Books / pdf

1. pdf

Page 1

Content:

  • ಪರಮಹಂಸ ನಿತ್ಯಾನಂದ-

Content: ನೋವಿನಿಂದ ಆನಂದಕ್ಕೆ

Content: ('From Pain to Bliss' in Kannada)

Page 2

Content: ಪ್ರಪಂಚದಾದ್ಯಂತ ನಿತ್ಯಾನಂದ ಪಂಥದ ಸ್ವಾಮಿಗಳಿಗೆ ಮತ್ತು ಆನಂದ ಸಮಾಜಿಯರಿಗೆ ನೀಡಲಾದ ಪ್ರವಚನಗಳು

Content: ನೋವಿನಿಂದ ಆನಂದಕ್ಕೆ

Content: ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ ಮುದ್ರಣಾಲಯದಿಂದ ಪ್ರಕಟಿತ

Content: (ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ, ಯು.ಎಸ್.ಎ.ಯ ಒಂದು ವಿಭಾಗ)

Page 3

Content: Ebook ISBN: 979-8-88572-472-2

Content: ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ ಮುದ್ರಣಾಲಯದಿಂದ ಪ್ರಕಟಿತ (ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ, ಯು.ಎಸ್.ಎ.ಯ ಒಂದು ವಿಭಾಗ)

Content: ಕಾಪಿರೈಟ್ © 2007

Content: ಮೊದಲ ಆವೃತ್ತಿ: 2004

Content: ಎರಡನೇ ಆವೃತ್ತಿ: ಡಿಸೆಂಬರ್ 2007

Content: ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ.

Content: ಈ ಪ್ರಕಟಣೆಯ ಯಾವುದೇ ಭಾಗವನ್ನು ನಕಲು ಮಾಡುವುದಾಗಲೀ ಅಥವಾ ಮರಳಿ ಹೊಂದುವಂತಹ ವ್ಯವಸ್ಥೆಯಲ್ಲಿ ಸಂಗ್ರಹಿಸುವುದಾಗಲೀ ಅಥವಾ ಯಾವುದೇ ರೂಪದಲ್ಲಿ ಅಥವಾ ಎಲೆಕ್ಟಾನಿಕ್, ಯಾಂತ್ರಿಕವಾಗಿ, ಫೋಟೋ ಕಾಪಿಯಿಂಗ್, ರೆಕಾರ್ಡಿಂಗ್ ಅಥವಾ ಇನ್ನಿತರ ವಿಧಾನದಲ್ಲಿ ರವಾನಿಸುವುದಾಗಲೀ ಪ್ರಕಾಶಕರ ಲಿಖಿತ ಅನುಮತಿ ಇಲ್ಲದೆ ಮಾಡಕೂಡದು.

Content: ಒಂದು ವೇಳೆ ನೀವು ಈ ಪ್ರಕಟನೆಯ ಯಾವುದೇ ಮಾಹಿತಿಯನ್ನು ನಿಮಗಾಗಿ ಬಳಸಿಕೊಂಡರೆ ಲೇಖಕರಾಗಲೀ ಮತ್ತು ಪ್ರಕಾಶರಾಗಲೀ ನಿಮ್ಮ ಕೃತ್ಯಗಳಿಗೆ ಹೊಣೆಯನ್ನ ಹೊರುವುದಿಲ್ಲ ಈ ಪುಸ್ತಕದ ಮಾರಾಟದಿಂದ ಬರುವ ಎಲ್ಲಾ ಆದಾಯವು ಉದಾರ ಕಾರ್ಯಗಳನ್ನು ಬೆಂಬಲಿಸುವುದಕ್ಕಾಗಿ ವಿನಿಯೋಗವಾಗುತ್ತದೆ.

Content: ಭಾರತದಲ್ಲಿ ಮುದ್ರಣ: Modern Printing Press

Content: Bangalore

Content: E-mail:[email protected]

Page 4

Content: ಈ ಪ್ರಪಂಚದಲ್ಲಿ ನೋವು ಅಥವಾ ದುಃಖ ಎಲ್ಲಕ್ಕಿಂತ ಹೆದರಿಸುವಂತಹ ವಿಷಯ.

Content: ಈ ಪ್ರಪಂಚದಲ್ಲಿರುವ ಎಲ್ಲಾ ಜೀವಿಗಳಿಗೂ ಒಂದೇ ವಿಷಯದ ಭಯ.

Content: ನೋವಿನ ಭಯ ! ನೀವು ಸ್ವಲ್ಪ ಆಳವಾಗಿ ನೋಡಿದರೆ ಮಾನವನು ಸಾವಿಗಿಂತ ಹೆಚ್ಚಾಗಿ ಅಂತಿಮ ಕಾಲದಲ್ಲಿ ಆಗುವ ನೋವು ಮತ್ತು ಪ್ರಾಣ ಸಂಕಟಕ್ಕೆ ಹೆದರುತ್ತಾನೆ.

Content: ಬಹಳ ಜನ ಬಡತನಕ್ಕೆ ಹೆದರುತ್ತಾರೆ. ಕೆಲವರು ಸಂಬಂಧಗಳಿಗೆ ಹೆದರುತ್ತಾರೆ - ಇನ್ನೂ ಕೆಲವರು ರೋಗಕ್ಕೆ - ಆದರೆ ಮನುಷ್ಯನ ಎಲ್ಲಾ ಭಯಗಳು ಕಡೆಗೆ ನೋವಿನ ಭಯಕ್ಕೆ ಪರಿಣಮಿಸುತ್ತವೆ.

Content: ಇದೇ ಕಾರಣದಿಂದ ಜನರು ನೋವು ಉಂಟು ಮಾಡದೆ ಇರುವ ದೊಡ್ಡ ಕಾಯಿಲೆಯನ್ನಾದರೂ ಅನುಭವಿಸಲು ತಯಾರಾಗಿರುವರು.

Content: ಆದರೆ ಒಂದು ಸಣ್ಣ ತಲೆ ನೋವನ್ನು ಅನುಭವಿಸಲು ಸಿದ್ದರಾಗಿರುವುದಿಲ್ಲ.

Page 5

Content: ನೋವು ಎಂಬುದು ಏನು ?

Content: ಈ ವಿಷಯವನ್ನು ನಾವು ಆಳವಾಗಿ ಪರಿಶೀಲಿಸೋಣ, ನೋವು ಶಾರೀರಿಕವಾಗಿರಬಹುದು, ಮಾನಸಿಕವಾಗಿರಬಹುದು ಅಥವಾ ಭಾವನಾತ್ಮಕವಾಗಿರಬಹುದು.

Content: ಶಾರೀರಿಕ ನೋವಿನ ಬಗ್ಗೆ ನಾವು ಚಿಂತಿಸಬೇಕಾಗೇ ಇಲ್ಲ. ಅದು ಒಂದು ವಿಧವಾಗಿ ಶರೀರದ ಮೂಲಭೂತ ಅವಶ್ಯಕತೆ. ಸ್ವಲ್ಪ ಯೋಚನೆ ಮಾಡಿ ನೋಡಿ - ನಮ್ಮ ದೇಹಕ್ಕೆ ನೋವು ಎಂದಿಗೂ ಉಂಟಾಗದಿದ್ದರೆ ನಾವು ನಮ್ಮ ಕೂದಲನ್ನು ಹೇಗೆ ಬೇರೆ ಬೇರೆ ರೀತಿಯಲ್ಲಿ ಹೇರ್ ಸ್ಟೈಲ್ ಮಾಡಿಕೊಳ್ಳುತ್ತೀವೋ ಅದೇ ತರಹ ನಾವು ನಮ್ಮ ಮುಖ ಕೈಕಾಲುಗಳನ್ನೂ ಬೇರೆ ಬೇರೆ ವಿಧವಾಗಿ ಸ್ಟೈಲ್ ಮಾಡಿಕೊಳ್ಳುತ್ತಿದ್ದೆವು. ಈಗಿನ ಕಾಲದ ಯುವಕರು ಫ್ಯಾಷನ್*ಗಾಗಿ ಏನು ಮಾಡುತ್ತಾರೋ ಅಂತ ಹೇಳುವುದಕ್ಕೆ ಸಾಧ್ಯವಿಲ್ಲ! ಇದು ಒಂದು ತಮಾಷೆಯ ಮಾತು - ಆದರೆ ನಿಜ ಏನೆಂದರೆ, ನೋವು ಶಾರೀರಿಕ ವಿವೇಕದ ಒಂದು ಪ್ರತೀಕ. ಈ ಶಾರೀರಿಕ ನೋವೇ ನಮ್ಮನ್ನು ಸಂಪೂರ್ಣ ಮಾನವರನ್ನಾಗ ಉಂಟುಮಾಡುತ್ತದೆ.

Content: ನಾವು ನಂಬಿಕೊಂಡಿರುವುದರ ಹಾಗೆ ನಮ್ಮಲ್ಲಿ ಹೆಚ್ಚಿನವರು ತಮ್ಮ ಸಂಪೂರ್ಣ ದೇಹದಲ್ಲಿ ವಾಸ ಮಾಡುತ್ತಾ ಇಲ್ಲ. ನಾವು ಕೇವಲ ಶರೀರದ ಮೇಲಿನ ಭಾಗಗಳಲ್ಲಿ ವಾಸ ಮಾಡುತ್ತಿದ್ದೇವೆ ಮತ್ತು ಕೆಳಗಿನ ಭಾಗಗಳನ್ನು ಉಪೇಕ್ಷಿಸುತ್ತಿದ್ದೇವೆ. ನಾನು ಹೇಳುವುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಒಂದು ಕೆಲಸ ಮಾಡಿ : ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡು, ನಿಮ್ಮನ್ನು ನೀವೇ ಕಲ್ಪನೆ ಮಾಡಿಕೊಳ್ಳಿ. ನಿಮ್ಮ ಹೆಸರಿಟ್ಟು ಕರೆಯಿರಿ. ಶರೀರದ ಯಾವ ಭಾಗ ನಿಮ್ಮ ಮನಸ್ಸಿಗೆ ಜ್ಞಾಪಕ ಬರುವುದು ? ಖಂಡಿತ ನಿಮ್ಮ ಮುಖ, ಕೈಗಳು ಮತ್ತು ಎಲ್ಲಾ ಮೇಲಿನ ಭಾಗಗಳು ನಿಮ್ಮ ಮನಸ್ಸಿಗೆ ಬಂದಿರುವುದು - ನಿಮ್ಮ ಶರೀರದ

Page 6

Content: ಕೆಳಗಿನ ಭಾಗಗಳು ನಿಮಗೆ ಖಂಡಿತ ಜ್ಞಾಪಕ ಬಂದಿರುವುದಿಲ್ಲ. ಈ ಪ್ರಯೋಗವು, ನಾವು ಪ್ರತಿ ಒಂದು ಅಂಗದಲ್ಲಿ ಪ್ರತಿ ಒಂದು ಜೀವಕಣದಲ್ಲಿ ಸಂಪೂರ್ಣವಾಗಿ ಜೀವಂತರಾಗಿಲ್ಲ ಎಂದು ತೋರಿಸುತ್ತದೆ - ನಮ್ಮ ಮನಸ್ಸಿನಲ್ಲಿ ಕೂಡ ನಾವು ಈ ವ್ಯತ್ಯಾಸವನ್ನು ಮಾಡುತ್ತಾ ಇದ್ದೇವೆ. ಮೇಲಿನ ಭಾಗಗಳು ಒಡೆಯರಾಗಿರುತ್ತವೆ ಮತ್ತು ಕೆಳಗಿನ ಭಾಗಗಳು ಸೇವಕರಾಗಿರುತ್ತವೆ. ಈ ವ್ಯತ್ಯಾಸವನ್ನು ನೀವು ಗೊತ್ತಿಲ್ಲದೆ ಮಾಡಿದರೂ ನಿಮ್ಮ ಚೈತನ್ಯವು (ಎನರ್ಜಿಯು), ಕೇವಲ ನೀವು ಏಕಾಗಿರುವ ಇಟಿಧ ಶರೀರದ ಭಾಗಗಳಿಗೆ ಮಾತ್ರ ತಲುಪುವುದು. ನಿಮ್ಮ ಕೆನ್ನೆಯನ್ನು ಸ್ವಲ್ಪ ಸ್ಪರ್ಶಿಸಿ ನೋಡಿ - ಬಹಳ ಜೀವಂತವಾಗಿ ಇದೆ, ಸೂಕ್ಷ್ಮವಾಗಿ ಇದೆ ಅಲ್ಲವೆ ? ಈಗ ನಿಮ್ಮ ಪಾದವನ್ನು ಮುಟ್ಟಿ ನೋಡಿ - ನಿಮ್ಮ ಪಾದವು ನಿಮ್ಮ ಕೆನ್ನೆಯಷ್ಟು ಸೂಕ್ಷ್ಮವಾಗಿ ಇಲ್ಲ ಅಂತ ಗೊತ್ತಾಗಿರಬೇಕು. ಅದು ಏಕೆ? ನಿಮಗೆ ನಂಬುವುದಕ್ಕೆ ಸ್ವಲ್ಪ ಕಷ್ಟವಾಗಬಹುದು - ಆದರೆ ಅದು ಏಕೆಂದರೆ ನೀವು ಆ ಭಾಗಕ್ಕೆ ಸಾಕಷ್ಟು ಗಮನ ಕೊಡುವುದಿಲ್ಲ.

Content: ಮನಸ್ಸು ನೋವನ್ನು ಹಿಡಿತದಲ್ಲಿ ಇಟ್ಟುಕೊಳ್ಳಬಹುದೇ ?

Content: ಸಾಮಾನ್ಯವಾಗಿ ಮಾಸಿಕ ಹಾಗೂ ಭಾವನಾತ್ಮಕ স্তರದಲ್ಲಿ ಉಂಟಾಗುವ ನೋವು ನಮ್ಮ ಯಾವುದೇ ಒಂದು ತೀರ್ಮಾನ ಅಥವಾ ವಿಮರ್ಶೆಯ ಪರಿಣಾಮ, ವರ್ತಮಾನಕ್ಕೆ ವಿರೋಧವೇ ಸದಾ ನೋವಿನ ಮೂಲ, ನೀವು ವರ್ತಮಾನವನ್ನು ಸ್ವೀಕರಿಸಿದ ಕೂಡಲೆ ನಿಮ್ಮ ನೋವು ಮಾಯವಾಗುವುದು. ಮುಖ್ಯವಾಗಿ, ನೀವು ಈ ಸ್ತರಗಳಲ್ಲಿ ನೋವು ಅನುಭವಿಸಿದಾಗಲೇ ಅದರ ಒಂದು ಅಂಶವು ನಿಮ್ಮ ಶರೀರದಲ್ಲಿ ಉಳಿದುಕೊಳ್ಳುತ್ತದೆ. ಹೀಗೆ ಸಂಗ್ರಹಿಸಿದ ನೋವು ಸ್ವಲ್ಪ ಸಮಯದಲ್ಲಿಯೇ ನಿಮ್ಮ ಸುತ್ತಲೂ ಒಂದು ನಕಾರಾತ್ಮಕ ಚೈತನ್ಯ ಕ್ಷೇತ್ರವನ್ನು (negative energy field) ನಿರ್ಮಿಸುತ್ತದೆ - ಇದನ್ನು ನಾವು

Page 7

Content: ದುಃಖ ಶರೀರ (Pain body) ಅಂತ ಕರೆಯುತ್ತೇವೆ. ಈ ದುಃಖಿತ ಶರೀರವು ಮೇಲಿಂದ ಮೇಲೆ ದುಃಖವನ್ನು ಆಕರ್ಷಿಸುತ್ತದೆ, ಈ ದುಃಖ ಶರೀರವೇ ನಮ್ಮ ಅನೇಕ ನೋವುಗಳಿಗೆ ಮತ್ತು ನೋವಿನ ಕ್ರಮ ವಿಧಾನಕ್ಕೆ ಹೊಣೆಯಾಗಿರುತ್ತದೆ.

Content: ಭಾವನಾತ್ಮಕ ಅಸಮತೋಲನತೆಯು ಶರೀರದಲ್ಲಿ ಆಗಾಧವಾದ ತಳ್ಣವನ್ನು ಉಂಟು ಮಾಡುವುದು ಎಂದು ವೈದ್ಯಕೀಯ ಪರೀಶೋಧನೆಯು ತೋರ್ಪಡಿಸುತ್ತದೆ. ಉದಾಹರಣೆಗೆ ಲೈಂಗಿಕ ನಿಯಂತ್ರಣದಿಂದ ಬೆನ್ನು ನೋವು ಉಂಟಾಗಬಹುದು, ಮನಸ್ಸಿನಲ್ಲಿ ಅಧಿಕ ಜವಾಬ್ದಾರಿಯ ತಿಳಿಯುವಿಕೆ ಇದ್ದರೆ ಅದು ಭುಜಗಳ ನೋವಿಗೆ ಕಾರಣವಾಗಬಹುದು.

Content: ಒಂದು ಅತಿ ಜನಭರಿತ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿರುವಾಗ ನೀವು ಎಲ್ಲಾ ಬಗೆಯ ಜನಗಳ ಜೊತೆ ತುಂಬಿರುತ್ತೀರಿ. ಆದರೆ ನಿಮ್ಮ ಅಂತರಂಗವು ಅವರನ್ನು ಸ್ವೀಕರಿಸುವುದಿಲ್ಲ - ನಿಮ್ಮ ಮನಸ್ಸು, ನಿಮ್ಮ ವಿವೇಕವು ನಿಮ್ಮನ್ನು ಬಿಡುವುದಿಲ್ಲ. ಈ ಕಾರಣದಿಂದ ನಿಮ್ಮ ಅಂತರಂಗವು ಇನ್ನೂ ಆಳವಾಗಿ ನಿಮ್ಮೊಳಗೆ ಮುದುರಿ ಹೋಗುವುದು.

Content: ಒಂದು ಕಲ್ಕತ್ತಾ ನಗರದಲ್ಲಿ ಎರಡು ಸಣ್ಣ ಆಶ್ರಮಗಳಿವೆ. ಈ ಎರಡು ಆಶ್ರಮಗಳ ಅಧ್ಯಕ್ಷರ ನಡುವೆ ಮನಸ್ತಾಪ ಇತ್ತು. ಒಂದು ದಿನ ಒಬ್ಬ ಹಿರಿಯ ಅಧಿಕಾರಿ ಮೊದಲನೆಯ ಆಶ್ರಮಕ್ಕೆ ಭೇಟಿ ಕೊಟ್ಟರು ಮತ್ತು ಇನ್ನೊಂದು ಆಶ್ರಮಕ್ಕೆ ಅವರ ಜೊತೆ ಯಲ್ಲಿ ಹೋಗುವುದಕ್ಕೆ ಅಧ್ಯಕ್ಷರನ್ನು ಆಮಂತ್ರಿಸಿದರು. ಅಧ್ಯಕ್ಷರ ಮನಸ್ಸಿನಲ್ಲಿ ಧರ್ಮಸಂಕಟ ಉಂಟಾಯಿತು. ಆಮಂತ್ರಣವನ್ನು ತಿರಸ್ಕರಿಸುವುದೂ ಕಷ್ಟ ಆದರೆ ಅವರಿಗೆ ಹೋಗುವುದಕ್ಕೂ ಮನಸ್ಸಿರಲಿಲ್ಲ. ಭಕ್ತನೆ ಅವರ ದೇಹದಲ್ಲಿ ಅವರಿಗೆ ಜೋರು ಜ್ವರದ ಅನುಭವ ಆಯಿತು. ಈ ಕಾರಣದಿಂದ ಅವರು ಇನ್ನೊಂದು ಆಶ್ರಮಕ್ಕೆ ಹೋಗುವುದನ್ನು ತಪ್ಪಿಸಿಕೊಂಡರು. ನಾನು ಈ ಘಟನೆಯನ್ನು ಕಣ್ಣಾರೆ ನೋಡಿದ್ದೇನೆ. ಅಧಿಕಾರಿಯು

Page 8

Content: ಅಲ್ಲಿಂದ ಹೊರಟ ತಕ್ಷಣವೇ ಅವರ ಜ್ವರ ಇಳಿದು ದೇಹವು ಸಾಮಾನ್ಯ ತಾಪಕ್ಕೆ ಬಂತು.

Content: ನಾವೆಲ್ಲರು ಸೋಮವಾರ ಬೆಳಿಗ್ಗೆಯ ನಿರುತ್ಸಾಹವನ್ನು ಅನುಭವಿಸಲ್ಪೆ? (Monday Morning Blues) ಮಕ್ಕಳು ಕೂಡ ಅವರನ್ನು ಇಷ್ಟವಿಲ್ಲದ ಕೆಲಸ ಮಾಡುವುದಕ್ಕೆ ಬಲವಂತ ಮಾಡಿದರೆ, ಜ್ವರದ ಲಕ್ಷಣಗಳನ್ನು ತೋರಿಸುತ್ತಾರೆ. (ಉದಾಹರಣೆಗೆ ಸ್ಕೂಲಿಗೆ ಹೋಗಬೇಕಾದಾಗ !) ಈ ರೀತಿಯ ರೋಗವು ನಮ್ಮಲ್ಲಿ ನಮ್ಮದೇ ಇಲ್ಲದಿದ್ದರೆ ಕಾಣಿಸಿಕೊಳ್ಳುವುದು. ನಿಮ್ಮ ದೇಹ ಮತ್ತು ನಿಮ್ಮ ಮನಸ್ಸು ಎರಡು ಎದುರಾಳಿವಾದ ದಿಕ್ಕಿನಲ್ಲಿ ನಿಮ್ಮನ್ನು ಎಳೆಯುವುದರಿಂದ ಹೀಗೆ ಆಗುವುದು. ನಿಮ್ಮಲ್ಲಿ ನೀವು ಆರಾಮವಾಗಿಲ್ಲದಿರುವ (dis-ease) ಸ್ಥಿತಿಯನ್ನೇ ರೋಗ (disease) ಎಂದು ಕರೆಯಲಾಗುವುದು.

Content: ಒಂದು ದಿನ ಸುಂದರವಾದ ಒಬ್ಬ ಯುವಕನನ್ನು ನಮ್ಮ ಹೀಲಿಂಗ್ ಕೇಂದ್ರಕ್ಕೆ ಅವರ ತಂದೆಯಿಯರು ಕರೆದುಕೊಂಡು ಬಂದರು. ಅವನ ಸಮಸ್ಯೆ - ಅನಿರೀಕ್ಷಿತ ದೃಷ್ಟಿಹೀನತೆ, ಹುಡುಗನು ಬಹಳ ಆರೋಗ್ಯವಂತನಾಗಿದ್ದರೂ ಇದಕ್ಕಿದ್ದಹಾಗೆ ಒಂದು ವಾರದ ಹಿಂದೆ ಅವನು ಅಂಧನಾಗಿಬಿಟ್ಟ ಎಲ್ಲಾ ವೈದ್ಯಕೀಯ ಪರೀಕ್ಷೆಗಳೂ ಅವನು ಕಣ್ಣುಗಳಲ್ಲಿ ಉತ್ತಮ ದೃಷ್ಟಿ ತೋರಿಸಿದ್ದವು. ಆದರೆ ಅವನಿಗೆ ಏನು ಕಾಣಿಸುತ್ತಿಲ್ಲ ಎಂದು ವಿವರಿಸಿ ಅವನ ತಂದೆ ತಾಯಿ ಅಳುತ್ತಾ ಹೇಳಿದರು.

Content: ಯುವಕನ ಒಳಗಿನ ಶಕ್ತಿಯನ್ನು ಶೋಧಿಸಿ ನಾವು ಅವನೊಡನೆ ಏಕಾಂತದಲ್ಲಿ ಮಾತನಾಡುವುದಕ್ಕೆ ಸ್ವಲ್ಪ ಹೊತ್ತು ಕೇಳಿದೆ. ಏಕಾಂತದಲ್ಲಿ ಮಾತನಾಡುವುದಕ್ಕೆ ಬಿಟ್ಟಾಗ ಹುಡುಗನು ತನ್ನ ತೊಂದರೆಗಳನ್ನೆಲ್ಲ ನನ್ನ ಮುಂದೆ ಹೇಳಿಕೊಂಡ. ಅವನು ಒಂದು ಹುಡುಗಿಯನ್ನು ಅಗಾಧವಾಗಿ ಪ್ರೀತಿಸುತ್ತಿದ್ದ. ಆದರೆ ಅವನ ತಂದೆಯಿಯರು ಅವಳನ್ನು ನೋಡುವುದನ್ನು ಬಲವಂತದಿಂದ ನಿಲ್ಲಿಸಿದರು ಎಂದು ಹುಡುಗನು ಹೇಳಿದ. ನಾನು ತಕ್ಷಣವೇ ಸಮಸ್ಯೆಯ ಮೂಲ ಕಾರಣವನ್ನು ಕಂಡು ಹಿಡಿದೆ. ಹುಡುಗಿಯ ಒಂದು

Page 9

Content: ಚಿತ್ರಪಟವನ್ನು ಒದಗಿಸಿ ಅದರ ಮೇಲೆ ಮೂರು ದಿನಗಳ ನಿರಂತರ ಧ್ಯಾನ ಮಾಡುವುದಕ್ಕೆ ಸಲಹೆ ಕೊಟ್ಟೆ. ಅಸಾಧಾರಣವಾಗಿರುವ ಈ ಪರಿಹಾರವನ್ನು ಕೇಳಿ, ಅದೂ ಒಂದು ಆಧ್ಯಾತ್ಮಿಕ ಬೋಧಕರ ಬಾಯಿಂದ, ಅವನ ತಂದೆ ತಾಯಿ ಬೆರಗಾದರು, ಆದರೆ ಆ ಧ್ಯಾನವಿಧಾನವು ಸಫಲವಾಯಿತು - ಹುಡುಗನು ಮೂರು ದಿನಗಳಲ್ಲಿಯೇ ಅವನ ಕಣ್ಣಿನ ದೃಷ್ಟಿಯನ್ನು ತಿರುಗಿ ಸಂಪೂರ್ಣವಾಗಿ ಪಡೆದುಕೊಂಡನು.

Content: ಹೀಗೆ ಏಕೆ ಆಯಿತು?

Content: ಹುಡುಗನು ಯಾವುದನ್ನು ಎಲಕ್ಕಿಂತ ಹೆಚ್ಚು ನೋಡಲು ಇಚ್ಛಿಸಿದನೋ ಅದನ್ನು ನೋಡದೆ ಇರುವುದಕ್ಕೆ ಅವನನ್ನು ಬಲವಂತ ಮಾಡಿದಾಗ ಅವನ ವಿವೇಕವು ಏನೂ ನೋಡುವುದೇ ಬೇಡ ಎಂದು ನಿರ್ಧರಿಸಿತು. ಅವನ ಮಾನಸಿಕ ಸ್ಥಿತಿಯೇ ಅವನ ದೃಷ್ಟಿ ಹೀನತೆಗೆ ಕಾರಣವಾಗಿತ್ತು. ನಮ್ಮ ಜ್ಞಾನೇಂದ್ರಿಯಗಳ ಮೇಲೆ ಪ್ರಚಂಡವಾದ ಮನಸ್ಸಿನ ಶಕ್ತಿಯು ಏಷ್ಪರಮಟ್ಟಿಗೆ ಇದೆ ! ನಮ್ಮ ಮನಸ್ಸೇ ಎಲಕ್ಕಿಂತ ಹೆಚ್ಚಿನದು.

Content: ಭಾಗವತ ಪುರಾಣದಲ್ಲಿ ರಾಧೆ ಹುಟ್ಟಿದ ಕೆಲವು ಕ್ಷಣದಲ್ಲಿಯೇ ಕೃಷ್ಣನ ಜನ್ಮವಾಯಿತು ಎಂದು ತಿಳಿಸಲಾಗಿದೆ. ಪುಟ್ಟ ರಾಧೆಯು ಬಹಳ ಕ್ಷೇಮದಲ್ಲಿದ್ದಳು. ಆದರೆ ಅವಳ ಒಂದು ವಿಷಯ ಬಹಳ ಅಸಾಧಾರಣವಾಗಿತ್ತು - ಅವಳು ತನ್ನ ಕಣ್ಣುಗಳನ್ನು ತೆಗೆಯುತ್ತಾ ಇರಲಿಲ್ಲ. ಸ್ವಲ್ಪ ದಿನಗಳ ನಂತರ ರಾಧೆಯನ್ನು ಕರೆದುಕೊಂಡು ಅವಳ ತಾಯಿಯು ಪುಟ್ಟ ಕೃಷ್ಣನನ್ನು ನೋಡಲು ಅವನ ಮನೆಗೆ ಹೋದಳು ಕೃಷ್ಣ ಸಾನ್ನಿಧ್ಯಕ್ಕೆ ನಮ್ಮ ಶರೀರದೊಂದಿಗೆ ಬಂದ ತಕ್ಷಣವೇ ರಾಧೆಯು ಅವಳ ಕಣ್ಣುಗಳನ್ನು ತೆರೆದು ಕೃಷ್ಣ ದರ್ಶನವನ್ನು ಪಡೆದಳು.

Content: ಬಹಳ ವರ್ಷಗಳು ಕಳೆದ ಮೇಲೆ ಅವಳ ಗೆಳತಿಯು ರಾಧೆಯನ್ನು ಇದರ ವಿಷಯ ಕೇಳಿದಾಗ ರಾಧೆಯ ವ್ಯಾಖ್ಯಾನಿಸಿದಳು.

Page 10

Content: ಇನ್ನೇನಿತು ? ಕೃಷ್ಣನಿಗಾಗಿಯೇ ನಾನು ಈ ಜನ್ಮವನ್ನು ತೆಗದುಕೊಂಡಿರುವುದು. ಈ ಕಾರಣದಿಂದಲೇ ನಾನು ಕೃಷ್ಣನ ಸಾನ್ನಿಧ್ಯಕ್ಕೆ ಬರುವವರೆಗೆ ನನ್ನ ಕಣ್ಣನ್ನು ತೆರೆಯಲಿಲ್ಲ. ಇದು ಕೇವಲ ಒಂದು ಕಥೆಯಾಗಿರಬಹುದು. ಆದರೆ ನಮ್ಮ ದೇಹದ ಮೇಲಿರುವ ಮನಸ್ಸಿನ ಪ್ರಚಂಡವಾದ ಶಕ್ತಿಯನ್ನು ತೋರ್ಪಡಿಸುತ್ತದೆ.

Content: ಇಷ್ಟೇ ಅಲ್ಲ, ದೇಹವು ಮನಸಿಗೆ ಬರೆದ ಪ್ರಾರ್ಥನಾ ಪತ್ರವೇ ನೋವು ಎಂದು ಹೇಳಬಹುದು. ನನಗೆ ಸ್ವಲ್ಪ ಗಮನ ಕೊಡು ಎಂದು ದೇಹ ಪ್ರಾರ್ಥಿಸುತ್ತದೆ. ಇದು ಏಕೆ ಆದರೆ ನಿಮ್ಮ ಗಮನವೇ ನಿಮ್ಮ ಶಕ್ತಿ, ನಿಮ್ಮ ಚೈತನ್ಯ.

Content: ನೀವು ನಿಮ್ಮ ಗಮನವನ್ನು ಎಲ್ಲೆಲ್ಲಿ ಗುರಿಯಿಡುತ್ತೀರೋ ನಿಮ್ಮ ಚೈತನ್ಯವೂ ಅಲ್ಲಲ್ಲೇ ಹೋಗಿ ತಲುಪುವುದು ಮತ್ತು ನೀವು ಆದೇ ದಾರಿಯಲ್ಲಿ ನಿಮ್ಮ ಬೆಳವಣಿಗೆ ಕಾಣುವಿರಿ.

Content: ನೀವು ನಿಮ್ಮ ಮೇಲೆಯೇ ನೋವನ್ನು ಆಹ್ವಾನಿಸುತ್ತಿರಿವಿ

Content: ನೋವನ್ನು ಅವರೇ ಗೌರವಿಸಿ, ಆಮಂತ್ರಿಸಿದ ಅತಿಥಿ ಎಂದು ಹೇಳಿದರೆ, ಬಹಳ ಜನರು ನಂಬುವುದಿಲ್ಲ. ಆದರೆ ಇದು ನಿಜ !

Content: ಒಂದು ಸಣ್ಣ ಕಥೆ

Content: ನಿತ್ತಿ ಮೊದಲಿಯಾರರು ಒಂದು ಹೋಟೆಲ್‌ಗೆ ಹೋಗಿ ಅಧಿಕ ಪ್ರಮಾಣದಲ್ಲಿ ಭೋಜನವನ್ನು ಆರ್ಡರ್ ಮಾಡಿದರು. ಅನೇಕ ತಟ್ಟೆಗಳಲ್ಲಿ ಬಿಸಿ ಬಿಸಿ ಇಡ್ಲಿ, ದೋಸೆ ಮತ್ತು ಜಿಲೇಬಿಗಳು ಅವರ ಟೇಬಲ್‌ಗೆ ತಲುಪಿತು. ಅವರು ತಿಂಡಿಗಳನ್ನು ಚಪ್ಪರಿಸಿಕೊಂಡು ತಿಂದರು. ಹೊಟ್ಟೆ ತುಂಬ ತಿಂದ ನಂತರ ಅವರು ವೇಟರನ್ನು ಸಾಕು ಅಂತ ಸಂಕೇತ ಮಾಡಿದರು. ಆವಾಗ ವೇಟರ್ ನಿತ್ತಿಯವರಿಗೆ ಒಂದು ಬಿಳಿ ಚೀಟಿಯನ್ನು ನೀಡಿದ.

Page 11

Content: ನೋವಿನಿಂದ ಆನಂದಕ್ಕೆ

Content: ಇದು ಏನು? ಎಂದು ನಿತ್ತಿ ಏನೂ ತಿಳಿಯದವರಂತೆ ಬಿಲ್ ನೋಡುತ್ತಾ ಕೇಳಿದರು. ಇದನ್ನು ಏಕೆ ತಂದಿದ್ದೀರಾ? ನಾನು ಇದನ್ನು ಆರ್ಜರ್ ಮಾಡರಲಿಲ್ಲವಲ್ಲ!

Content: ಇದೇ ರೀತಿಯಲ್ಲಿ ನಾವು ನಮ್ಮ ಹಿಡಿತವಿಲ್ಲದ ಅಭ್ಯಾಸಗಳಿಂದ ಮತ್ತು ಆಯಾಸಕರ ಜೀವನ ನಡತೆಯಿಂದ ನೋವು ಮತ್ತು ರೋಗವನ್ನು ಆಮಂತ್ರಿಸುತ್ತೇವೆ - ಆನಂತರ ಅದನ್ನು ಮರೆತು ರೋಗವು ನಮ್ಮ ಬಾಗಿಲಿಗೆ ಬಂದಾಗ ನಾವು ಗೊಣಗುತ್ತೇವೆ.

Content: ಈ ಮಾತನ್ನು ಎಂದಿಗೂ ಯಾರೂ ಒಪ್ಪಿಕೊಳ್ಳುವುದಿಲ್ಲ. ಆದರೆ ನಿಜವೇಂದರೆ ಕೆಲವೊಮ್ಮೆ ನಾವು ನಮಗೆ ಬಂದ ರೋಗದಿಂದ ಸುಖಿಸುತ್ತೇವೆ. ಹೇಗೆ ಶರೀರದ ಒಂದು ಭಾಗ ನಿಮ್ಮ ಗಮನವನ್ನು ಪಡೆಯುವುದಕ್ಕೆ ಕಾಯಿಲೆ ಬಿಳುವುದೆ ಅದೇ ರೀತಿಯಲ್ಲಿ ನೀವೂ ಬೇರೆಯವರ ಗಮನ ಸೆಳೆಯಲು ಕಾಯಿಲೆ ಬೇಳುವಿರಿ.

Content: ಈ ತೋರುವಿಕೆಯಲ್ಲಿ ಆಶ್ವಯಪಡಬೇಕಾಗಿರತಕ್ಕದ್ದು ಏನೂ ಇಲ್ಲ. ಏಕೆಂದರೆ ಇಂದಿನ ಶ್ರಮದಾಯಕ ಜೀವನಗತಿಯಲ್ಲಿ ಅವರವರು ಅವರವರ ಕೆಲಸಗಳಲ್ಲಿ ತಲ್ಲೀನರಾಗಿರುತ್ತಾರೆ - ಒಬ್ಬರು ಕಾಯಿಲೆ ಬೀಳುವ ತನಕ ಬೇರೆಯವರಿಗೆ ಅವರ ಕಡೆ ಗಮನ ಕೊಡಲು ಪುರಸತ್ತು ಇರುವುದಿಲ್ಲ. ಬೇರೆಯವರಿಂದ ಗಮನಿಸಲ್ಪಡುವುದು ಮಾನಸನ ಮೂಲಭೂತ ಅವಶ್ಯಕತೆ ! ಮಾನವನು ಊಟವಿಲ್ಲದೆ 90 ದಿನ ಬದುಕಬಲ್ಲನು. ಆದರೆ ಬೇರೆಯವರಿಂದ ಗಮನಿಸಲ್ಪಡದೆ 14 ದಿನಗಳಲ್ಲಿಯೇ ಅವನಿಗೆ ಹುಚ್ಚು ಹಿಡಿಯಬಲ್ಲದು ಎಂದು ಮನೋವೈಜ್ಞಾನಿಕ ಪರಿಶೋಧನೆಯು ತಿಳಿಸುತ್ತದೆ. ಇದು ಏಕೆಂದರೆ ಈ ಗಮನವೇ ಒಂದು ಎನರ್ಜಿ, ಒಂದು ಪ್ರಾಣದಾನ. ನಮಗೆ ಗೊತ್ತಿಲ್ಲದೆಯೇ ನಮ್ಮೊಳಗೆ ಬೇರೆಯವರ ಗಮನವನ್ನು ಪಡೆಯುವುದಕ್ಕೆ ಆತ್ಯಂತ ಕೊರಗು ಇದೆ. ಈ ಗಮನವನ್ನು ಪಡೆಯುವುದಕ್ಕೆ ನಮ್ಮಲ್ಲಿನಾವು ಒಂದು ಕಡಿಮೆ ಎನರ್ಜಿಯ ರಾಶಿಯನ್ನು (low energy pool) ನಿರ್ಮಿಸುತ್ತೇವೆ ಮತ್ತು ನೆಗಡಿಯಿಂದ ಹಿಡಿದು ಕ್ಯಾನ್ಸರ್ ವರೆಗೆ ಎಲ್ಲಾ ರೋಗಗಳನ್ನು ಸಂತೋಷವಾಗಿ ಅನುಭವಿಸುತ್ತೇವೆ.

Page 12

Content: ನೀವು ಯಾರದಾರೂ ಇಬ್ಬರ ಸಂಬಂಧವನ್ನು ಸಮೀಪದಿಂದ ವೀಕ್ಷಿಸಿದರೆ, ಭಿಕ್ಷೆಪಾತ್ರೆ ಹಿಡಿದು ಕೈ ಚಾಚಿ ಒಬ್ಬರನೊಬ್ಬರು ಗವನದ ಭಿಕ್ಷೆಯನ್ನು ಬೇಡುವುದನ್ನು ಕಾಣಇರಿ. ಇಬ್ಬರು ಭಿಕ್ಷುಕರ ನಡುವೆ ಒಂದು ಸಕಾರಾತ್ಮಕ ಮತ್ತು ತ್ರಿಪ್ತಿಕರವಾದ ಬಾಂಧವ್ಯ ಎಂದಾದರೂ ಸಾಧ್ಯವೆ? ರೋಗಗಳಿಂದ ಮುಕ್ತಿ ಪಡೆಯುವುದಕ್ಕೆ ಗಮನದೆ ಭಿಕ್ಷೆ ಬೇಡುವುದನ್ನು ಬಿಟ್ಟು ಬಿಡಿ. ನಮ್ಮ ಸಂಪೂರ್ಣ ಜಾಗ್ರತೆ ಇಲ್ಲದೆ ನಡೆಯುವ ಈ ಸೂಕ್ಷ್ಮವಾದ ಮಾನಸಿಕ ಭಿಕ್ಷಾಟನೆಯು ಕಡೆಗೆ ಮಾಮೂಲಿ ಶಾರೀರಿಕ ಭಿಕ್ಷಾಟನೆಗಿಂತ ಅತ್ಯಂತ ಅಪಾಯಕಾರಿ.

Content: ಜೀವನವು ಅನೇಕ ಬಗೆಯ ವಿದ್ಯೆಗಳನ್ನು ಕಲಿಸುತ್ತದೆ. ಅವುಗಳನ್ನು ತಿಳಸದುಕೊಳ್ಳುವುದು ನಮ್ಮ ಜವಾಬ್ದಾರಿ - ಆದರೆ ನಾವು ಸದಾ ನಿದ್ರಾಸಂಚಾರದ ಸ್ಥಿತಿಯಲ್ಲಿ ಜೀವಿಸುತ್ತಿರುವುದರಿಂದ ನಾವು ಎಂತಹ ತಾಪತ್ರಯಗಳನ್ನು ಆಮಂತ್ರಿಸುತ್ತಿದ್ದೇವೆ ಎಂಬುದು ನಮಗೆಗೊತ್ತಿರುವುದೇ ಇಲ್ಲ.

Content: ಈ ಮಾತನ್ನು ಉದಾಹರಿಸುವ ಒಂದು ಚಿಕ್ಕ ಕಥೆ:

Content: ಒಂದು ಚಿಕ್ಕ ಕಥೆ

Content: ಒಂದು ದೊಡ್ಡ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಇಂಜಿನಿಯರ್ ಪ್ರತಿ ದಿನವು ಊಟಕ್ಕೆ ಒಂದೇ ತಿಂಡಿಯನ್ನು ತೆಗೆದುಕೊಂಡು ಬರುತ್ತಿದ್ದನು ಮತ್ತು ಪ್ರತಿದಿನ ಅದು ತನಗೆ ಸೇರದ ತಿಂಡಿ ಎಂದು ಗೊಣಗುತ್ತಾ ಇದ್ದನು. ಅವನ ಕರುಣಾಳು ಸ್ನೇಹಿತರು ತಮ್ಮ ಊಟವನ್ನು ಅವನೊಂದಿಗೆ ಹಂಚಿಕೊಳ್ಳುತ್ತಿದ್ದರು. ಅವನು ಪಾಡು ನೋಡಲಾರದೆ ಸ್ನೇಹಿತರು ಬಹಳ ಕರುಣೆಯಿಂದ ಸಲಹೆ ಕೊಟ್ಟರು. ನಿನ್ನ ಹೆಂಡತಿಯನ್ನು ಬೇರೆ ಯಾವುದಾದರೂ ನಿನಗೆ ಇಷ್ಟವಿದ್ದ ತಿಂಡಿಯನ್ನು ಮಾಡಿ ಕೊಡುವುದಕ್ಕೆ ಹೇಳಬಹುದಲ್ಲ? ನಿನಗೆ ಈ ತಿಂಡಿ ಇಷ್ಟವಿಲ್ಲ ಎಂದು ಅವಳಿಗೆ ಗೊತ್ತಿಲ್ಲವೆ?

Content: 'ಎಂತಹ ಹೆಂಡತಿ ?' ಎಂದು ಇಂಜಿನಿಯರು ಆಶ್ಚರ್ಯದಿಂದ ಕೇಳಿದ, 'ನಾನು ಒಬ್ಬ ಬ್ರಹ್ಮಚಾರಿ. ನನ್ನ ಅಡಿಗೆಯನ್ನು ನಾನೇ ಮಾಡಿಕೊಳ್ಳುತ್ತೇನೆ!'

Page 13

Content: ನೋವಿನಿಂದ ಆನಂದಕ್ಕೆ

Content: ಈ ಕಥೆಯು ಬಹಳ ತಮಾಷೆಯಾಗಿರಬಹುದು. ಆದರೆ ನಿಜವೇನೆಂದರೆ ನಾವೂ ಕೂಡ ನಮ್ಮ ಜೀವನವನ್ನು ಇದೇ ರೀತಿಯಲ್ಲಿ ನಡೆಸಿಕೊಳ್ಳುತ್ತೇವೆ. ಎಚ್ಚರವಿಲ್ಲದೆ ನಾವು ಮೊದಲು ನೋವನ್ನು ದುಃಖವನ್ನ ಆಮಂತ್ರಿಸುತ್ತೇವೆ ಮತ್ತು ನೋವು ಉಂಟಾದಾಗ ಗೋಳಾಡುತ್ತೇವೆ ಮತ್ತು ಆ ನೋವನ್ನು ನಾಶ ಮಾಡುವ ಮಾತ್ರೆಗಳನ್ನು ಆಶ್ರಯಿಸುತ್ತೇವೆ. ಇದಲ್ಲದೆ ನಿಜವಾಗಿ ಅವಮಾನ ಪಡುವಂತಹ ಮಾತು ಏನಂದರೆ ನಾವು ನಮ್ಮ ರೋಗದ ಮೂಲ ಕಾರಣ ನಾವೇ ಎಂದು ಗುರತಿಸದೆ, ಮೇಲಿಂದ ಮೇಲೆ ಅದೇ ಪೀಡೆಯನ್ನು ಅನುಭವಿಸಲು ಸಿದ್ಧರಾಗುತ್ತೇವೆ. ನಮ್ಮ ದುಃಖಕ್ಕೆ ಕಾರಣ ನಾವೇ ಎಂದು ಗ್ರಹಿಸದೆ, ಸದಾ ಬೇರೆಯವರನ್ನು ಹೊಣೆ ಮಾಡುತ್ತೇವೆ.

Content: ನೋವಿನ ಪರಿಹಾರವೇನು ?

Content: ನೋವನ್ನು ನಿಮ್ಮ ಗಮನದ ಅನುಪಸ್ಥಿತಿ ಎಂದು ಗ್ರಹಿಸಿದರೆ, ಖಂಡಿತ ನಿಮ್ಮ ಏಕಚಿತ್ತ ಗಮನವೇ ಅದರ ಪರಿಹಾರವನ್ನೂ ನೀಡುವುದು. ನಿಮ್ಮ ಇರುವಿಕೆಯನ್ನು ನಿಮ್ಮ ರೋಗವಿದ್ದ ಭಾಗಕ್ಕೆ ತಲುಪಿಸಿ, ನಿಮಗೆ ನೀಡುವ ಹೇಲಿಂಗ್ (ಗುಣಪಡಿಸುವಿಕೆ) ಅನ್ನು ನೀಡುವ ಬದಲು ಧ್ಯಾನ ಪದ್ಧತಿಯ (meditation technique) ಇರುವುದು, ನೀವು ಮುಂದಿನ ಸಾರಿ ನೋವನ್ನು ಅನುಭವಿಸಿದಾಗ (ಉದಾಹರಣೆಗೆ ಕಾಲು ನೋವು) ಈ 'ಮೆಡಿಟೇಷನ್' ಅನ್ನು ಪ್ರಯತ್ನಿಸಬಹುದು. ನೋವನ್ನು ನಾಶ ಮಾಡುವ ಆದರೆ ಬೇರೆ ತರಹದ ಅತ್ಯಂತ ಕೆಟ್ಟ ಹಾನಿಯನ್ನು ನೀಡುವ (side effects) ಮಾತ್ರೆಗಳನ್ನು ಬಳಸುವುದಕ್ಕಿಂತ ಈ ಗುಣಪಡಿಸುವ ಮೆಡಿಟೇಷನ್ ಅನ್ನು ಮಾಡುವುದು ಖಂಡಿತ ಇನ್ನೂ ಉತ್ತಮ.

Content: ಧ್ಯಾನದ ವಿಧಾನ : ಒಂದು ಕತ್ತಲು ಕೋಣೆಯಲ್ಲಿ ಮಲಗಿರಿ. ನೀವು ಪೂರ್ಣ ಎಚ್ಚರಿಕೆಯಿಂದ ನಿಮ್ಮ ಸಂಪೂರ್ಣ ದೇಹವನ್ನು ಮರೆಯಲು ಪ್ರಯತ್ನಿಸಿ. ನೋವಿರುವ ಭಾಗದ ಮೇಲೆ ಮಾತ್ರ

Page 14

Content: ಏಕಾಗ್ರತೆಯಿಂದ ಗಮನಿಸಿ. ನೀವು ನೋವನ್ನು ಅನುಭವಿಸಲು ಆರಂಭಿಸಿದಾಗ, ಉದ್ದೇಶಪೂರ್ವಕವಾಗಿ ನೋವು ಎನ್ನುವ ಪದವನ್ನು ನಿಮ್ಮ ಮನಸ್ಸಿನಿಂದ ತೆಗೆದು ಬಿಡಿ. ನಿಮ್ಮ ಮಾನಸಿಕ ಹರಟೆಯು ನೀವು ನೋವನ್ನು ಅನುಭವಿಸುತ್ತಿದ್ದೀರಾ ಎಂದು ನಿರಂತರ ತಿಳಿಸುತ್ತಾ ಇರುತ್ತದೆ. ಆ ಹರಟೆಯ ಸ್ಪೀಚ್ ಅನ್ನು ಆಫ್ ಮಾಡಿ ಬಿಡಿ. ಮನಸ್ಸನ್ನು ತೆರದಿಟ್ಟುಕೊಂಡು ಬಹಳ ಆಗಾಧವಾಗಿ ನೀವು ಮನಸ್ಸಿನೊಳಗೆ ವಿಳೀಕ್ಷಿಸಿ. ಆಗ ನಿಮ್ಮ ನೋವು, ನಿಮ್ಮ ಮನಸ್ಸು ಮಾಡಿದ अतिशಯ ಎಂದು ನಿಮಗೆ ತಿಳಿಯುವುದು. ನಿಮ್ಮ ಸಂಪೂರ್ಣ ಎಚ್ಚರಿಕೆಯನ್ನು ನಿಮ್ಮ ನೋವಿನ ಮಧ್ಯಬಿಂದುವಿನ ಮೇಲೆ ಗುರಿ ಇಡಿ, ಆಗ ಆ ನೋವು ಹಾಗೆ ಮುದುರಿ ಹೋಗುತ್ತಾ ಒಂದು ಚಿಕ್ಕ ಬಿಂದುವಿನಂತೆ ಆಗುವುದು. ಈ ಬಿಂದುವಿನ ಮೇಲೆ ನೀವು ಏಕಾಗ್ರ ಗುರಿಯನ್ನು ಇಟ್ಟುಕೊಳ್ಳಿ, ಆಗ ಭಕ್ತರಿಗೆ ಒಂದು ಕ್ಷಣದಲ್ಲಿ ನಿಮ್ಮ ನೋವು ಮಾಯವಾಗುವುದನ್ನು ನೀವು ಕಂಡುಹಿಡಿಯುವಿರಿ ಮತ್ತು ಅದರ ಜಾಗದಲ್ಲಿ ಸುಖವನ್ನು ಅನುಭವಿಸುವಿರಿ. ಇದು ಏಕೆಂದರೆ ನೋವು ಮತ್ತು ಸುಖದ ಮೂಲ ಒಂದೇ, ಇವೆರಡು ಬೇರೆ ಹೆಸರಿನ ಒಂದೇ ರೀತಿಯ ಭಾವನೆಗಳು ಉದಾಹರಣೆಗೆ ನೀವು ನಿಮ್ಮ ಸ್ನೇಹಿತರಿಂದ ಅಥವಾ ಅಂಗಮರ್ದನದಿಂದ ನಿಮ್ಮ ಮೈಯನ್ನು ನೀವಿಸಿಕೊಂಡಿದ್ದರೆ ನಿಮಗೆ ಆರಾಮದ ಅನುಭವ ಆಗಿರಬಹುದು. ಆದರೆ ಇದೇ ಅಂಗಮರ್ದನವನ್ನು ಅಪರಿಚತರಿಂದ ಮಾಡಿಸಿಕೊಂಡಿದ್ದರೆ ನಿಮಗೆ ಅದು ಬಹಳ ಚಿತ್ರಹಿಂಸೆ ಎಂದು ತಿಳಿದುಕೊಳ್ಳುವಿರಿ.

Content: ನಿಮ್ಮ ಅನುಭವದ ಸತ್ಯವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ, ನೋವಿಗೆ ತನ್ನದೆ ಒಂದು ಆಸಿತ್ವ ಇಲ್ಲ, ಒಂದು ಜೀವ ಇಲ್ಲ ಎಂದು ತಿಳಿಯುವಿರಿ. ನೋವಿಗೆ ಕೇವಲ ಒಂದು ನಕಾರಾತ್ಮಕ (ನೆಗೆಟಿವ್) ಆಸಿತ್ವ ಇದೆ. ಅಂದರೆ ಕತ್ತಲೆಯ ಸಮಾನ ಅದು ಕೇವಲ ಒಂದು ಅನುಪಸ್ಥಿತಿ - ಎಚ್ಚರಿಕೆಯ ಅನುಪಸ್ಥಿತಿ, ಬೆಳಕನ್ನು ನೀಡಿದಾಗ ಹೇಗೆ ಕತ್ತಲೆ ತಾನಾಗಿ ಮಾಯವಾಗುವುದೋ, ಅದೇ ರೀತಿಯಲ್ಲಿ ನಿಮ್ಮ ಎಚ್ಚರಿಕೆಯ ಶಕ್ತಿಯನ್ನು ನೋವಿನ ಮೇಲೆ ಗುರಿ ಇಟ್ಟಾಗ, ಅದು ತಾನಾಗಿ ತಾನೇ ಕರಗಿ ಹೋಗುವುದು. ಈ ಮೆಡಿಟೇಶನ್‌ನಿಂದ ಎಂತಹ ನೋವಾದರೂ ಸಹ ಅದನ್ನು ದಾಟಿ ಮುಂದೆ ಹೋಗಿ ನಿವಾರಿಸಿಕೊಳ್ಳಬಹುದು. ನಿಮ್ಮ ನೋವನ್ನು ಧ್ಯಾನದ ಮಾರ್ಗಕ್ಕೆ ತಿರುಗಿಸಿ, ಅದನ್ನು ಒಂದು ಉಪಕರಣವಾಗಿ ಬಳಸಿ, ನಿಮ್ಮ ಅಂತರಂಗವನ್ನು ಸಂಪರ್ಕಿಸುವ ಅನುಭವವನ್ನು ಪಡೆಯಲು

Page 15

Content: ನಾನು ನಿಮ್ಮನ್ನು ಆಮಂತ್ರಿಸುತ್ತೇನೆ. ಈ ಧ್ಯಾನದಿಂದ, ನಿಮ್ಮ ನೋವೇ, ನಿಮ್ಮ ದುಃಖವೇ ಆನಂದವನ್ನು ಪಡೆಯುವುದಕ್ಕೆ ಒಂದು ಮಾರ್ಗವಾಗಿದೆ ಎಂದು ನೀವು ತಿಳಿದುಕೊಳ್ಳುವಿರಿ.

Content: ನೋವು ಒಂದು ಅಮೂಲ್ಯವಾದ ಪಾಠವಾಗಬಲ್ಲದು

Content: ಇಬ್ಬರು - ಒಬ್ಬ ಜ್ಞಾನಿ, ಇನ್ನೊಬ್ಬ ಸಾಮಾನ್ಯ ಮನುಷ್ಯ. ಒಂದು ಅಮಾವಾಸ್ಯೆಯ ರಾತ್ರಿ ಒಂದು ಕಾಡಿನಲ್ಲಿ ಪ್ರಯಾಣ ಮಾಡುತ್ತಿದ್ದರು.

Content: ಇದಕ್ಕಿಂತ ಆಕಾಶದಲ್ಲಿ ಮಿಂಚು ಮಿಂಚಿತು. ಸಾಮಾನ್ಯ ಮನುಷ್ಯನು ಭಯದಿಂದ ನಡುಗಲು ಆರಂಭಿಸಿದ. ಬಿರುಗಾಳಿ ಏಳುವುದು ! ತಕ್ಷಣವೇ ಅವನ ಮನಸ್ಸಿನಲ್ಲಿ ಗೊಂದಲ ಉಂಟಾಯಿತು. ಅವನು ಮುಂದೆ ನಡೆದು ಹೋಗಬೇಕೆ ? ಅಥವಾ ಬಿರುಗಾಳಿ ನಿಲ್ಲುವವರೆಗೆ ಒಂದು ಸುರಕ್ಷಿತ ಸ್ಥಳದಲ್ಲಿ ನಿಲ್ಲಬೇಕೆ ? ಈ ಪ್ರಯಾಣವನ್ನು ಆರಂಭಿಸಲೇಬಾರದಾಗಿತ್ತು ಎಂದು ಅವನು ಇಚ್ಛಿಸಿದ. ತಾನು ಅತಿ ಮೂರ್ಖ ಮತ್ತು ದೌರ್ಭಾಗ್ಯಶಾಲಿ ಎಂದು ತನ್ನನೇ ತಾನೆ ನಿಂದಿಸಿಕೊಂಡ, ಅರ್ಥಾತ್ ಅವನು ಸಂಪೂರ್ಣವಾಗಿ ದುಃಖದಲ್ಲಿ ಮುಳುಗಿಬಿಟ್ಟ

Content: ಇದಕ್ಕೆ ವಿರುದ್ಧವಾಗಿ ಜ್ಞಾನಿಯು ಆ ಕಷ್ಟವನ್ನು ಮುಂದಿನ ರಸ್ತೆ ಚೆನ್ನಾಗಿ ಗಮನಿಸಲು ಬಳಸಿಕೊಂಡ, ತಾನು ಸರಿಯಾದ ದಾರಿಯಲ್ಲಿ ಪ್ರಯಾಣ ಮಾಡುತ್ತಿದ್ದೇನೆ ಎಂದು ನಿಶ್ಚಯಪಡಿಸಿ, ಮಿಂಚನ್ನು ಆದು ನೀಡಿದ ಸಹಾಯಕ್ಕೆ ಅಭಿನಂದಿಸಿ ಮುಂದಕ್ಕೆ ನಡೆದ.

Page 16

Content: ನೋವು ಈ ಮಿಂಚಿನ ಸಮಾನ ! ಆದರೆ ಅದರಿಂದ ನೀವು ದುಃಖ ಪಡುತ್ತೀರೋ ಅಥವಾ ಅದು ನೀಡಿದ ಪಾಠವನ್ನು ಕಲಿತುಕೊಳ್ಳುತ್ತೀರೋ, ಅದು ನಿಮ್ಮ ಕೈಯಲ್ಲಿ ಇದೆ. ನಿಮ್ಮ ದುಃಖವನ್ನು ನೀವು ನಿಮ್ಮ ಅಂತರಂಗವನ್ನು ವೀಕ್ಷಿಸುವುದಕ್ಕೆ ಬಳಸಿದರೆ, ನೀವೇ ನಿಮ್ಮ ನೋವಿನ ಕಾರಣ ಮತ್ತು ನೀವೇ ಅದನ್ನು ಪರಿಹರಿಸಬಹುದು ಎಂದು ತಿಳಿದುಕೊಳ್ಳುವಿರಿ.

Content: ನೀವು ನಿಮ್ಮ ನೋವನ್ನು ಆಳವಾಗಿ ವೀಕ್ಷಿಸಿದಾಗ, ನಿಮ್ಮೊಳಗೆ ಬಂದು ಮನೆಮಾಡುವ ತೆರದುಕೊಳ್ಳುವುದು ಮತ್ತು ನೀವು ಈ ದೇಹವಲ್ಲ ಎಂಬುವುದನ್ನು ನೀವು ಮನಗಾಣುತ್ತೀರಿ. ಯಾವ ನೋವಿಗೂ ನಿಮ್ಮ ನಿಜವಾದ ಅಸ್ತಿತ್ವವನ್ನು ನಿಮ್ಮ ಅಂತರಂಗವನ್ನು ಮುಟ್ಟಲು ಸಾಧ್ಯವೇ ಇಲ್ಲ. ನೀವು ನೋವಿನ ಕ್ಷೇತ್ರವನ್ನು ದಾಟಿ ಮುಂದಕ್ಕೆ ಹೋಗಿದ್ದೀರಿ ಎಂದು ನಿಮಗೆ ತಿಳುವಳಿಕೆ ಆದಾಗ ನೀವು ದುಃಖಾತೀತರಾಗುತ್ತೀರಿ (ದುಃಖವನ್ನು ದಾಟಿ ಮುಂದೆ ಹೋಗಿದ್ದವನು). ದೇಹದಿಂದ ನಿರ್ಲಿಪ್ತತೆ ಪಡೆದು ಒಂದು ರೀತಿಯ ಸುಂದರ, ಅಪರೂಪವಾದ ಮುಕ್ತಿಯನ್ನು ಪಡೆಯುವಿರಿ.

Content: ಈ ಸಂಸಾರಿಕ ಜೀವನವನ್ನು ನಿವಾರಿಸಿಕೊಂಡು ಒಂದು ಆಧ್ಯಾತ್ಮಿಕ ಸ್ತರವನ್ನು ತಲುಪುವಿರಿ. ಆವಾಗ ನೀವು ಈ ಪ್ರಪಂಚದಲ್ಲಿ ಒಂದು ಆತ್ಮನ್, ಒಂದು ಜ್ಞಾನಿಯಾಗಿ ಬಾಳುವಿರಿ. ಈ ಲೌಕಿಕ ಪ್ರಪಂಚವು ಸಂಪೂರ್ಣವಾಗಿ ಮಾಯವಾಗುವುದು ಮತ್ತು ಸರಳತೆ, ಆನಂದ ಮತ್ತು ಕರುಣೆಯನ್ನು ಹೊಂದಿರುವ ಅಪ್ರತಿಮವಾದ ಇನ್ನೊಂದು ಪ್ರಪಂಚವು ಉದ್ಬವವಾಗುವುದು.

Content: ಗೀತಾದಲ್ಲಿ ಹೇಳಿದಂತೆ

Content: "ಸಮದುಃಖಸುಖಃ ಸ್ವಸ್ಥಃ ಸಮಲೋಷ್ಠಾಶ್ಮ ಕಾಂಚನಃ । ತುಲ್ಯಾಪ್ರಿಯಾಪ್ರಿಯಾ ಧೀರಸ್ತುಲ್ಯನಿಂದಾತ್ಮ ಸಂಸ್ತುತಿ ॥"

Page 17

Content: ನೋವಿನಿಂದ ಆನಂದಕ್ಕೆ

Content: (ಆತ್ಮದಲ್ಲಿ ಸ್ಥಿರನಾಗಿರುವವನು ಸುಖಿ ಮತ್ತು ದುಃಖವನ್ನು ಸಮ ದೃಷ್ಟಿಯಿಂದ ನೋಡುವನು, ಒಂದು ಮಣ್ಣಿನ ಗಡ್ಡೆಯೂ, ಒಂದು ಕಲ್ಲಿನೂ ಮತ್ತು ಚಿನ್ನದ ತುಂಡಿನೂ ಒಂದೇ ಲಕ್ಷ್ಯ ಕೊಡುವನು. ವಿವೇಕವುಳ್ಳನಾಗಿರುವನು, ಮಧುರವಾದದ್ದನ್ನು ಕರ್ಶವಾದದ್ದನ್ನು ಒಂದೇ ಭಾವನೆಯಿಂದ ಸ್ವೀಕರಿಸುವನು, ಪ್ರಶಂಸೆ ಮತ್ತು ಆಕ್ಷೇಪಣೆಯನ್ನು ಒಂದೇ ದೃಷ್ಟಿಯಿಂದ ನೋಡುವನು)

Content: ಜ್ಞಾನ ಮತ್ತು ಧ್ಯಾನದಿಂದ, ಎಚ್ಚರಿಕೆ ಮತ್ತು ಸಾಧನೆಯಿಂದ, ನಿತ್ಯಾನಂದಕ್ಕೆ (ನಿತ್ಯ-ಆನಂದಕ್ಕೆ) ಪ್ರವೇಶಿಸಲು, ನಿಶ್ಚಿತವಾಗಿ ನಿಮ್ಮ ನೋವೇ ಒಂದು ಚಮತ್ಕಾರದ ಹಬ್ಬಾಗಿರಬಹುದು.

Content: ನನ್ನ ಆಶೀರ್ವಾದಗಳು ಸದಾ ನಿಮ್ಮ ಜೊತೆಯಲ್ಲಿ ಇರುತ್ತವೆ.

Page 18

Content: ನಿಮ್ಮ ಪ್ರಶ್ನೆಗಳಿಗೆ ಉತ್ತರ

Page 19

Content: ಈ ಪ್ರಪಂಚದ ದುಃಖ - ಕಷ್ಟಗಳನ್ನು ಪರಿಹರಿಸಲು ಜ್ಞಾನೋದಯವೇ ಒಂದು ದಾರಿಯೇ?

Content: ಒಂದು ವಿಷಯವನ್ನು ನೀವು ಮೊದಲು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು. ಜ್ಞಾನೋದಯವು ದುಃಖದಿಂದ ತಪ್ಪಿಸಿಕೊಳ್ಳುವ ಒಂದು ದಾರಿ ಅಲ್ಲ. ಇದಕ್ಕೆ ವಿರುದ್ಧವಾಗಿ, ಜ್ಞಾನೋದಯವು, ನೋವಿನ ಲಕ್ಷಣಗಳ ಒಂದು ಅಗಾಧವಾದ ಒಳನೋಟದ ಪರಿಣಾಮ, - ನಾನು ಏಕೆ ದುಃಖವನ್ನು ಒಂದಿದ್ದೇನೆ? ಈ ದುಃಖವನ್ನು ಉಂಟುಮಾಡುತ್ತಿರುವುದು ನನ್ನಲ್ಲೇ ಎಂದ? ಈ ವಿಷಯಗಳ ಪೂರ್ಣ ಜ್ಞಾನದಿಂದಲೇ ಜ್ಞಾನೋದಯವು ಆಗುವುದು.

Content: ನೋವಿನ ಕಾರಣಗಳ ಮತ್ತು ಲಕ್ಷಣದ ಕೇವಲ ಒಂದು ಸ್ಪಷ್ಟ ಪರಿಜ್ಞಾನದಿಂದಲೇ, ನೋವು ತಾನಾಗಿ ತಾನೆ ಇಂಗಿ ಹೋಗುವುದು - ಏಕೆಂದರೆ ಅದಕ್ಕೆ ನಮೋಳಿಗೆ ಬದುಕಿರುವುದಕ್ಕೆ ಇನ್ನಾವ ಉದ್ದೇಶವು ಇಲ್ಲದೆ ಆಗಿ ಹೋಗುವುದು. ಈ ತಿಳುವಳಿಕೆಯು ಒಂದು ಅಪಾರ ಆನಂದದ ಸ್ಥಿತಿಯನ್ನು ಉಂಟುಮಾಡುವುದು - ಈ ಸ್ಥಿತಿಯೇ ಜ್ಞಾನೋದಯ!

Content: ನೀವು ಇದಕ್ಕೆ ಮುಂಚೆ ಯಾವುದನ್ನು ಸುಖಿ ಮತ್ತು ತೃಪ್ತಿ ಎಂದು ತಿಳಿದಿದ್ದರೋ, ಅದು ನಿಜವಾದ ಸುಖವಲ್ಲ ನಿಜವಾದ ತೃಪ್ತಿಯಲ್ಲ - ಎಂಬುವ ಸತ್ಯವನ್ನು ಜ್ಞಾನೋದಯವು ತೋರ್ಪಡಿಸುತ್ತದೆ. ಜ್ಞಾನೋದಯವು ನಿಮ್ಮ ಮೇಲೆ ಪರಮಸುಖವನ್ನು ಮತ್ತು ಆತ್ಮಾನಂದವನ್ನು ಸೂರಿಸುತ್ತದೆ. ನಿಮಗೆ ನಿಜದ ರುಚಿಯನ್ನು ಜ್ಞಾನೋದಯವು ನೀಡುತ್ತದೆ.

Content: ಆದರೆ ಸೆನಪಿನಲ್ಲಿ ಇಿಟ್ಟುಕೊಳ್ಳಿ, ನೀವು ನೋವಿನ ಪ್ರತಿಬಂಧವನ್ನು (pain barrier) ದಾಟುವವರೆಗೆ, ನೋವಿನ ಇಡಿ ವಿಸ್ತಾರವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳುವವರೆಗೆ, ಜ್ಞಾನೋದಯವನ್ನು ಪಡೆಯುವುದಕ್ಕೆ ಸಾಧ್ಯವಿಲ್ಲ. ಜ್ಞಾನೋದಯವು ನೋವಿನಿಂದ ಆಥವ ದುಃಖದಿಂದ ತಪ್ಪಿಸಿ ಕೊಳ್ಳುವುದಕ್ಕೆ ಆಗುವುದಕ್ಕೆ ಒಂದು ಸುಲಭವಾದ ದಾರಿಯು ಖಂಡಿತ ಅಲ್ಲ

Page 20

Content: ಒಂದು ದೃಷ್ಟಿಯಿಂದ ನೋಡಿದರೆ, ನೀವು ನಿಮ್ಮ ದುಃಖ ಪೀಡೆಗಳ ಉಪಕಾರ ಸ್ಮರಣೆಯನ್ನು ಮಾಡಬೇಕು. ಏಕೆಂದರೆ ಅವುಗಳೇ ನಿಮ್ಮನ್ನು ಸತ್ಯ ಮತ್ತು ಅತೀತದ ಅನ್ವೇಷಣೆಗೆ ದಾರಿ ತೋರಿಸಿದ ವೇಗವರ್ಧಕಗಳಲ್ಲವೇ?

Content: ಯಾರಾದರು ನನ್ನನ್ನು ಅವಮಾನ ಮಾಡಿದಾಗ ನನಗೆ ಬೇಗನೆ ಕೋಪ ಬರುವುದು ಮತ್ತು ಮನಸ್ಸಿಗೆ ಹೆಚ್ಚು ನೋವು ಉಂಟಾಗುವುದು. ಇದನ್ನು ನಾನು ಹೇಗೆ ತ್ಯಜಿಸಲಿ?

Content: ಇದನ್ನು ಏಕೆ ತ್ಯಜಿಸಲು ಪ್ರಯತ್ನ ಮಾಡುತ್ತೀರಾ ? ನೋವು, ಕೋಪ, ಅವಮಾನ ಈ ಭಾವನೆಗಳನ್ನೆಲ್ಲ ನೀವು ಒತ್ತಿಟ್ಟರೆ ಅವುಗಳು ನಿಮ್ಮ ಒಳಗಿನ ವ್ಯವಸ್ಥೆಯಲ್ಲಿಯೇ ಅಡಗಿಕೊಂಡು ಇರುವುದು. ಒತ್ತಿಟ್ಟ ಭಾವನೆಗಳು ಬಹಳ ಅಪಾಯಕಾರಿ. ಸ್ವಲ್ಪ ಕೋಪ, ಸ್ವಲ್ಪ ಮನಸ್ಸಿನ ಬೇಜಾರು ಇವುಗಳು ಕಾಲ ಕಳೆದಂತೆ ಹುಣ್ಣಾಗಿ, ಮನಸ್ಸಿನಲ್ಲಿ ಉಗ್ರವಾದ ದ್ವೇಷ ಖಾಯಂ ಆಗುವುದು.

Content: ನಿಮ್ಮ ಭಾವನೆಗಳ ವಿಮರ್ಶನೆಯನ್ನು ಮಾಡುವ ಬದಲು ಅವುಗಳನ್ನು ಸ್ವೀಕರಿಸಲು ಪ್ರಯತ್ನ ಮಾಡಿ. ನಿಮ್ಮ ಮನಸ್ಸಿಗೆ ನೋವಾಗಿದೆಯೇ ? ಹರಿ. ಈಗ ಈ ನೋವಿನ ಭಾವನೆಯೊಳಗೆ ಪ್ರವೇಶಿಸಿ ಮತ್ತು ಸಂಪೂರ್ಣವಾಗಿ ಅನುಭವಿಸಿ. ಅದನ್ನು ತ್ಯಜಿಸಬೇಡಿ, ತಿರಸ್ಕರಿಸಬೇಡಿ, ಆದರೆ ನಿಮ್ಮನ್ನು ನೀವೇ ಕನಿಕರಿಸಲೂ ಬೇಡಿ. ಈ ಭಾವನೆಗಳು ನಿಮ್ಮನ್ನು ನೋಯಿಸಿದವರ ಕಡೆಗೂ ತಿರುಗಿಸಬೇಡಿ. ಸುಮ್ಮನೆ ಈ ಭಾವನೆಗಳು ನಿಮ್ಮೊಳಗೆ ಆಟ ಆಡುವುದನ್ನು ವೀಕ್ಷಿಸಿ. ಈ ಸಾಧನೆಯನ್ನು ಪೂರೈಸುವುದಕ್ಕೆ ಸ್ವಲ್ಪ ಸಮಯ ಹಿಡಿಸಬಹುದು. ಸ್ವಲ್ಪ ದಿನಗಳೇ ಆಗಬಹುದು ! ಇದಾದಂತರ ನಿಮ್ಮೊಳಗೆ ನೀವು ಎಂದೂ ಕಲ್ಪಿಸದ ಪರಿವರ್ತನೆಗೆ ಸಾಕ್ಷಿಯಾಗುವಿರಿ. ಎಷ್ಟಾದರೂ ಭಾವನೆಗಳು ಒಂದು ಪ್ರಚಂಡವಾದ ಶಕ್ತಿಯ (ಎನರ್ಜಿ) ಸ್ವರೂಪವಲ್ಲವೇ ? ನೀವು ಯಾವ ಕ್ಷಣದಲ್ಲಿ ನೋವನ್ನು ಸಂಪೂರ್ಣವಾಗಿ ಸ್ವೀಕರಿಸಿ, ನಿಮ್ಮ ಜೀವನದಲ್ಲಿ

Page 21

Content: ಅದರ ವಿಶೇಷತೆಯನ್ನು ಗ್ರಹಿಸುತ್ತೀರೋ, ಅದೇ ಕ್ಷಣದಲ್ಲಿ ನೋವಿನ ಗುಣವೇ ಬದಲಾಯಿಸುವುದು. ಯಾವ ಶಕ್ತಿಯು ಅಥವಾ ಎನರ್ಜಿಯು ನೋವಿನ, ದುಃಖದ, ಕೋಪದ ಸ್ವರೂಪವಾಗಿ ನಿಮ್ಮಲ್ಲಿ ಸ್ಥತಾಡುತ್ತಿತ್ತೋ, ಅದೇ ಶಕ್ತಿಯು ಪ್ರೀತಿ, ಪ್ರೇಮ, ಮತ್ತು ಆನಂದದ ದಿವ್ಯ ಭಾವನೆಗಳ ಸ್ವರೂಪಕ್ಕೆ ಪರಿವರ್ತಿತವಾಗುವುದು.

Content: ಇದೇ ಶಕ್ತಿಯು ಕರುಣೆ ಅಥವಾ ಸಹಾನುಭೂತಿ - ನಮ್ಮೆಲ್ಲರಲ್ಲಿರುವ ಒಂದು ಮೌನವಾದ ಶಕ್ತಿ ಎಕಟವೋದುದನ್ನು ಸೌಂದರ್ಯಕ್ಕೆ ಪರಿವರ್ತಿಸುವ ಶಕ್ತಿ ಮತ್ತು ನಮ್ಮಲ್ಲಿ ಉಂಟಾಗುವ ಈ ಕರುಣೆಯ ಭಾವನೆಯು ನಮಗೆ ಶ್ರೇಯಸ್ಸನ್ನು ನೀಡುವುದು.

Content: ನಂಬಿಕೆ ಬರುತ್ತಾ ಇಲ್ಲವೆ ? ಹೌದು, ಅದನ್ನು ನೀವೇ ಅನುಭವಿಸುವವರೆಗೆ, ನಂಬುವುದು ಕಷ್ಟ. ಈ ಸಾಧನೆಗೆ ಒಂದು ಅವಕಾಶ ಕೊಡುತ್ನೋಡಿ !

Content: ಪ್ರೀತಿ ಮತ್ತು ನೋವು ಏಕೆ ಯಾವಾಗಲು ಕೂಡಿಕೊಂಡು ಇರವುವು ? ನಾನು ನನ್ನ ಎಲ್ಲಾ ಸಂಬಂಧಗಳೂ ನನ್ನ ಸಂಸಾರಕ್ಕೆ ಪಾಕಷ್ಟು ಪಾಥಂತ್ ನಮು ಕೊಡುತ್ತೇನೆ. ಅದರೂ ಕಡೆಲ್ಲಿ ನನ್ನನ್ನು ಅವರೇಲ ಸ್ವಪ್ರಯೋಜನಕ್ಕಾಗಿ ಬಳಸಿಕೊಳ್ಳುತ್ತಾರೆ.

Content: ಮೊದಲನೆಯದಾಗಿ ನೀವು ನಿಮ್ಮ ಪ್ರೀಯತಮೆಗೆ ನಾನು ಸ್ವಾತಂತ್ರ್ಯ ಕೊಡುತ್ತಾ ಇದ್ದೇನೆ ಎಂಬ ಯೋಚನೆಯೇ ತಪ್ಪಲ್ಲವೆ ? ಪ್ರೀತಿಯ ಅರ್ಥವೇ ಸಂಪೂರ್ಣ ಮತ್ತು ಬೇಷರತ್ತು ಸ್ವಾತಂತ್ರ್ಯ ಕೊಡುವುದು. ನೀವು ನಿಮ್ಮ ಅಭಿಪ್ರಾಯದಲ್ಲಿ ಸಾಕಷ್ಟು ಸ್ವಾತಂತ್ರ್ಯವನ್ನು ಕೊಡುತ್ತಾ ಇದ್ದೀರಾ

Content: ಅಂತ ಹೇಳುವುದರಲ್ಲೆ ನಿಮ್ಮ ಕೊಡುವಿಕೆಯಲ್ಲಿ ಸ್ವಲ್ಪ ಹಿಡಿತ ಇದೆ ಎಂದು ಸ್ಪಷ್ಟವಾಗಿ ತೋರ್ಪಡಿಸುತ್ತದೆ. ನಿಮ್ಮ ಪ್ರಿಯತಮೆಯ ಮೇಲೆ ಯಜಮಾನಿಕೆ ಹೊಂದಬೇಕೆನ್ನಿಸುವುದು

Page 22

Content: ನೋವಿನಿಂದ ಆನಂದಕ್ಕೆ

Content: ಸ್ವಾಭಾವಿಕ. ಅದು ನಿಮ್ಮ ಅಹಂಕಾರವು ಆಡಿಸುತ್ತಿರುವ ಒಂದು ಆಟ ! ನಿಮ್ಮ ಸಂಗಾತಿಗೆ ನಿಮ್ಮ ಬಂಧನದಿಂದ ಸ್ವಲ್ಪ ಹೊತ್ತುಕಾಲ ವಿಮೋಚನೆಯ ಅವಶ್ಯಕತೆ ಇದೆ ಎಂಬುವುದು ನಿಮಗೆ ಕಲ್ಪಸಲು ಸಾಧ್ಯವೇ ಇಲ್ಲ ಅಲ್ಲವೇ ? ಸ್ವಾತಂತ್ರ್ಯ ಕೊಡುವುದು ಬಹಳ ಉತ್ತಮವಾದದ್ದು ಎಂಬ ನಂಬಿಕೆಯಲ್ಲಿಯೇ ನೀವು ನಡೆದುಕೊಂಡಿರುತ್ತೀರ. ಆದರೆ ನಿಮ್ಮ ಪ್ರಿಯತಮೆಯೂ ನಿಜವಾಗಿಯೂ ಈ ಸ್ವಾತಂತ್ರ್ಯವನ್ನು ಉಪಯೋಗಿಸಿಕೊಂಡಾಗ, ನೀವು ನಿಮ್ಮ ಅನುಚಿತ ಉಪಯೋಗವಾಗಿದೆಯೆಂದು ಭಾವಿಸುತ್ತೀರ. ನೀವು ಕೊಟ್ಟಿದ್ದ ಸ್ವಾತಂತ್ರ್ಯವನ್ನು ತನಗೆ ಇಷ್ಟ ಬಂದಿದ್ದ ಕೆಲಸಕ್ಕೆ ಅಥವಾ ಬೇರೆಯವರ ಜೊತೆ ಇರುವುದಕ್ಕೆ ಯಪಯೋಗಿಸುತ್ತಾಳೆ ಅಂತ ನೀವು ಎಂದಿಗೂ ಕಲ್ಪಿಸಲರಲ್ಲವಲ್ಲವೇ?

Content: ಇಷ್ಟೆಲ್ಲ ಆದಮೇಲೆಯೂ ನಾನು ನನ್ನ ಸಂಬಂಧಗಳಲ್ಲಿ ಸ್ವಾತಂತ್ರ್ಯವನ್ನು ನೀಡಿದಾಗೆಲ್ಲ ನನಗೆ ಮೋಸವಾಗುವುದು ಅಂತ ನಿರ್ಣಯವನ್ನು ಮಾಡಿದರೆ ಅದು ಬಹಳತಪ್ಪು!

Content: ಸ್ವಲ್ಪ ಯೋಚನೆ ಮಾಡಿ ನೋಡಿ, ಇದರಲ್ಲಿಯೆಲ್ಲ ನಿಮ್ಮದೂ ತಪ್ಪಿದೆಯಲ್ಲವೆ ? ಪ್ರೇಮಿಗಳು ತಮಗೆ ಗೊತ್ತಿಲದೆ ಒಬ್ಬರೊಬ್ಬರು ಪಟಿರಿರುವ ಅಪೇಕ್ಷೆಗಳ ಬಂಗಾರದ ಪಂಜರದಲ್ಲಿ ಒಬ್ಬರೊಬ್ಬರು ಸೆರೆಯಿಡುತ್ತಾರೆ. ಈ ಕಾರಣದಿಂದಲೇ ಸಾಮಾನ್ಯವಾಗಿ ಪ್ರೀತಿಯ ಸಮೇತವಾಗಿ ನೋವು ಉಂಟಾಗುವುದು. ಆದರೆ ನಿಜವಾದ ಪ್ರೇಮ, ಸೆರೆಯಲ್ಲಿ ಅರಳುವುದಕ್ಕೆ ಸಾಧ್ಯವಿಲ್ಲ. ಹೀಗೆ ಒಬ್ಬರೊಬ್ಬರು ಸೆರೆಯಲ್ಲಿಟ್ಟಿದ್ದರೆ, ಸ್ವಲ್ಪ ಸಮಯ ಕಳೆದ ಮೇಲೆ ನೀವು ಈ ಪ್ರೀತಿಯೇ ಒಂದು ದೊಡ್ಡ ಸಂಕಟ ಮತ್ತು ಪ್ರೀತಿಸದೆ ಇರುವುದುದು ಇನ್ನೂ ಉತ್ತಮ ಎಂದು ಭಾವಿಸುತ್ತೀರಿ. ಆದರೆ ನೀವು ನಿಮ್ಮ ಹೃದಯದ ಬಾಗಿಲನ್ನು ಪ್ರೇಮಕ್ಕೆ ಮುಚ್ಚಿಕೊಂಡರೆ ಈ ಜೀವನದಲ್ಲಿ ಇನ್ನೇನು ಬಾಕಿ ಇದೆ ? ಪ್ರೇಮವು ಸುಖಕ್ಕೆ ಮತ್ತು ಸ್ವಾತಂತ್ರ್ಯಕ್ಕೆ ದಾರಿಯಾಗಬಹುದು ಅಥವಾ ನರಕವಾಗಬಹುದು. ಪ್ರೇಮವನ್ನು ನೋವಾಗಿ ಅಥವಾ ದುಃಖವಾಗಿ ಅನುಭವಿಸಿದರೆ ನೀವು ಪ್ರೇಮದ ನಿಜವಾದ ಉದೇಶವನೇ ಕಳೆದುಕೊಂಡೀರ. ಎಂದಿಗೂ ಕಲ್ಪಿಸಲರಲ್ಲವಲ್ಲವೇ ?

Page 23

Content: ಭಾರತ ದೇಶದಲ್ಲಿ ನಾವು ಬಹಳ ಹಿಂದಿನಿಂದ ಬಂದಿದ್ದ 'ಕರ್ಮ' ಸಿದ್ಧಾಂತ (ಅನಿವಾರಣೀಯ ದುಃಖ ಅನುಭವ)ವನ್ನು ನಂಬಿಕೊಂಡು ಬಂದಿದ್ದೇವೆ. ಜೀವನದಲ್ಲಿ ನಮಗೆ ದುಃಖದ ಅನುಭವ ಆಗತ್ಯವೇ?

Content: : ಮೊದಲನೆಯದಾಗಿ, ದುಃಖ ಪಡುವುದು ಜೀವನಕ್ಕೆ ಸಹಜವಲ್ಲ. ಆದರೆ ಅದು ನಮ್ಮ ಮನಸ್ಸಿನ ಒಂದು ಸ್ಥಿತಿ, ಎಂದು ನೀವು ಚೆನ್ನಾಗಿ ತಿಳಿದುಕೊಳ್ಳಬೇಕು. ನಿಮ್ಮ ಜೀವನದಲ್ಲಿ ದುಃಖವು ಒಂದು ಘಟನೆ ಅಲ್ಲ ಹೊರತು ಅದು ಒಂದು ಘಟನೆಗೆ ನೀವು ನೀಡಿದ ಪ್ರತಿಕ್ರಿಯೆ. ನೀವು ಯಾವುದೇ ಒಂದು ಸಂದರ್ಭದಲ್ಲಿ ದುಃಖ ಪಡುತ್ತೀರೋ ಇಲ್ಲವೋ, ಅದು ಆ ಸಂದರ್ಭಕ್ಕೆ ನಿಮ್ಮ ಪ್ರತಿಕ್ರಿಯೆಯು ನಿರ್ಧರಿಸುತ್ತದೆ.

Content: ನೀವು ಯಾವ ಯಾವ ಸಂದರ್ಭಗಳಲ್ಲಿ ದುಃಖ ಪಡುತ್ತೀರಾ ? ನೀವು ಕಾಯಿಲೆ ಬಿದ್ದಾಗಲೇ ? ನಿಮ್ಮ ಪಕ್ಕದ ಮನೆಯವರು ಹೊಸ ಕಾರು ಕೊಂಡುಕೊಂಡಾಗಲೇ ? ನಿಮ್ಮ ಪ್ರಿಯತಮ/ಪ್ರಿಯತಮೆಯು ಬೇರೆಯವರಿಗೋಸ್ಕರ ನಿಮ್ಮನ್ನು ಬಿಟ್ಟುಹೋದಾಗಲೇ? ಅದೇಲ್ಲ ಬಹಳ ಅನ್ಯಾಯವೆಂಬ ಭಾವನೆ ಇಲ್ಲದೆ ಮತ್ತು ಕೋಪವಿಲ್ಲದೆ ನೀವು ಈ ಸಂದರ್ಭಗಳನ್ನು ಅವರು ಇದ್ದ ಹಾಗೆ ಸ್ವೀಕರಿಸಿದರೆ ಬಹುಶಃ ನಿಮಗೆ ಅಷ್ಟು ಕಷ್ಟವಾಗುವುದಿಲ್ಲ. ಈಗ ನಿಮ್ಮ ಪಕ್ಕದ ಮನೆಯವರು ಹೊಸ ಕಾರು ಕೊಂಡುಕೊಳ್ಳುವ ವಿಷಯದೊಳಗೆ ಏನು ದುಃಖ ಇದೆ ? ನಿಮ್ಮ ಪ್ರಿಯತಮೆಯು ನಿಮ್ಮನ್ನು ಬಿಟ್ಟು ಹೋದರೆ ಖಂಡಿತ ಆ ಕ್ಷಣಗಳಲ್ಲಿ ಮನಸ್ಸಿಗೆ ದುಃಖ ಉಂಟಾಗುವುದು. ಆದರೆ ನೀವು ಆ ಕ್ಷಣಗಳ ವಿರೋಧ ಮಾಡದೆ ಅವುಗಳನ್ನು ಸ್ವೀಕರಿಸಿ ಅವುಗಳ ಅನಿವಾರ್ಯತೆಯನ್ನು ಸ್ವಾಗತಿಸಲು ಪ್ರಯತ್ನ ಮಾಡಿ. ಆದರೆ ಯಾವುದೇ ಪ್ರತಿಕ್ರಿಯೆಯನ್ನು

Page 24

Content: ನೋವಿನಿಂದ ಆನಂದಕ್ಕೆ ನೀಡಬೇಡಿ. ಅದು ಏಕೆಂದರೆ ನಿಮ್ಮ ನಕಾರಾತ್ಮಕ (ನೆಗೆಟಿವ್) ಪ್ರತಿಕ್ರಿಯೆಗೆ ಮಾತ್ರ ನಿಮ್ಮನ್ನು ಸಂಕಟಪಡಿಸುವ ಶಕ್ತಿಯು ಇರುವುದು. ನೀವು ದುಃಖ ಪಡುತ್ತೀರೋ ಇಲ್ಲವೋ ಅದು ನಿಮ್ಮ ಕೈಯಲ್ಲಿ ಇದೆ. ಏಕೆಂದರೆ ನಿಮ್ಮೊಳಗಿನ ಮೌನವಾದ ಅನುಮತಿ ಇಲ್ಲದೆ ನಿಮಗೆ ದುಃಖ ಪಡೆಯುವುದಕ್ಕೆ ಸಾಧ್ಯವೇ ಇಲ್ಲ. ಈ ಮಾತು ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತಾ ಇದೆ, ಅಲ್ಲವೆ?

Content: ನಿಮ್ಮ ವ್ಯಕ್ತಿಗತ ವಿಮರ್ಶೆ ಇಲ್ಲದೆ ನಿಮ್ಮ ಅನುಭವಗಳನ್ನು ವೀಕ್ಷಿಸುವ ಅಭ್ಯಾಸವನ್ನು ಮಾಡಿಕೊಳ್ಳಿ. ನಿಮ್ಮ ವಿವಿಧ ಕಷ್ಟಗಳ ಮೂಲವನ್ನು (ಕೆಲವು ಕಾಣಿಸಿಕೊಳ್ಳದಿರುವಂಥದ್ದು ಕೆಲವು ಅಡಗಿಕೊಂಡಿರುವಂಥದ್ದು) ಚೆನ್ನಾಗಿ ಗುರತಿಸಲು ಕಲಿತುಕೊಳ್ಳಿ. ಈ ವಿದ್ಯೆಯನ್ನು ನಿಮಗೆ ಒಂದೇ ದಿವಸದಲ್ಲಿ ಗಳಿಸಲು ಸಾಧ್ಯವಿಲ್ಲ. ಆದರೆ ನಿರಂತರ ಸಾಧನೆಯಿಂದ ಈ ಕೌಶಲ್ಯವನ್ನು ಪಡೆಯಬಹುದು.

Content: ಕಾಯಿಲೆ ಬಿಳುವದಕ್ಕೆ ಒಂದು ಬಹಳ ಸೂಕ್ಷ್ಮವಾದ ಕಾರಣ ಇರಬಹುದು. ನೀವು ಆ ನೋವಿನಿಂದ ಸುಖ ಪಡುತ್ತಿರಬಹುದು!

Content: ಉದಾಹರಣೆಗೆ ನೀವು ಕಾಯಿಲೆ ಬಿದ್ದಾಗ ನೀವು ಬೇರೆಯವರಿಂದ ಬಯಸಿದ ಆರೈಕೆ ಮತ್ತು ಗಮನ ಪಡೆದು ಸುಖಿಸುತ್ತಿರಬಹುದು. ಕೆಲವೊಮ್ಮೆ ನೀವೇ ನಿಮಗೆ ಅಥವಾ ಬೇರೆಯವರಿಗೆ ಗಾಯಗೊಳಿಸುವುದರಲ್ಲಿ ಸುಖ ಪಡೆಯುತ್ತೀರ - ಇದು ಏಕೆ ಎಂಬುದನ್ನು ನಿಮ್ಮನ್ನು ನೀವೇ ಪರೀಕ್ಷಿಸಿಕೊಂಡು ನೋಡಿ. ಇದೇ ಸುಖವನ್ನು ನೀವು ಅಥವಾ ಬೇರೆಯವರು ಗಾಯಹೊಂದದೆ, ಬೇರೆ ಉತ್ತಮವಾದ ದಾರಿಯಿಂದ ಗಳಿಸಲು ಸಾಧ್ಯವೆ ಎಂದು ನೀವು ಯೋಚಿಸಬೇಕು.

Content: ಎಚ್ಚರಿಕೆಯಿಂದಿರಿ - ಇದೇ ಮೊದಲನೆಯ ಹೆಜ್ಜೆ.

Page 25

Content: ಸಂದರ್ಭವನ್ನು ಸಂಪೂರ್ಣವಾಗಿ ಸ್ವೀಕರಿಸಿ - ಇದು ಎರಡನೆಯ ಹೆಜ್ಜೆ

Content: ಎಚ್ಚರಿಕೆ ಯೊಡನೆ ಸ್ವೀಕಾರ - ದುಃಖ ನಿವಾರಣೆಗೆ ಇದೇ ಒಂದು ದಾರಿ.

Content: ನಿಮ್ಮ ಪ್ರಶ್ನೆಯ ಎರಡನೆಯ ಭಾಗ - ಜೀವನದಲ್ಲಿ ದುಃಖದ ಅನುಭವ ಆಗತ್ಯವೇ?

Content: ಹೌದು, ಒಂದು ವಿಧವಾಗಿ ದುಃಖದ ಅನುಭವ ಆಗತ್ತೆ. ಅದು ಏಕೆಂದರೆ ದುಃಖವು ನಿಮ್ಮ ವ್ಯಕ್ತಿತ್ವ ವಿಕಾಸಕ್ಕೆ ಒಂದು ಪ್ರಭಾವವುಳ್ಳ ವೇಗವರ್ಧಕವಾಗಿರುತ್ತದೆ. ಬೀಜದ ಒಳಗಿದ್ದ ಒಂದು ಸಣ್ಣ ಗಿಡದ ಸಸಿಯು ಹೊರಗೆ ಬಂದು, ಬೆಳೆದು ಅರಳುವುದಕ್ಕೆ ಹೇಗೆ ಬೀಜ ಸೀಳಿ ಹೊರಗೆ ಬರುವುದೋ, ಅದೇ ರೀತಿಯಲ್ಲಿ ದುಃಖದ ಅನುಭವವೂ ನಿಮ್ಮ ಅಹಂಕಾರವನ್ನು ಸಮರ್ಥಿಸಿ, ರಕ್ಷಿಸುತ್ತಿರುವ ನಿಮ್ಮ ತಪ್ಪು ಯೋಚನಾ ಕ್ರಮಗಳನ್ನು ಚೂರು ಚೂರು ಮಾಡಿ, ನಿಮ್ಮನ್ನು ಜಾಗ್ರತೆಯ ದಿಕ್ಕಿನಲ್ಲಿ ಹೊರಡಿಸುತ್ತದೆ. ಅಹಂಕಾರ ರೂಪೀ ಬೀಜದಿಂದ ನೀವು ಹೊರಗೆ ಬಂದಾಗ ನೀವು ನಿಜವನ್ನು ಸ್ಪಷ್ಟವಾಗಿ ಕಾಣುವಿರಿ. ನಿಮ್ಮ ಮತ್ತು ನಿಮ್ಮ ದುಃಖದ ನಡುವೆ ಒಂದು ಸೂಕ್ಷ್ಮವಾದ ಅಗಲುವಿಕೆಯನ್ನು ಗ್ರಹಿಸುವಿರಿ - ದುಃಖ ನಿಮ್ಮದು ಅಲ್ಲ. ನಿಮಗೆ ಸಹಜವಾದದ್ದು ಅಲ್ಲ. ವಾಸ್ತವವಾಗಿ ದುಃಖವು ಕಣ್ಮರೆಯ ಸಂದರ್ಭಕ್ಕೇ ನೀವು ನೀಡಿದ ಪ್ರತಿಕ್ರಿಯೆ. ಈ ಸತ್ಯವನ್ನು ನೀವು ತಿಳಿದುಕೊಂಡ ಮೇಲೆ ನಿಮಗೆ ದುಃಖವನ್ನು ಅನುಭವಿಸಲು ಸಾಧ್ಯವೇ ಇಲ್ಲ. ದುಃಖವನ್ನು ಪೂರ್ಣ ಎಚ್ಚರಿಕೆಯಿಂದ ಸ್ವೀಕರಿಸುವುದರಲ್ಲೇ ನೀವು ಅದನ್ನು ವಾಸ್ತವವಾಗಿ ತ್ಯಜಿಸುವಿರಿ.

Content: ಪರಮಾನಂದವನ್ನು ಪಡೆಯುವುದಕ್ಕೆ ದುಃಖವೇ ಒಂದು ದಾರಿ ಎಂಬುದು ನಿಜವಲ್ಲ. ಆದರೆ ದುಃಖ ನೀಡಿದ ಪಾಠದಿಂದ ಅದು ಕೇವಲ ನಮ್ಮ ದೋಂದು ಭ್ರಮೆ ಎಂದು ತಿಳಿದುಕೊಳ್ಳಬಹುದು. ದುಃಖದ ಅನುಭವವು, ದುಃಖ ಪಡುವುದೇ ಅನಾವಶ್ಯಕ ಎಂದು ತೋರಿಸುತ್ತದೆ. ಈ ದುಃಖವನೇ ನಾನು 'ಅವಶ್ಯಕ ದುಃಖದ ಅನುಭವ' ಎಂದು ಕರೆಯುತ್ತೇನೆ.

Page 26

Content: ನೀವು ದುಃಖವನ್ನು ತ್ಯಜಿಸಿದರೆ ಆನಂದವು ಉಂಟಾಗುವುದು ಅಂತ ಹೇಳುತ್ತೀರ ಆದರೆ ಆನಂದವು ನಮ್ಮನ್ನು ತ್ಯಜಿಸಿದಾಗ ಮತ್ತೊಮ್ಮೆ ದುಃಖ ಉಂಟಾಗುವುದು. ನಾನು ದುಃಖದ ಸ್ಥಿತಿಯಿಂದ ಆನಂದಕ್ಕೆ ಹೇಗೆ ಏರಲಿ?

Content: ನೀವು ಮೊದಲು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕಾಗಿರುವುದು ಏನೆಂದರೆ ದುಃಖ ಮತ್ತು ಆನಂದ ಒಂದಕ್ಕೊಂದು ವಿರುದ್ಧವಲ್ಲ. ಆನಂದಕ್ಕೂ ದುಃಖಕ್ಕೂ ಯಾವ ಸಂಬಂಧವೇ ಇಲ್ಲ.

Content: ಸುಖವು ದುಃಖದ ವಿರುದ್ಧ- ಮತ್ತು ಎಲ್ಲಾ ವಿಪರೀತವಾದ ಗುಣಗಳ ರೀತಿಯಲ್ಲಿ ಒಂದು ಗುಣದ ವಿಹೀನದಲ್ಲಿ ಇನ್ನೊಂದಕ್ಕೆ ಜೀವವೇ ಇಲ್ಲ (ಅರ್ಥವೇ ಇಲ್ಲ). ಹೀಗೆ, ನೀವು ದುಃಖವನ್ನು ಅನುಭವಿಸಿಲ್ಲದಿದ್ದರೆ ಸುಖ ಅನುಭವಿಸುವುದಕ್ಕೂ ಸಾಧ್ಯವಿಲ್ಲ.

Content: ದುಃಖದ ವಿಹೀನದಲ್ಲಿಯೇ ನೀವು ಸುಖವನ್ನು ಅನುಭವಿಸಲು ಸಾಧ್ಯ. ಭಾರತದ ಧರ್ಮಗ್ರಂಥಗಳಲ್ಲಿದ್ದ ಒಂದು ಮುಖ್ಯವಾದ ವಿಷಯವೇನೆಂದರೆ ಸುಖ ಮತ್ತು ದುಃಖ ಇವೆರಡು ಭಾವನೆಗಳನ್ನು ದುಃಖ ಪದದಿಂದ ಸೂಚಿಸಲಾಗಿದೆ.

Content: ಇಕೆಂದರೆ ದುಃಖ ಮತ್ತು ಸುಖ ಈ ಎರಡರ ಕಡೆಯ ಪರಿಣಾಮ ದುಃಖ.

Content: ಸುಖ ಮತ್ತು ದುಃಖದ ತತ್ವಗಳನ್ನು ತ್ಯಜಿಸುವ ಪರಿಣಾಮವೇ ಆನಂದ - ಮತ್ತು ಈ ಎರಡು ತತ್ವಗಳನ್ನು ನೀವು ಒಟ್ಟಿಗೆ ತ್ಯಜಿಸಬೇಕು.

Content: ಬೇರೆ ಯಾವೂ ದಾರಿ ಇಲ್ಲ! ದುಃಖ ಮತ್ತು ಸುಖ ಇವೆರಡು ನಿಮ್ಮೊಳಗೆ ತಳಮಳವನ್ನು ನೀಡಲಾರದೆ ಇದ್ದರೆ ಪರಮಾನಂದವು ನಿಮ್ಮೊಳಗೆ ಪ್ರವಾಹ ಆಗುವುದು.

Content: ಈ ಪರಮಾನಂದವು ದುಃಖ-ಸುಖದ ಸ್ಥರಗಳನ್ನು ಮೀರಿದ ಒಂದು ಸ್ಥಿತಿ.

Content: ಪರಮಾನಂದವು ಒಂದು ಸಂಪೂರ್ಣ ಸ್ವರಮೇಳ, ಒಳಗಿನ ಪೂರ್ಣ ಮೌನ, ಸಂಪೂರ್ಣ ಶಾಂತಿ.

Content: ನನ್ನ ಮಾತು ಅರ್ಥವಾಯಿತೇ?

Page 28

Content: ಪರಮಹಂಸ ನಿತ್ಯಾನಂದರನ್ನು ಕುರಿತು

Content: ಜೀವನದ ಉದ್ದೇಶವನ್ನು ಅರಿಯುವ ಮಾನವನ ಕೊನೆಯಿಲ್ಲದ ಹುಡುಕಾಟವು ಈ ವಾಕ್ಯದೊಂದಿಗೆ ಕೊನೆಗೊಳ್ಳುತ್ತದೆ. ಆನಂದವೂ ಮಾರ್ಗ ಮತ್ತು ಗುರಿ. ಇದೇ ನಮ್ಮ ನಡುವೆ ಇರುವ ಪರಮ ಜ್ಞಾನ ಹೊಂದಿದ ಮತ್ತು ಆಧುನಿಕ ಆಧ್ಯಾತ್ಮಿಕ ಗುರುಗಳಾದ ಪರಮಹಂಸ ನಿತ್ಯಾನಂದರ ಅನುಭವ ಮತ್ತು ಬೋಧನೆ.

Content: ಅವರ ಜೀವನ ಧ್ಯೇಯವು, ಆನಂದವೇ ಅಂತಿಮ ಗುರಿಯಲ್ಲ ಆದರೆ ಮಾರ್ಗವೇ- ಅಂದರೆ ದಿನದ 24 ಗಂಟೆಗಳೂ ಆನಂದದಲ್ಲಿ ಬದುಕುವುದು!- ಎಂದು ಅನುಭವದಿಂದ ಅರಿಯುವುದನ್ನು ಮೊದಲು ನೀಡುವುದು. ನಮ್ಮದೇ ಅಂತರ್ಯದ ಜಾಗದಲ್ಲಿ ಕೆಲಸ ಮಾಡುವ ಮುಖಾಂತರ ಇದು ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಇದು ಸಾಧ್ಯವೆಂಬ ಅರಿವನ್ನು ನಮ್ಮಲ್ಲಿ ತರುತ್ತದೆ.

Content: ಪರವಹಂಸರ ನಿತ್ಯಾನಂದರು ಹುಟ್ಟಿದ್ದು ತಿರುವಣ್ಣಾಮಲೈ- ದಕ್ಷಿಣ ಭಾರತದ ಆಧ್ಯಾತ್ಮಿಕತೆಯ ಶಕ್ತಿ ಕೇಂದ್ರದಲ್ಲಿ.ತೀವ್ರವಾದ ಧ್ಯಾನ, ಯೋಗದ ಅಧ್ಯಯನ, ತಂತ್ರ ಮತ್ತು ಇತರ ಪೌರಾತ್ಯ ಆಧ್ಯಾತ್ಮ ಜ್ಞಾನದ ಮುಖೇನ ಅವರು ಅಂತರಂಗದ ಪರಮಾನಂದವನ್ನು ಹೊಂದಿದರು. ಅವರದೇ ಸ್ವಂತ ಅನುಭವದಿಂದ ಪ್ರತಿಯೊಬ್ಬ ವ್ಯಕ್ತಿಯ ಜಾಗೃತಿಯನ್ನು ಸ್ಪೋಟಿಸಲು ಮತ್ತು ಆಧ್ಯಾತ್ಮಕವಾಗಿ ಬಲಾಡ್ಯ ವ್ಯಕ್ತಿಗಳನ್ನು ಸೃಷ್ಟಿಸಲು ತಂತ್ರಜ್ಞಾನವೊಂದನ್ನು ರೂಪಿಸಿದರು. ರೂಪಿಸಿದ ಅಸಂಖ್ಯಾತ ಕಾರ್ಯಕ್ರಮಗಳು ಧ್ಯಾನವೆಂದು ಕರೆಯುವ ಸಹಜ ಜಾಗದಲ್ಲಿ ವ್ಯಕ್ತಿಯು ಬೀಳುವಂತೆ ಮಾಡುತ್ತವೆ. ಅವರು ಹೇಳುತ್ತಾರೆ, ಭೌತಿಕ ಜಗತ್ತಿನಲ್ಲಿ ಯಶಸ್ಸನ್ನು ಮತ್ತು ನಿಮ್ಮ ಅಂತರಂಗದಲ್ಲಿ ಆಳವಾದ ಸಾಫಲ್ಯತೆಯನ್ನು ತರಲು ಧ್ಯಾನವು ಅನುಪಮ ಕೀಲಿಕೈ.

Page 29

Content: ಲೈಫ್ ಬ್ಲಿಸ್ ಫೌಂಡೇಶನ್ ಕುರಿತು (LBF)

Content: ಲೈಫ್ ಬ್ಲಿಸ್ ಫೌಂಡೇಶನ್ ಎಂಬುದು ಅಂತರಂಗದ ಆನಂದಕ್ಕಾಗಿ ಪರಮಹಂಸ ನಿತ್ಯಾನಂದರ ಜಾಗತಿಕ ಆಂದೋಲನ. 2003ನೇ ಇಸವಿಯಲ್ಲಿ ಸ್ಥಾಪನೆಗೊಂಡ ಇದು ಈಗ 33 ದೇಶಗಳಲ್ಲಿ 1300 ಕೇಂದ್ರಗಳೂ ಹಬ್ಬಿದೆ. ಅದರ ತೆಕ್ಕೆಯಲ್ಲಿ, ಇಂಟರ್ ನ್ಯಾಷನಲ್ ವೇದಿಕ್ ಹಿಂದೂ ಯೂನಿವರ್ಸಿಟಿ (IVHU) ಯುಎಸ್‌ಎ ಮತ್ತು ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ, ಯುಎಸ್‌ಎ, ಇವುಗಳನ್ನು ಹೊಂದಿದೆ.

Content: ಪ್ರಪಂಚದಾದ್ಯಂತ ನಿತ್ಯಾನಂದ ಮೆಡಿಟೇಶನ ಅಕಾಡಮೀಸ್ (NMAS) ಎಂಬ ಸಮಾವೇಶಗಳು ಇದರ ಆಧ್ಯಾತ್ಮಿಕ ಪ್ರಯೋಗಾಲಯಗಳಾಗಿ ಸೇವೆ ಮಾಡುತ್ತಿವೆ. ಇಲ್ಲಿ ಆಂತರಿಕ ಬೆಳವಣಿಗೆಯು ಅಗಾಧವಾಗಿದ್ದು ಬಾಹ್ಯಬೆಳವಣಿಗೆಯು ಸ್ವಾಭಾವಿಕ ಪರಿಣಾಮವಾಗಿರುತ್ತದೆ. ಈ ಸಮಾವೇಶಗಳು ಧ್ಯಾನದಿಂದ ವಿಜ್ಞಾನದಂತಹ ವಿವಿಧ ಚಟುವಟಿಕೆಗಳಿಂದ ಆನ್ವೇಷಿಸಲು ಮತ್ತು ವಿಸ್ಫೋಟನೆಗೊಳ್ಳಲು ಅನುಭವಗಳು ಒಂದು ಸಳವು ಮತ್ತು ಜಾಗವನ್ನು ನೀಡುತ್ತಿವೆ. ಭೌತಿಕ ಮತ್ತು ಆಧ್ಯಾತ್ಮಿಕ ಜಗತ್ತುಗಳನ್ನು ಒಳೀನಗೊಂಡು ಪರಮಾನಂದದ ಜೀವಿತವನ್ನು ಸೃಷ್ಟಿಸುವಂತಹ ಪರಿಮಾಣಿತ ಆಧ್ಯಾತ್ಮಿಕತೆ (Quantum Spirituality)ಯನ್ನು ಆವು ಪೋಶಿಸುತ್ತವೆ. ಆವು ಶೀಘ್ರವಾಗಿ ಮತ್ತು ಪರಿಣಾಮಕಾರಿಯಾಗಿ ಜೀವನದ ಬದಲಾವಣೆಯನ್ನು ಕೊಡುವಂತಹ ಖಚಿತವಾದ ಜೀವನದ ಪರಿಹಾರಗಳನ್ನು ನೀಡುತ್ತಿವೆ. IVHU ಮುಖಾಂತರ ಪ್ರಪಂಚದಾದ್ಯಂತ ವೈರುಧ್ಯ ಶ್ರೇಣಿಯ ಧ್ಯಾನತಂತ್ರಗಳನ್ನು ನೀಡಲಾಗುತ್ತಿದೆ. ಹಾಗೆಯೇ ನಿತ್ಯಾ ಸ್ಪಿರಿಚ್ಯುಯಲ್ ಹೀಲಿಂಗ್ ಸಿಸ್ಟಮ್ ಮುಖೇನ ಉಚಿತ ಗುಣಮಾಡುವಿಕೆ, ಯುವ ಜನರಿಗೆ ಉಚಿತ ಶಿಕ್ಷಣ, ಕಲೆ ಮತ್ತು ಸಂಸ್ಕೃತಿಗೆ ಉತ್ತೇಜನ,

Content: ಸಾಮುದಾಯಿಕ ಕಾರ್ಯಕ್ರಮಗಳು, ಉಚಿತ ವೈದ್ಯಕೀಯ ಶಿಬಿರಗಳು, ಉಚಿತ ಭೋಜನ,

Page 30

Content: ಭಾರತದಲ್ಲಿ ಒಂದು ವರ್ಷ ಅವಧಿಯ ನಿವಾಸಿತ ಆಧ್ಯಾತ್ಮಿಕ ಶಿಕ್ಷಣ ಕಾರ್ಯಕ್ರಮ, ಮಕ್ಕಳಿಗಾಗಿ ಒಳಾಂಗಣ ಗುರುಕುಲ ಪದ್ಧತಿಯ ಶಿಕ್ಷಣ, ಮುಂತಾದ ಇದೇ ರೀತಿಯ ಇನ್ನೂ ಅನೇಕ ಸೇವೆಗಳನ್ನು ಪ್ರಪಂಚದಾದ್ಯಂತ ನೀಡಲಾಗುತ್ತಿದೆ.

Content: ನಿತ್ಯಾನಂದ ಧೀರ ಸೇವಾ ಸೇನಾ (NDSS)ದ ಆನಂದ ಸೇವಕ್ ಎಂಬ ಸ್ವಯಂ ಸೇವಕರು - ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಸಮರ್ಪಿತ ಸ್ವಯಂ ಸೇವಕರೊಂದಿಗೆ ಆತ್ಮೀಯತಾದಿಂದ ಪ್ರಚಾರವನ್ನು ಬೆಂಬಲಿಸುತ್ತಿದೆ.

Content: ಲೈಫ್ ಬ್ಲಿಸ್ ಫೌಂಡೇಶನ್ (LBF)ನ ಕೊಡುಗೆ :

Content: ದೇಹ, ಮನಸ್ಸು ಮತ್ತು ಆತ್ಮದ ಹಂತದಲ್ಲಿ ಲಕ್ಷಗಟ್ಟಲೆ ಜನರಿಗೆ ಉಪಯೋಗವಾಗಲು ಪ್ರಪಂಚದಾದ್ಯಂತ LBF ವೈಶಿಷ್ಟ್ಯ ಪೂರ್ಣ ಧ್ಯಾನಕಾರ್ಯಕ್ರಮಗಳನ್ನು ನೀಡುತ್ತದೆ. ಅವುಗಳಲ್ಲಿ ಕೆಲವು:

Content: LBP ಹಂತ 1 - ಲೈಫ್ ಬ್ಲಿಸ್ ಪ್ರೋಗ್ರಾಂ

Content: ನಿಮ್ಮನ್ನು ನೀವೇ ಸಚೇತನಗೊಳಿಸಿಕೊಳ್ಳಿ

Content: ನಿಮ್ಮ ವ್ಯವಸ್ಥೆಯಲ್ಲಿರುವ ಏಳು ಪ್ರಮುಖ ಚಕ್ರಗಳನ್ನು ವಿಶ್ರಾಂತಿಗೊಳಿಸಿ ಸಚೇತನಗೊಳಿಸುವ ಚಕ್ರದ ಮೇಲೆ ನಡೆಸುವ ಕಾರ್ಯಕ್ರಮ. ಅದು ನಿಮ್ಮ ವಿವಿಧ ಮನೋಭಾವನೆಗಳ ನೇರ ಪ್ರಯೋಗಾತ್ಮಕ ತಿಳಿವಳಿಕೆಗಳಿಂದ ಬೆಂಬಲಿತವಾದ ಸ್ಪಷ್ಟವಾದ ಬೌದ್ಧಿಕ ತಿಳಿವಳಿಕೆಯನ್ನು ನೀಡುವುದು. ಅದು ಬೌದ್ಧಿಕ

Page 31

Content: ಹಂತದಲ್ಲಿ ಆಧ್ಯಾತ್ಮಿಕತೆಯ ಪರಿಣಾಮವನ್ನು ಉಂಟುಮಾಡುವಂತೆ ವಿನ್ಯಾಸಗೊಳಿಸಲಾಗಿದೆ. ನಿಮ್ಮದೇ ಆತ್ಮಾನಂದದ ವಾಸ್ತವಿಕತೆಯನ್ನು ಅನುಭವಿಸಲು ಇರುವ ಒಂದು ಖಚಿತವಾದ ಜೀವನ ಪರಿಹಾರ. ಅದೊಂದು ಪ್ರಪಂಚದಾದ್ಯಂತ ಲಕ್ಷಾಂತರ ಜನರಿಂದ ಸಾಕ್ಷೀಕರಿಸಲ್ಪಟ್ಟ ಉನ್ನತವಾದ ಕಾರ್ಯಾಗಾರವಾಗಿದೆ. ಆತ್ಮಾನಂದದ ವಾಸ್ತವಿಕತೆಯನ್ನು ಅನುಭವಿಸಲು ಇರುವ ಒಂದು ಖಚಿತವಾದ ಜೀವನ ಪರಿಹಾರ. ಅದೊಂದು ಪ್ರಪಂಚದಾದ್ಯಂತ ಲಕ್ಷಾಂತರ ಜನರಿಂದ ಸಾಕ್ಷೀಕರಿಸಲ್ಪಟ್ಟ ಉನ್ನತವಾದಕಾರ್ಯಾಗಾರವಾಗಿದೆ.

Content: LBP ಹಂತ 2 - ನಿತ್ಯಾನಂದ ಸ್ಫುರಣ ಪ್ರೋಗ್ರಾಂ ಸಾವಿನ ರಹಸ್ಯದ ಭೇದನಲೆ

Content: ಸಾವಿನ ಕಲ್ಪನೆಯ ಗಹನತೆಯನ್ನು ನಿವಾರಿಸಿ ಜೀವನದ ಕಲೆಯನ್ನು ಬಿಡುಗಡೆ ಗೊಳಿಸುವ ಒಂದು ಕಾರ್ಯಕ್ರಮ. ಸಾವಿನ ಉದ್ದೇಶ ಹಾಗೂ ಕ್ರಮವು ನಿಮಗೆ ತಿಳಿದಿದ್ದರೆ, ನಿಮ್ಮ ಜೀವನವನ್ನು ಪೂರ್ಣವಾಗಿ ಬೇರೆಯದೇ ರೀತಿಯಲ್ಲಿ ಜೀವಿಸು!ಇರಿ ! ಅದು ಆಳವಾಗಿ ಬೇರೂರಿದ ಮತ್ತು ಪ್ರಜ್ಞಾರಹಿತ ಮನೋಭಾವನೆಗಳಿಂದ ಬೇರ್ಪಡಿಸಲು ಜಾಗೃತವನ್ನು ಸೃಷ್ಟಿಸುತ್ತದೆ. ಇವೆಲ್ಲವೂ ಅಂತಿಮವಾದ ಸಾವಿನ ಭಯದಿಂದ ಹುಟ್ಟಿರುವಂತಹವು. ಸ್ವಾಭಾವಿಕ ಬುದ್ಧಿ ಮತ್ತು ಸ್ವಯಂ ಸ್ಫೂರ್ತಿದಾಯಕವಾದ ಉತ್ಸಾಹದಿಂದ ನಡೆಸಲ್ಪಡುವ ಒಂದು ನವ ಜೀವನಕ್ಕೆ ಇದು ಹೆಬ್ಬಾಗಿಲು.

Content: LBP ಹಂತ 3 - ಆತ್ಮ ಸ್ಫುರಣ ಪ್ರೋಗ್ರಾಂ/ಧ್ಯಾನ ಸ್ಫುರಣ ಪ್ರೋಗ್ರಾಂ ನೀವು ನಿಮ್ಮೊಂದಿಗೆ ಸಂಪರ್ಕವನ್ನು ಹೊಂದಿರಿ

Content: ಇದೊಂದು ರಹಸ್ಯಗಳನ್ನು ಭೇದಿಸಬಲ್ಲಂತಹ ಕಾರ್ಯಕ್ರಮವಾಗಿದ್ದು ಮನಸ್ಸಿನ ಕಾರ್ಯಗಳನ್ನು

Page 32

Content: ಬುದ್ಧಿವಂತಿಕೆ ಮತ್ತು ಅಂತಿಮವಾಗಿ ಪರಮಾನಂದಕ್ಕೆ ನಿಮ್ಮನ್ನು ಮೇಲೇತ್ತಲು ಒಂದು ಖಚಿತವಾದ ಪರಿಹಾರ.

Content: ಲೈಫ್ ಬ್ಲಿಸ್ ಟೆಕ್ನಾಲಜಿ (LBT)

Content: LBT ಯು 18 ರಿಂದ 30 ವರ್ಷದೊಳಗಿನ ಯುವಜನಾಂಗಕ್ಕಾಗಿ ಇರುವ ಒಂದು ವರ್ಷದ ಅವಧಿಯ ನಿವಾಸಿತ ಕಾರ್ಯಕ್ರಮ. ಇದು ಆಧ್ಯಾತ್ಮಿಕ ವ್ಯವಸ್ಥೆಯಾದ ವೇದೀಯ ಶಿಕ್ಷಣದಲ್ಲಿ ಅವರ ಬೇರುಗಳು ಇದು ಈ ಕಾರ್ಯಕ್ರಮವು ಆಧುನಿಕ ಯುವಜನಾಂಗಕ್ಕೆ ಒಳ್ಳೆಯ ದೈಹಿಕ, ಮಾನಸಿಕ ಮತ್ತು ಮನೋಭಾವನೆಗಳ ಆರೋಗ್ಯದಿಂದ ಶಕ್ತೀರಿಸಲು ವಿನ್ಯಾಸಗೊಳಿಸಲಾಗಿದೆ.

Content: ಅವರ ಸೃಜನಾತ್ಮಕ ಬುದ್ಧಿವಂತಿಕೆ ಮತ್ತು ಸ್ವಯಂ ಸ್ಫೂರ್ತಿಯನ್ನು ಪೋಷಿಸುವುದರ ಮೂಲಕ, ಮತ್ತು ವ್ಯತ್ತಿಯ ಕೌಶಲ್ಯವನ್ನು ನೀಡುವ ಮೂಲಕ, ಆರ್ಥಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಸ್ವಯಂ ಪೂರ್ಣರಾದ ಯುವಕರನ್ನು ಸೃಷ್ಟಿಸುತ್ತದೆ.

Content: ಎಲ್ಲಕ್ಕಿಂತ ಮಿಗಿಲಾಗಿ ಇದು ಜ್ಞಾನೋದಯ ಹೊಂದಿದ ಗುರುಗಳೊಬ್ಬರ ಪಾಲನೆಯಲ್ಲಿ ಇದು ಕಲಿಯಬಹುದಾದಂತಹ ಜೀವಿತಕಾಲದ ಒಂದು ಸದವಕಾಶವನ್ನು ನೀಡುತ್ತದೆ.

Page 33

Content: ನಮ್ಮನ್ನು ಸಂಪರ್ಕಿಸಲು:

Content: USA

Content: ನಿತ್ಯಾನಂದ ಧ್ಯಾನ ಪೀಠಂ

Content: ಮಾಂಟ್‌ಕ್ಲೇರ್

Content: CA 91763

Content: USA

Content: ಫೋನ್ : 626 531 6065

Content: E-mail : [email protected].

Content: URL : www.lifebliss.org

Content: ಭಾರತ :

Content: ನಿತ್ಯಾನಂದ ಧ್ಯಾನ ಪೀಠಂ

Content: ನಿತ್ಯಾನಂದ ಪುರಿ, ಕಲುಗೋಪ ಹಳ್ಳಿ

Content: ಮೈಸೂರು ರಸ್ತೆ ಬಿಡದಿ, ಬೆಂಗಳೂರು - 562 109.

Content: ಕರ್ನಾಟಕ. ಭಾರತ

Content: ಆಶ್ರಮ : 91-80-65591844, 27202084

Content: Fax: 91 +80 27288207

Content: Email: [email protected]

Content: URL: www.dhyanapeetam.org

Content: ಪ್ರಪಂಚದ ಇತರ ಆಶ್ರಮಗಳು ಮತ್ತು ಕೇಂದ್ರಗಳಿಗಾಗಿ,

Content: www.dhyanapeetam.org ಗೆ ಭೇಟಿ ಕೊಡಿ.

Page 34

Content: ಓದನ್ನು ಮುಂದುವರಿಸಲು ಸೂಚಿತ ಪುಸ್ತಕಗಳು

Content: ಸರಳವಾದ ಸತ್ಯ, ನೇರವಾಗಿ!

Content: ಚಿಂತೆಯಿಂದ ಚಿಂತನೆಗೆ

Content: ತೆರೆ ಬಾಗಿಲು.... ತಂಗಾಳಿ ಒಳಗೆ ಬೀಸಲಿ!

Content: ನಮ್ಮ ಜೀವನದಲ್ಲಿ ಆಧ್ಯಾತ್ಮಿಕತೆಯು ಸಮಂಜಸವೇ?

Content: ಪ್ರೀತಿಯ ಅನ್ವೇಷಣೆ

Content: ನಿಮ್ಮ ಪ್ರಶ್ನೆಗಳಿಗೆ ಉತ್ತರ

Content: ಖಚಿತ ಪರಿಹಾರಗಳು

Content: ನಿತ್ಯ ಧ್ಯಾನ

Content: ಅವರ ಹೆಸರು ನಿತ್ಯಾನಂದ

Page 35

Content: 'ನೋವು ಎನ್ನುವುದು ಕೇವಲ ನೀವು ಯಾವುದೇ ಸಂದರ್ಭಕ್ಕೆ ಆರಿಸಿಕೊಂಡಿರುವ ಪ್ರತಿಕ್ರಿಯೆ! - ಪರಮಹಂಸ ನಿತ್ಯಾನಂದ

Content: Ebook ISBN: 979-8-88572-472-2

Content: ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ (NVSU) ಮುದ್ರಣಾಲಯದಿಂದ ಪ್ರಕಟಿತ

Content: (ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ, ಯು.ಎಸ್.ಎ.ಯ ಒಂದು ವಿಭಾಗ)