ಅಂತರಂಗದ ಪರಮಾನಂದವನ್ನು ಹೊಂದಿದರು. ಅವರದೇ ಸ್ವಂತ ಅನುಭವದಿಂದ ಪ್ರತಿಯೊಬ್ಬ ವ್ಯಕ್ತಿಯ ಜಾಗೃತಿಯನ್ನು ಸ್ಫೋಟಿಸಲು ಮತ್ತು ಆಧ್ಯಾತ್ಮಿಕವಾಗಿ ಬಲಾಡ್ಯ ವ್ಯಕ್ತಿಗಳನ್ನು ಸೃಷ್ಟಿಸಲು ತಮ್ಮ ಜ್ಞಾನವೇಒಂದನು ರೂಪಿಸಿದರು. ರೂಪಿಸಿದರು. ಲಸರಹಕ್ಕೊತ ಕಾಯಿಕ್ರಮಗಳು ಧ್ಯಾನವೆಂದು ಕರೆಯುವ ಸಹಜ ಜಾಗದಲ್ಲಿ ವ್ಯಕ್ತಿಯು ಬೀಳುವಂತೆ ಮಾಡುತ್ತವೆ. ಅವರು ಹೇಳುತ್ತಾರೆ, ಭೌತಿಕ ಜಗತ್ತಿನಲ್ಲಿ ಯಶಸ್ಸನ್ನು
Page 21
Content: ಮತ್ತು ನಿಮ್ಮ ಅಂತರಂಗದಲ್ಲಿ ಆಳವಾದ ಸಾಫಲ್ಯತೆಯನ್ನು ತರಲು ಧ್ಯಾನವು ಅನುಪಮ ಕೀಲಿಕೈ.
Content: ಲೈಫ್ ಬ್ಲಿಸ್ ಫೌಂಡೇಶನ್ ಕುರಿತು (LBF)
Content: ಲೈಫ್ ಬ್ಲಿಸ್ ಫೌಂಡೇಶನ್ ಎಂಬುದು ಅಂತರಂಗದ ಆನಂದಕ್ಕಾಗಿ ಪರಮಹಂಸರ ಜಾಗತೀಕ ಆಂದೋಲನ. 2003ನೇ ಇಸವಿಯಲ್ಲಿ ಸ್ಥಾಪನೆಗೊಂಡ ಇದು ಈಗ 33 ದೇಶಗಳಲ್ಲಿ 1000 ಕೇಂದ್ರಗಳಷ್ಟು ಹಬ್ಬಿದೆ. ಅದರ ತೆಕ್ಕೆಯಲ್ಲಿ ಇಂಟರ್ ನ್ಯಾಷನಲ್ ವೇದಿಕ್ ಹಿಂದೂ ಯೂನಿವರ್ಸಿಟಿ (IVHU) ಯುಎಸ್‌ಎ ಮತ್ತು ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ, ಯುಎಸ್‌ಎ, ಇವುಗಳನ್ನು ಹೊಂದಿದೆ.
Content: ಪ್ರಪಂಚದಾದ್ಯಂತ ನಿತ್ಯಾನಂದ ಮೆಡಿಟೇಶನ ಅಕಾಡಮೀಸ್ (NMAS) ಎಂಬ ಸಮಾವೇಶಗಳು ಇದರ ಆಧ್ಯಾತ್ಮಿಕ ಪ್ರಯೋಗಾಲಯಗಳಾಗಿ ಸೇವೆ ಮಾಡುತ್ತಿವೆ. ಇಲ್ಲಿ ಆಂತರಿಕ ಬೆಳವಣಿಗೆಗು ಆಗಾಧವಾಗಿದ್ದು ಬಾಹ್ಯ ಬೆಳವಣಿಗೆಯು ಸ್ವಾಭಾವಿಕ ಪರಿಣಾಮವಾಗಿರುತ್ತದೆ. ಈ ಸಮಾವೇಶಗಳು ಧ್ಯಾನದಿಂದೆ ವಿಜ್ಞಾನದಂತಹ ವಿವಿಧ ಚಟುವಟಕೆಗಳಿಂದ ಅನ್ವೇಷಿಸಲು ಮತ್ತು ವಿಸ್ಫೋಟನೆಗೊಳ್ಳಲು ಅನುವಾಗಲು ಒಂದು ಸ್ಥಳ ಮತ್ತು ಜಾಗವನ್ನು ನೀಡುತ್ತಿವೆ. ಭೌತಿಕ ಮತ್ತು ಆಧ್ಯಾತ್ಮಿಕ ಜಗತ್ತುಗಳು ವಿಲೀನಗೊಂಡು ಪರಮಾನಂದದ ಜೀವನವನ್ನು ಸೃಷ್ಟಿಸುವಂತಹ ಪರಿಮಾಣತ ಆಧ್ಯಾತ್ಮಿಕತೆ (Quantum Spirituality)ಯನ್ನು ಅವರು ಪೋಷಿಸುತ್ತವೆ. ಅವರು ಶೀಘ್ರವಾಗಿ ಮತ್ತು
Content: ಪರಿಣಾಮಕಾರಿಯಾಗಿ ಜೀವನದ ಬದಲಾವಣೆಯನ್ನು ಕೊಡುವಂತಹ ಖಚಿತವಾದ ಜೀವನದ ಪರಿಹಾರಗಳನ್ನು ನೀಡುತ್ತಿವೆ. IVHU ಮುಖಾಂತರ ಪ್ರಪಂಚದಾದ್ಯಂತ ವೈರುಧ್ಯ ಶ್ರೇಣಿಯ ಧ್ಯಾನತಂತ್ರಗಳನ್ನು ನೀಡಲಾಗುತ್ತಿದೆ. ಹಾಗೆಯೇ ನಿತ್ಯಾ ಸ್ಪಿರಿಚ್ಯುಯಲ್ ಹೀಲಿಂಗ್ ಸಿಸ್ಟಮ್ ಮುಖೇನ ಉಚಿತ ಗುಣವಾಡುವಿಕೆ, ಯುವ ಜನರಿಗೆ ಉಚಿತ ಶಿಕ್ಷಣ, ಕಲೆ ಮತ್ತು ಸಂಸ್ಕೃತಿಗೆ ಉತ್ತೇಜನ, ಸಾಮುದಾಯಿಕ ಕಾರ್ಯಕ್ರಮಗಳು, ಉಚಿತ ವೈದ್ಯಕೀಯ ಶಿಬಿರಗಳು, ಉಚಿತ ಭೋಜನ, ಭಾರತದಲ್ಲಿ ಒಂದು ವರ್ಷ ಆವಧಿಯ ನಿವಾಸಿತ ಆಧ್ಯಾತ್ಮಿಕ ಶಿಕ್ಷಣ ಕಾರ್ಯಕ್ರಮ, ಮಕ್ಕಳಿಗಾಗಿ ಓಲಾಂಗಣ ಗುರುಕುಲ ಪದ್ಧತಿಯ ಶಿಕ್ಷಣ, ಮುಂತಾದ ಇದೇ ರೀತಿಯ ಇನ್ನೂ ಅನೇಕ ಸೇವೆಗಳನ್ನು ಪ್ರಪಂಚದಾದ್ಯಂತ ನೀಡಲಾಗುತ್ತಿವೆ.
Content: ನಿತ್ಯಾನಂದ ಧೀರ ಸೇವಾ ಸೇನಾ (NDSS)ದ ಆನಂದ ಸೇವಕ್ಸ್ ಎಂಬ ಸ್ವಯಂ ಸೇವಕರು ಪ್ರಪಂಚದಾದ್ಯಂತ ಹೆಚ್ಚುತ್ತಲಿರುವ ಸಮರ್ಪಿತ ಸ್ವಯಂ ಸೇವಕರನ್ನೊಳಗೊಂಡಿದ್ದು ಅತ್ಯುತ್ಸಾಹದಿಂದ ಪ್ರಚಾರವನ್ನು ಬೆಂಬಲಿಸುತ್ತಿದೆ.
Content: ಲೈಫ್ ಬ್ಲಿಸ್ ಫೌಂಡೇಶನ್ (LBF) ನ ಕೊಡುಗೆ
Content: ದೇಹ, ಮನಸ್ಸು ಮತ್ತು ಆತ್ಮದ ಹೃಂತಲಲ್ಲಿ ಲಕ್ಷಗಟ್ಟಲೆ ಜನರಿಗೆ ಉಪಯೋಗವಾಗಲು ಪ್ರಪಂಚದಾದ್ಯಂತ LBF ವಿಶಿಷ್ಟ ಪೂರ್ಣ ಧ್ಯಾನ ಕಾರ್ಯಕ್ರಮಗಳನ್ನು ನೀಡುತ್ತದೆ. ಅವುಗಳಲ್ಲಿ ಕೆಲವು:
Page 22
Content: LBP ಹಂತ 1 - ಲೈಫ್ ಬ್ಲಸ್ ಪ್ರೋಗ್ರಾಂ
Content: ನಿಮ್ಮನ್ನೇ ನೀವು ಸಚೇತನಗೊಳಿಸಿಕೊಳ್ಳಿ
Content: ನಿಮ್ಮ ವ್ಯವಸ್ಥೆಯಲ್ಲಿರುವ ಏಳು ಪ್ರಮುಖ ಚಕ್ರಗಳನ್ನು ವಿಶ್ರಾಂತಗೊಳಿಸಿ ಸಚೇತನಗೊಳಿಸುವ ಚಕ್ರದ ಮೇಲೆ ನಡೆಸುವ ಕಾರ್ಯಕ್ರಮ. ಇದು ನಿಮ್ಮ ವಿವಿಧ ಮನೋಭಾವನೆಗಳ ನೇರ ಪ್ರಯೋಗಾತ್ಮಕ ತಿಳುವಳಿಕೆಗಳಿಂದ ಬೆಂಬಲಿತವಾದ ಸ್ಪಷ್ಟವಾದ ಬೌದ್ಧಿಕ ತಿಳುವಳಿಕೆಯನ್ನು ನೀಡುವುದು. ಇದು ಬೌದ್ಧಿಕ ಹಂತದಲ್ಲಿ ಆಧ್ಯಾತ್ಮಿಕತೆಯನ್ನು ಪರಿಣಾಮವನ್ನು ಉಂಟುಮಾಡುವಂತೆ ವಿನ್ಯಾಸಗೊಳಿಸಲಾಗಿದೆ.
Content: ನಿಮ್ಮದೇ ಆತ್ಮಾನಂದದ ವಾಸ್ತವಿಕತೆಯನ್ನು ಅನುಭವಿಸಲು ಇರುವ ಒಂದು ಖಚಿತವಾದ ಜೀವನ ಪರಿಹಾರ. ಅದೊಂದು ಪ್ರಪಂಚದಾದ್ಯಂತ ಲಕ್ಷಾಂತರ ಜನರಿಂದ ಸಾಕ್ಷೀಕರಿಸಲ್ಪಟ್ಟುನ್ನತವಾದ ಕಾರ್ಯಾಗಾರವಾಗಿದೆ.
Content: LBP ಹಂತ 2 - ನಿತ್ಯಾನಂದ ಸುಧಾರಣಾ ಪ್ರೋಗ್ರಾಂ
Content: ಸಾವಿನ ರಹಸ್ಯದ ಭೇದನೆ
Content: ಸಾವಿನ ಕಲ್ಪನೆಯ ಗಹನತೆಯನ್ನು ನಿವಾರಿಸಿ ಜೀವನದ ಕಲೆಯನ್ನು ಬಿಡುಗಡೆಗೊಳಿಸುವ ಒಂದು ಕಾರ್ಯಕ್ರಮ. ಸಾವಿನ ಉದ್ದೇಶ ಹಾಗೂ ಕ್ರಮವು ನಿಮಗೆ ತಿಳಿದಿದ್ದರೆ, ನಿಮ್ಮ ಜೀವನವನ್ನು ಪೂರ್ಣವಾಗಿ ಬೇರೆಯದೇ ರೀತಿಯಲ್ಲಿ ಜೀವಿಸುವಿರಿ ! ಇದು ಆಳವಾಗಿ ಬೇರೂರಿದ ಮತ್ತು ಪ್ರಜ್ಞಾಪೂರ್ವಕ ಮನೋಭಾವನೆಗಳಿಂದ ಬೇರ್ಪಡಿಸಲು ಜಾಗವನ್ನು ಸೃಷ್ಟಿಸುತ್ತದೆ. ಇವೆಲ್ಲವೂ
Content: ಅಂತಿಮವಾದ ಸಾವಿನ ಭಯದಿಂದ ಹುಟ್ಟಿರುವಂತಹವು. ಸ್ವಾಭಾವಿಕ ಬುದ್ಧಿ ಮತ್ತು ಸ್ವಯಂ ಸ್ಫೂರ್ತಿದಾಯಕವಾದ ಉತ್ಸಾಹದಿಂದ ನಡೆಸಲ್ಪಡುವ ಒಂದು ನವ ಜೀವನಕ್ಕೆ ಇದು ಹೆಬ್ಬಾಗಿಲು.
Content: LBP ಹಂತ 3 - ಆತ್ಮ ಸುಧಾರಣಾ ಪ್ರೋಗ್ರಾಂ / ಧ್ಯಾನ ಸುಧಾರಣಾ ಪ್ರೋಗ್ರಾಂ
Content: ನಿಮ್ಮೊಳಗೆ ನೀವು ಸಂಪರ್ಕವನ್ನು ಹೊಂದಿರಿ
Content: ಇದೊಂದು ರಹಸ್ಯಗಳನ್ನು ಭೇದಿಸಬಲ್ಲಂತಹ ಕಾರ್ಯಕ್ರಮವಾಗಿದ್ದು ಮನಸ್ಸಿನ ಕಾರ್ಯಗಳನ್ನು ಸ್ವಾಭಾವಿಕವಾಗಿ ನಿಶೇಧಿಸಿ ಅಥವಾ ನಿಮ್ಮೊಳಗೆ ಏನೇ ಅಥವಾ ಯಜಮಾನರು ಹೇಗೆ ಆಗಬಹುದೆಂದು ಅನುಭವ ಪೂರ್ವಕವಾಗಿ ತೋರಿಸುವುದು.
Content: ನಿಮ್ಮನ್ನು ಮೂಲ ಮನೋಭಾವನೆಗಳಾದ ಕಾಮ, ದುರಾಸೆ, ಭಯ ಮತ್ತು ಕೋಪಗಳಿಂದ ತರ್ಕದ ಸೂಕ್ಷ್ಮ ಸತ್ಯಗಳು ಬುದ್ಧಿವಂತಿಕೆ ಮತ್ತು ಅಂತಿಮವಾಗಿ ಪರಮಾನಂದಕ್ಕೆ ನಿಮ್ಮನ್ನು ಮೇಲೇತ್ತಲು ಒಂದು ಖಚಿತವಾದ ಪರಿಹಾರ.
Content: ಲೈಫ್ ಬ್ಲಸ್ ಟೆಕ್ನಾಲಜಿ (LBT)
Content: LBT ಯು 18 ರಿಂದ 30 ವರ್ಷದೊಳಗಿನ ಯುವಜನಾಂಗಕ್ಕಾಗಿ ಇರುವ ಒಂದು ವರ್ಷದ ಅವಧಿಯ ನಿವಾಸಿತ ಕಾರ್ಯಕ್ರಮ. ಪೌರಾತ್ಯ ವ್ಯವಸ್ಥೆಯಾದ ವೇದೀಯ ಶಿಕ್ಷಣದಲ್ಲಿ ಅದರ ಬೇರುಗಳು ಇದ್ದು ಈ ಕಾರ್ಯಕ್ರಮವು ಆಧುನಿಕ ಯುವಜನಾಂಗಕ್ಕೆ ಒಳ್ಳೆಯ ದೈಹಿಕ, ಮಾಸಿಕ ಮತ್ತು ಮನೋಭಾವನೆಗಳ ಆರೋಗ್ಯದಿಂದ ಶಕ್ತೀಕರಿಸಲು ವಿನ್ಯಾಸಗೊಳಿಸಲಾಗಿದೆ.
Page 23
Content: ಅವರ ಸೃಜನಾತ್ಮಕ ಬುದ್ಧಿವಂತಿಕೆ ಮತ್ತು ಸ್ವಯಂ ಸ್ಫೂರ್ತಿಯನ್ನು ಪೋಷಿಸುವುದರ ಮೂಲಕ, ಮತ್ತು ವ್ಯಕ್ತಿಯ ಕೌಶಲ್ಯವನ್ನು ನೀಡುವ ಮೂಲಕ, ಆರ್ಥಿಕವಾಗಿ ಮತ್ತು ಆಧ್ಯಾತ್ಮಿಕವಾಗಿಸ್ಪಯಂ ಪೂರ್ಣರಾದ ಯುವಕರನ್ನು ಸೃಷ್ಟಿಸುತ್ತದೆ.
Content: ಎಲ್ಲಕ್ಕಿಂತ ಮಿಗಿಲಾಗಿ ಇದು ಜ್ಞಾನೋದಯ ಹೊಂದಿದ ಗುರುವಿನೊಬ್ಬರ ಪಾಲನೆಯಲ್ಲಿ ಇದ್ದು ಕಲಿಯಬಹುದಾದಂತಹ ಜೀವಿತಕಾಲದ ಒಂದು ಸದವಕಾಶವನ್ನು ನೀಡುತ್ತದೆ.
Content: ನಮ್ಮನ್ನು ಸಂಪರ್ಕಿಸಲು:
Content: USA
Content: ಲೈಫ್ ಬ್ಲಿಸ್ ಫೌಂಡೇಶನ್
Content: ಮಾಂಟ್ಕ್ಲೇರ್
Content: CA 91763, USA
Content: ಫೋನ್ : 626 531 6065
Content: E-mail : [email protected]
Content: URL : www.lifebliss.org
Content: ಭಾರತ :
Content: ನಿತ್ಯಾನಂದ ಧ್ಯಾನ ಪೀಠಂ
Content: ನಿತ್ಯಾನಂದ ಪುರಿ, ಕಲ್ಲುಗೋಪ ಹಳ್ಳಿ, ಮೈಸೂರು ರಸ್ತೆ ಬಿಡದಿ, ಬೆಂಗಳೂರು - 562 109. ಕರ್ನಾಟಕ. ಭಾರತ
Content: ಆಶ್ರಮ : 91-80-65591844,27202084
Content: Email: [email protected]
Content: URL: www.dhyanapeetam.org
Content: www.nithyananda.org
Content: ಪ್ರಮುಖವದ ಇತರ ಆಶ್ರಮಗಳು ಮತ್ತು ಕೇಂದ್ರಗಳಿಗ, www.dhyanapeetam.org ಗೆ ಭೇಟಿ ಕೊಡಿ.
Page 24
Content: ಓದನ್ನು ಮುಂದುವರಿಸಲು ಸೂಚಿತ ಪುಸ್ತಕಗಳು
Content: ನೋವಿನಿಂದ ಆನಂದಕ್ಕೆ
Content: ಸರಳವಾದ ಸತ್ಯ ನೇರವಾಗಿ!
Content: ಚಿಂತೆಯಿಂದ ಚಿಂತನೆಗೆ
Content: ತೆರೆಬಾಗಿಲು ತಂಗಾಳಿ ಒಳಗೆ ಬೀಸಲಿ !
Content: ನಮ್ಮ ಜೀವನದಲ್ಲಿ ಆಧ್ಯಾತ್ಮಿಕತೆಯು ಸಮಂಜಸವೇ?
Content: ನಿಮ್ಮ ಪ್ರಶ್ನೆಗಳಿಗೆ ಉತ್ತರ
Content: ಖಚಿತ ಪರಿಹಾರಗಳು
Content: ನಿತ್ಯಧ್ಯಾನ
Content: ಅವರ ಹೆಸರು ನಿತ್ಯಾನಂದ
Content: ಪರಮಹಂಸ ನಿತ್ಯಾನಂದರ ಪುಸ್ತಕಗಳು 23 ಭಾಷೆಗಳಲ್ಲಿ ಲಭ್ಯವಾಗಿವೆ.
Content: ಲೈಫ್ ಬ್ಲಿಸ್ ಗೇಲರಿಯಾನಿಂದ DVDsಗಳು, CDsಗಳು, 'ಮೆಡಿಟೇಶನ್ ಕಿಟ್' ಮತ್ತು ಇತರ ಪದಾರ್ಥಗಳಾಗಿ
Content: www.lifeblissgalleria.com ಅನ್ನು ವೀಕ್ಷಿಸಿ ಅಥವಾ ನಮ್ಮನ್ನು ಸಂಪರ್ಕಿಸಿ.
Content: Ebook ISBN: 979-8-88572-096-0